ಶೀಘ್ರವೇ ದಸರಾ ಖರ್ಚು-ವೆಚ್ಚ ಆಡಿಟ್

HC-Mahadevappa
Published on

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆತಿದ್ದು, ದಸರಾಗೆ ಎಷ್ಟು ಖರ್ಚು-ವೆಚ್ಚವಾಯಿತು ಎನ್ನುವುದಕ್ಕೆ ಶೀಘ್ರವೇ ಆಡಿಟ್ ಮಾಡಿ ಲೆಕ್ಕ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ದಸರಾ ಹಬ್ಬ ಸಾಮರಸ್ಯ ಬೆಸೆದು, ಸಮುದಾಯಗಳ ಸಮ್ಮಿಲನದ ಸಾಮಾಜಿಕ ಸಂದೇಶವನ್ನು ದೇಶಕ್ಕೆ ರವಾನಿಸಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ನಾಡಹಬ್ಬ ಯಶಸ್ವಿಗೊಳಿಸಿದ್ದಾರೆ. ಈ ಬಾರಿ ಜಂಬೂಸವಾರಿಯನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ. ಪ್ರವಾಸೋದ್ಯಮ ಹಾಗೂ ವ್ಯಾಪಾರ ವಹಿವಾಟಿಗೂ ದಸರೆ ಲಾಭ ತಂದುಕೊಟ್ಟಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ ಪ್ರವಾಸೋದ್ಯಮ ಲಾಭದಾಯಕವಾಗಿತ್ತು ಎಂಬುದನ್ನು ಕೇಳಿ ಖುಷಿ ಆಯಿತು. ಹೋಟೆಲ್ ಉದ್ಯಮದಲ್ಲಿ ಅಂದಾಜು 100 ಕೋಟಿ ರೂ. ವಹಿವಾಟು ನಡೆದಿದೆ. ಕಾನೂನು ಸುವ್ಯವಸ್ಥೆಗೆ ಎಲ್ಲೂ ಧಕ್ಕೆ ಆಗಲಿಲ್ಲ. ದಸರೆಯ 19 ಸಮಿತಿಯವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ದಸರಾ ಮಹೋತ್ಸವ ಆಚರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net