ದುಲ್ಕರ್ ಸಲ್ಮಾನ್ ಚಿತ್ರಕ್ಕೆ ಸಿಕ್ತು ಆಕರ್ಷಕ ಟೈಟಲ್!; ಕೂಲ್ ಆಗಿದೆ ಎಂದ ಫ್ಯಾನ್ಸ್

Untitled design - 2023-07-28T155741.658
Published on

ಕೇರಳ: 'ಮಹಾನಟಿ' ಮತ್ತು 'ಸೀತಾ ರಾಮಂ' ಚಿತ್ರದ ಮೂಲಕ ವ್ಯಾಪಕವಾಗಿ ಸಿನಿರಸಿಕರ ಮನಗೆದ್ದ ಮಲಯಾಳಂ ನಟ ದುಲ್ಕರ್ ಸಲ್ಮಾನ್, ಇದೀಗ ಹೊಸ ಸಿನಿಮಾದಲ್ಲಿ ಅಭಿನಯಿಸಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರಕ್ಕೆ ಆಕರ್ಷಕ ಟೈಟಲ್ ಲಭಿಸಿದ್ದು, ಅಭಿಮಾನಿಗಳು ಬಹಳ ಸರಳ, ಸುಂದರ ಶೀರ್ಷಿಕೆಯನ್ನು ಪಡೆದುಕೊಂಡಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೀತಾ ರಾಮಂ ರೋಮ್ಯಾಂಟಿಕ್​ ಚಿತ್ರದ ಬಳಿಕ ದುಲ್ಕರ್​ ಸಲ್ಮಾನ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದರು. ಇದೀಗ ಹೊಸ ಚಿತ್ರದ ಕುರಿತು ಹುಟ್ಟುಕೊಂಡಿದ್ದ ಸಸ್ಪೆನ್ಸ್ ಈಗ ಅಂತ್ಯಗೊಂಡಿದೆ. ಚಿತ್ರಕ್ಕೆ 'ಲಕ್ಕಿ ಬಾಸ್ಕರ್' ಎಂಬ ಆಕರ್ಷಕ ಟೈಟಲ್ ಅನ್ನು ಚಿತ್ರತಂಡ ಘೋಷಿಸಿದ್ದು, ಇದು ಸಲ್ಮಾನ್​ ಅವರ ಮೂರನೇ ತೆಲುಗು ಚಿತ್ರವಾಗಿದೆ.

'ಲಕ್ಕಿ ಬಾಸ್ಕರ್'​ ಚಿತ್ರದ ಪೋಸ್ಟರ್​ ಕೂಡ ಆಕರ್ಷಕವಾಗಿದ್ದು, 100 ರೂ. ನೋಟಿನ ಹಿಂದೆ ದುಲ್ಕರ್ ಸಲ್ಮಾನ್​ ನಗುತ್ತಿರುವ ಮುಖವನ್ನು ಅರ್ಧದಷ್ಟು ಮರೆಮಾಚಲಾಗಿದೆ. ಪೋಸ್ಟರ್​ ನೋಡಿದ ನಟನ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿದ್ದಾರೆ.

ನಿರ್ದೇಶಕ ವೆಂಕಿ ಅಟ್ಲೂರಿ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್‌ಟೈನ್‌ಮೆಂಟ್‌ನ ನಾಗ ವಂಶಿ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ನ ಸಾಯಿ ಸೌಜನ್ಯ ಸಹಭಾಗಿತ್ವದಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದೆ. ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net