ದುಂಡಳ್ಳಿ ಗ್ರಾಪಂನಿಂದ ಸ್ವಚ್ಛತಾಗಾರರಿಗೆ ಸನ್ಮಾನ

2ss1sanmana
ಗಾಂಧಿ ಜಯಂತಿ ಪ್ರಯುಕ್ತ ದುಂಡಳ್ಳಿ ಗ್ರಾಪಂ ಸ್ವಚ್ಛತಾಗಾರರಾದ ಶಿವಾಜಿ ಮತ್ತು ಭರತ್ ನಾಯ್ಕ ಅವರನ್ನು ತಾಪಂ ಇಒ ಪರಮೇಶ್ ಸನ್ಮಾನಿಸಿದರು. ಭವಾನಿ, ಭೋಜಪ್ಪ, ಭಾಗ್ಯಾ, ದೇವರಾಜ್ ಮುಂತಾದವರಿದ್ದರು.
Published on

ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಪಂ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ ಮತ್ತು ಗಾಂಧಿ ಜಯಂತಿ ಪ್ರಯುಕ್ತ ಗುರುವಾರ ಸ್ವಚ್ಛತಾಗಾರರಾದ ಶಿವಾಜಿ ಮತ್ತು ಭರತ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಸನ್ಮಾನಿಸಿದರು. ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಭವಾನಿ ಗುರುಪ್ರಸನ್ನ, ಸದಸ್ಯರಾದ ಡಿ.ಬಿ.ಬೋಜಪ್ಪ, ಸಿ.ಜೆ.ಗಿರೀಶ್, ಎಸ್.ಪಿ.ಭಾಗ್ಯಾ, ಎಂ.ಡಿ.ದೇವರಾಜ್, ಜಾನಕಿ ಸುಬ್ರಮಣ್ಯ, ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ, ಗ್ರಾ.ಪಂ.ಸಿಬ್ಬಂದಿ ಪೂರ್ಣಿಮಾ, ರವಿ, ಹೇಮಂತ್, ಸಂಜಯ್, ಮಂಜುನಾಥ್, ವೀಣಾ, ಶ್ರೀದೇವಿ, ಭಾರತಿ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net