DUSU ಸೋಲು; ರಾಹುಲ್ ಗಾಂಧಿ ಮಹತ್ವದ ಸಭೆ, RSS ಎದುರಿಸಲು ಹೊಸ ಪ್ಲ್ಯಾನ್? | DUSU Election

ಡಿಯುಎಸ್‌ಯು ಚುನಾವಣೆಯಲ್ಲಿ ಎನ್‌ಎಸ್‌ಯುಐಗೆ ಹಿನ್ನಡೆಯಾದ ಬೆನ್ನಲ್ಲೇ ರಾಹುಲ್ ಗಾಂಧಿ, ಕನ್ನಯ್ಯ ಕುಮಾರ್ ಹಾಗೂ ವಿನೋದ್ ಜಾಖರ್‌ ಜೊತೆ ಸಭೆ ನಡೆಸಿದ್ದಾರೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.
Defeat in Delhi University Students' Union election
ದೆಹಲಿ ವಿವಿ ವಿದ್ಯಾರ್ಥಿ ಸಂಘ ಚುನಾವಣೆ ಸೋಲಿ ಬೆನ್ನಲ್ಲೇ ರಾಹುಲ್ ಗಾಂಧಿ ಸಭೆ
Published on: 
Summary

ಡಿಯುಎಸ್​ಯು ಚುನಾವಣೆಯಲ್ಲಿ ಎನ್‌ಎಸ್‌ಯುಐಗೆ ಕೈತಪ್ಪಿದ ಪ್ರಮುಖ ಹುದ್ದೆ

ನಾಲ್ಕು ಪ್ರಮುಖ ಹುದ್ದೆಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದ ಎಬಿವಿಪಿ

ಕನ್ನಯ್ಯ ಕುಮಾರ್, ವಿನೋದ್ ಜಾಖರ್‌ ಜೊತೆ ರಾಹುಲ್ ಗಾಂಧಿ ಸಭೆ

Delhi University Students Unio: ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ (DUSU) ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (NSUI) ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, NSUI ಅಧ್ಯಕ್ಷ ವಿನೋದ್ ಜಾಖರ್ ಹಾಗೂ ಕನ್ನಯ್ಯ ಕುಮಾರ್ ಅವರೊಂದಿಗೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಚುನಾವಣಾ ಫಲಿತಾಂಶದ ವರದಿ ಪಡೆದ ರಾಹುಲ್ ಗಾಂಧಿ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೆಚ್ಚಿಸುವಂತೆ ಒತ್ತಿ ಹೇಳಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪ್ರಭಾವವನ್ನು ಎದುರಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಡಿಯುಎಸ್​ಯುನ ನಾಲ್ಕು ಪ್ರಮುಖ ಹುದ್ದೆಗಳ ಪೈಕಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮೂರು ಹುದ್ದೆಗಳನ್ನು ಗೆದ್ದಿದೆ. ಎನ್‌ಎಸ್‌ಯುಐ ಯಾವುದೇ ಪ್ರಮುಖ ಹುದ್ದೆ ಗೆದ್ದಿಲ್ಲ. ಉಪಾಧ್ಯಕ್ಷ ಸ್ಥಾನವನ್ನು ಎನ್‌ಎಸ್‌ಯುಐನಿಂದ ಬೇರ್ಪಟ್ಟು ಸ್ವತಂತ್ರವಾಗಿ ಸ್ಪರ್ಧಿಸಿದ್ದ ದೀಪಾಂಶು ಶೌಕೀನ್ ಗೆದ್ದಿದ್ದಾರೆ.

ರಾಜಸ್ಥಾನದ ಆದಿವಾಸಿ ವಿದ್ಯಾರ್ಥಿ ವಿಜಯ್ ಶಂಕರ್ ಮೀನಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ ನಿರ್ಧಾರವನ್ನು ರಾಹುಲ್ ಗಾಂಧಿ ಮೆಚ್ಚಿದ್ದಾರೆ ಎಂದು ವರದಿಯಾಗಿದೆ. ಕಡಿಮೆ ಪ್ರಚಾರದ ನಡುವೆಯೂ ಮೀನಾ 22,523 ಮತಗಳನ್ನು ಪಡೆದಿದ್ದರು.

ಇದನ್ನೂ ಓದಿ: ‘12-13 ವರ್ಷದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಖಾತೆ ಹೇಗೆ?’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಚಾಟಿ | Social Media Ban for Minors

ವಿನೋದ್ ಜಾಖರ್ ಪ್ರಕಾರ, ಸಂಘಟನೆ ಬಲಪಡಿಸುವುದು ಹಾಗೂ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೆಚ್ಚಿಸುವುದೇ ಸಭೆಯ ಪ್ರಮುಖ ಚರ್ಚೆಯಾಗಿತ್ತು. ವಿಶ್ವವಿದ್ಯಾಲಯಗಳಲ್ಲಿನ ಶಿಕ್ಷಣದ ಗುಣಮಟ್ಟದ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುವಂತೆ ಚರ್ಚಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net