'ಸಲಾರ್'​ vs 'ಡಂಕಿ': ಬಾಕ್ಸ್​ ಆಫೀಸ್​ನಲ್ಲಿ ಯಾರು ಮೇಲುಗೈ? ಇಲ್ಲಿದೆ ಕಂಪ್ಲೀಟ್​ ಡಿಟೇಲ್ಸ್​

ವಿಜಯವಾಣಿ - 2023-12-27T122943.143
Published on

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಬಿಡುಗಡೆಗೂ ಮುನ್ನವೇ ಭಾರೀ ಪೈಪೋಟಿ ಹುಟ್ಟುಹಾಕಿದ್ದ ಪ್ರಭಾಸ್​ ನಟನೆಯ 'ಸಲಾರ್​' ಹಾಗೂ ಶಾರುಖ್ ಖಾನ್ ಅಭಿನಯದ 'ಡಂಕಿ' ಸಿನಿಮಾ ಚಿತ್ರಮಂದಿರಕ್ಕೆ ಒಂದು ದಿನದ ಆಸುಪಾಸಿನಲ್ಲಿ ತೆರೆಗೆ ಅಪ್ಪಳಿಸಿತು. ಒಂದೆಡೆ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಂಡ ಸಲಾರ್​ ಜತೆಗೆ ಡಂಕಿ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಫೈಟ್​ ಕೊಡುತ್ತಿದೆ. ಎರಡು ಚಿತ್ರಗಳು ಬೇರೆ ಬೇರೆ ಜಾನರ್​ ಆಗಿದ್ದರೂ ಸಿನಿಪ್ರೇಕ್ಷಕರನ್ನು ಹಿಡಿದುಕೊಟ್ಟುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ ಈ ಎರಡು ಸಿನಿಮಾಗಳು ಇಲ್ಲಿಯವರೆಗೆ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದೆಷ್ಟು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್​ ಭಾಗ 1'ರ ಚಿತ್ರವು ರಿಲೀಸ್ ಆಗಿ ಇಂದಿಗೆ ಐದು ದಿನಗಳು ಕಳೆದಿದ್ದು, ಕೇವಲ ಭಾರತದಲ್ಲಿ 275 ಕೋಟಿ ರೂ. ಗಳಿಕೆಯನ್ನು ಮೀರಿ ಮುನ್ನುಗ್ಗುತ್ತಿದೆ. ಆ್ಯಕ್ಷನ್ ಜಾನರ್​ನ ಈ ಚಿತ್ರವು ಜಾಗತಿಕವಾಗಿ 450 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಿಡುಗಡೆಗೊಂಡ ಮೊದಲ ದಿನವೇ 176.52 ಕೋಟಿ ರೂ. ಕಂಡ ಸಲಾರ್, ಎರಡನೇ ದಿನಕ್ಕೆ 101.39 ಕೋಟಿ, ಮೂರನೇ ದಿನ 95.24 ಕೋಟಿ ಮತ್ತು ನಾಲ್ಕನೇ ದಿನ 76.91 ಕೋಟಿ ರೂ. ಗಳಿಸಿದೆ. ಐದನೇ ದಿನದ ಗಳಿಕೆ ಕುರಿತಾದ ಇದೀಗ ಹೊಸ ಅಪ್ಡೇಟ್​ಗಾಗಿ ನಿರೀಕ್ಷಿಸಲಾಗಿದೆ.

ಈ ಮೂಲಕ 'ಸಲಾರ್'​ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುತ್ತಿದ್ದು, ಇದೀಗ 500 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ. ಇನ್ನು ಪ್ರಭಾಸ್​ ಚಿತ್ರ ಬಿಡುಗಡೆಗೊಳ್ಳುವ ಒಂದು ದಿನ ಮುಂಚಿತವಾಗಿಯೇ ರಿಲೀಸ್ ಆದ ರಾಜ್​ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಚಿತ್ರವು ಕೂಡ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆಯನ್ನು ಕಂಡಿದೆ. ಅದರ ವಿವರ ಹೀಗಿದೆ.

ಡಿ.21 ರಂದು ಬಿಡುಗಡೆಗೊಂಡ 'ಡಂಕಿ', ಐದನೇ ದಿನಕ್ಕೆ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ​ 250 ಕೋಟಿ ರೂ. ಲಾಭ ಗಳಿಸಿದ್ದು, ಮೊದಲ ದಿನ 57.43 ಕೋಟಿ ರೂ., ಎರಡನೇ ದಿನ 45.10 ಕೋಟಿ ರೂ., ಮೂರನೇ ದಿನ 49.71 ಕೋಟಿ ರೂ., ನಾಲ್ಕನೇ ದಿನಕ್ಕೆ 52.78 ಕೋಟಿ ರೂ. ಮತ್ತು ಐದನೇ ದಿನಕ್ಕೆ 46.56 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಎರಡು ಸಿನಿಮಾಗಳು ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲಿ ಬಿರುಸಿನಿಂದ ಸಾಗುತ್ತಿದ್ದು, ಉತ್ತಮ ವಿಮರ್ಶೆಗಳನ್ನು ಕೂಡ ಪಡೆದುಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net