ರಾಹುಲ್ ಗಾಂಧಿ ನೇತೃತ್ವದಲ್ಲಿ ಜನವರಿ 14 ರಿಂದ 'ಭಾರತ ನ್ಯಾಯ ಯಾತ್ರೆ'! ಎಲ್ಲಿಂದ ಎಲ್ಲಿಯವರೆಗೆ?

ವಿಜಯವಾಣಿ - 2023-12-27T113036.595
Published on

ಹೊಸದಿಲ್ಲಿ: ಈ ಹಿಂದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಸಲಾಗಿತ್ತು. ಇದೀಗ ಅದರ ಎರಡನೇ ಆವೃತ್ತಿ ಭಾರತ್ ನ್ಯಾಯ ಯಾತ್ರೆಯನ್ನು 2024ರ ಜನವರಿ 14ರಿಂದ ಪ್ರಾರಂಭಿಸಲಾಗುವುದು ಎಂದು ಕಾಂಗ್ರೆಸ್​ ತಿಳಿಸಿದೆ.

'ಭಾರತ್ ಜೋಡೋ ಯಾತ್ರೆ' ಎಂಬ ಹೆಸರನ್ನು ಇದೀಗ ಮರುನಾಮಕರಣ ಮಾಡಲಾಗಿದ್ದು, ಈ ಜಾಥಾವನ್ನು ಭಾರತ್​ ನ್ಯಾಯ ಯಾತ್ರೆ ಎಂದು ಕರೆಯಲಾಗಿದೆ. ಈಶಾನ್ಯ ಭಾರತದ ಮಣಿಪುರದಿಂದ ಆರಂಭಗೊಂಡು ಪೂರ್ವದಿಂದ ಪಶ್ಚಿಮದವರೆಗೆ ಸಾಗಲಿದೆ.

ರಾಹುಲ್ ಗಾಂಧಿಯವರ ಭಾರತ್ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ 14 ರಾಜ್ಯಗಳ 85 ಜಿಲ್ಲೆಗಳು ಈ ವ್ಯಾಪ್ತಿಗೆ ಬರಲಿವೆ. ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ 6,200 ಕಿಲೋಮೀಟರ್‌ಗಳ ಮೆರವಣಿಗೆಯನ್ನು ಕಾಂಗ್ರೆಸ್​ ನಡೆಸಲಿದೆ. ಪಕ್ಷದ ರಾಷ್ಟ್ರಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಜನವರಿ 14 ರಂದು ಮಣಿಪುರದಿಂದ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net