ಇವನು ಫೈಟರ್​ ಅಂದ್ರು, ನಾಶ ಮಾಡೋಕೆ ಪ್ರಯತ್ನಿಸಿದ್ರು; ನಟ ದುನಿಯಾ ವಿಜಯ್​ ಹೇಳಿದ್ಯಾರಿಗೆ?

Untitled design - 2023-10-02T145407.299
Published on

ಬೆಂಗಳೂರು: ಅಂದು 'ದುನಿಯಾ' ಇಂದು 'ಸಲಗ' ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿರುವ ನಟ ದುನಿಯಾ ವಿಜಯ್​, ಇತ್ತೀಚೆಗೆ ವಿನೋದ್ ಪ್ರಭಾಕರ್ ಅಭಿನಯದ 'ಫೈಟರ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ವೇದಿಕೆಯ ಮೇಲೆ ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ.

'ಸಲಗ' ಮೂಲಕ ಮತ್ತೊಮ್ಮೆ ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​ ಮಾಡಿದ ದುನಿಯಾ ವಿಜಯ್​, ಟೈಗರ್​ ಪ್ರಭಾಕರ್​ ಅವರ ಪುತ್ರ ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿತ್ರಕ್ಕೆ ಬೆಂಬಲ ಸೂಚಿಸಲು ಈವೆಂಟ್​ಗೆ ಆಗಮಿಸಿದ್ದ ವಿಜಯ್​ ವೇದಿಕೆಯ ಮೇಲೆ ಮಾತನಾಡಿದ್ದು, ಚಿತ್ರರಂಗಕ್ಕೆ ಬಂದಾಗ ತಾವು ಅನುಭವಿಸಿದ ಕೆಲವು ಕಷ್ಟಕರ ಸಂಗತಿಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.

ನಾನೊಬ್ಬ ಫೈಟರ್​ ಎಂದು ಕಡೆಗಣಿಸಲಾಗಿತ್ತು. ನನ್ನನ್ನು ನಾಶ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದರು ಎಂದು ಅಚ್ಚರಿ ಹೇಳಿಯೊಂದನ್ನು ನೀಡಿದ್ದಾರೆ. "ಫೈಟರ್ ಎಂದು ಕರೆದರು, ನೋಡುವುದಕ್ಕೆ ಕಪ್ಪು ಎಂದರು, ನಾಶ ಮಾಡೋಕೆ ಪ್ರಯತ್ನಿಸಿದರು" ಎಂದು ಹೇಳಿದರು.

"ದುನಿಯಾ ಸಿನಿಮಾ ಬಂದ ನಂತರವೂ ಹೇಳಿದರೂ, ಅವನೊಬ್ಬ ಫೈಟರ್ ಏನು ಮಾಡುತ್ತಾನೋ ನೋಡೋಣ ಅಂದರು. ಫೈಟಿಂಗ್ ಯಾವಾಗಲೂ ಮುಖ್ಯ. ಜೀವನದಲ್ಲಿ ಹೋರಾಟ ಮಾಡುತ್ತಲೇ ಇರಿ. ಯಾವತ್ತಿಗೂ ಬಿಡಬೇಡಿ. ಒಂದು ಹೊಡೆದಾಗ ಇನ್ನೊಂದು ಎದ್ದು ನಿಲ್ಲುತ್ತಿರಬೇಕು. ಆಗ ಮಾತ್ರ ಚಿತ್ರರಂಗದಲ್ಲಿ ನಿಲ್ಲುವುದಕ್ಕೆ ಸಾಧ್ಯ" ಎಂದು ವಿಜಯ್ ಹೇಳಿದ್ದಾರೆ.

ನಟ ಈ ರೀತಿ ಹೇಳಿಕೆ ನೀಡಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಲವರಿಗೆ ಅಚ್ಚರಿ ಮೂಡಿಸಿದೆ. ಈ ಹೇಳಿಕೆಗಳು ಉದ್ದೇಶಪೂರ್ವಕಾಗಿ ಯಾರಿಗಾದರೂ ಹೇಳಿದ್ರಾ? ಎಂಬ ಪ್ರಶ್ನೆಗೆ ಸದ್ಯ ಉತ್ತರ ದೊರೆತಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net