ದುರ್ಗಾ ದೇವಿ ದರ್ಶನಕ್ಕೆ ಚಪ್ಪಲಿ ಧರಿಸಿದ ರಾಣಿ ಮುಖರ್ಜಿ; ಫ್ಯಾಷನ್​​ ಶೋ ಬಿಡಮ್ಮ ಎಂದ ನೆಟ್ಟಿಗರು..!

rani mix
Published on

Rani Mukharjee Video Viral: ಬಾಲಿವುಡ್‌ ಖ್ಯಾತ ನಟಿ ರಾಣಿ ಮುಖರ್ಜಿ ದುರ್ಗಾ ದೇವಿ ಪೂಜೆಯ ವೇಳೆ ಪಾದರಕ್ಷೆಯನ್ನು ತೆಗೆಯದೆ ದರ್ಶನ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.


ಮುಖರ್ಜಿ ಕುಟುಂಬದವರು ಆಯೋಜಿಸಿದ ದುರ್ಗಾ ದೇವಿ ಪೂಜೆಯಲ್ಲಿ, ದೇವಿಯ ದರ್ಶನ ಪಡೆಯಲು ಬಾಲಿವುಡ್‌ನ ಹಲವಾರು ನಟ-ನಟಿಯರು ತಮ್ಮ ಫ್ಯಾಮಿಲಿ ಸಮೇತ ಆಗಮಿಸಿದ್ದು, ರಾಣಿ ವೇದಿಕೆ ಮೇಲೆ ಬಂದು ಮೊಬೈಲ್‌ನಲ್ಲಿ ದೇವಿಯ ಫೋಟೋ ತೆಗೆಯುತ್ತಿರುವ ಧೃಶ್ಯ ವೈರಲ್‌ ವಿಡಿಯೋದಲ್ಲಿದೆ.


ರಾಣಿ ಮುಖರ್ಜಿ, ನವರಾತ್ರಿಯ ಅಂಗವಾಗಿ ದುರ್ಗಾ ದೇವಿಯ ದರ್ಶನ ಪಡೆಯುವುದಕ್ಕಾಗಿ ತೆರಳಿದ್ದರು. ದುರ್ಗಾ ದೇವಿಯ ಪೂಜೆಯಲ್ಲಿ ಭಾಗಿಯಾಗಲು ತೆರಳಿದ್ದವರು ಪ್ರತಿ ವರ್ಷ ಮುಖರ್ಜಿ ಕುಟುಂಬ ಸದಸ್ಯರು, ಉತ್ತರ ಮುಂಬೈನ ಸರ್ವೋಜನಿನ್ ದುರ್ಗಾ ಪೂಜೆಯ ಉತ್ಸವದಲ್ಲಿ ಎಲ್ಲರೂ ಭಾಗಿಯಾಗಿರುತ್ತಾರೆ.


ಈ ಬಾರಿ ನಟ ಅಯಾನ್ ಮುಖರ್ಜಿ ಅವರ ತಂದೆ ಮತ್ತು ನಟಿ ಕಾಜೋಲ್ ಅವರ ಚಿಕ್ಕಪ್ಪ ದೇಬ್ ಮುಖರ್ಜಿ ಅವರು ಪೂಜೆಯ ಕಾರ್ಯಕ್ರವನ್ನು ಆಯೋಜಿಸಿದ್ದು, ಕಾಜೋಲ್ ಮತ್ತು ರಾಣಿ ಮುಖರ್ಜಿ ಸಹ ಪೂಜೆಯಲ್ಲಿ ಪಾಲುಗೊಂಡಿದ್ದರು.


ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ, ನಟಿ ತನ್ನ ಪಾದರಕ್ಷೆಗಳನ್ನು ತೆಗೆಯದೆ ಮಂಟಪಕ್ಕೆ ಹೋಗಿ ದುರ್ಗಾ ದೇವಿಯ ದರ್ಶನ ಪಡೆದಿದ್ದಾರೆ.


ಸದ್ಯ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿನಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ನಾನಾ ಪ್ರತಿಕರಿಯೆ ನೀಡುತ್ತಿದ್ದಾರೆ. ನೀವು ಚಪ್ಪಲಿ ತೆಗೆದು ದೇವಿಯ ದರ್ಶನ ಪಡೆಯಿರಿ, ನೀವು ದೇವಿಗಿಂತ ದೊಡ್ಡವರೇನು ಅಲ್ಲ ಎಂದು ಸಾಕಷ್ಟು ಮಂದಿ ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net