ನನಗೆ ನಿದ್ದೆ ಬರುತ್ತಿಲ್ಲವೆಂದು ಕಣ್ಣೀರಿಟ್ಟ ನಟ ದುಲ್ಕರ್ ಸಲ್ಮಾನ್; ಭಾನುವಾರ ರಾತ್ರಿ ವಿಡಿಯೋ ಪೋಸ್ಟ್.. ತಕ್ಷಣ ಡಿಲೀಟ್

Dulquer Salmaan
Published on

ಹೈದರಾಬಾದ್​​: ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರ ಮಗ ದುಲ್ಕರ್ ಸಲ್ಮಾನ್ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿ ಹೆಸರು ಮಾಡಿದ್ದಾರೆ. ದುಲ್ಕರ್ ಅವರು ನಿನ್ನೆ ರಾತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಪೋಸ್ಟ್​​ ಡಿಲೀಟ್​​ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ..?: 'ಕೆಲವು ದಿನಗಳಿಂದ ನಿದ್ದೆ ಬರುತ್ತಿಲ್ಲ. ಸಂದರ್ಭಗಳು ಎಂದಿಗೂ ಒಂದೇ ರೀತಿ ಇರುವುದಿಲ್ಲ. ನಾನು ಮೊದಲ ಬಾರಿಗೆ ಈ ರೀತಿಯ ಅನುಭವವನ್ನು ಅನುಭವಿಸುತ್ತಿದ್ದೇನೆ. ನನ್ನ ಮನಸ್ಸಿನಿಂದ ಹೊರಬರಲು ಸಾಧ್ಯವಿಲ್ಲ. ನಾನು ಇನ್ನೂ ಏನಾದರೂ ಹೇಳಲು ಬಯಸುತ್ತೇನೆ. ಆದರೆ ನಾನು ಅದನ್ನು ಹೇಳಲಾರೆ ಎಂದು ಹೇಳುತ್ತಾ ದುಲ್ಕರ್ ಸಲ್ಮಾನ್ ಕಣ್ಣು ಒರೆಸಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ, ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಂತೆ ದುಲ್ಕರ್ ವಿಡಿಯೋವನ್ನು ತೆಗೆದಿದ್ದಾರೆ.

ದುಲ್ಕರ್‌ಗೆ ಏನಾಯಿತು? ಎಲ್ಲ ಸರಿಯಿದೆಯೇ? ನೀವು ಏನು ಹೇಳಬೇಕು ಅಂದುಕೊಂಡ್ರಿ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ. ಕೆಲವರು ಈ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಅಭಿಲಾಷ್ ಜೋಶಿ ನಿರ್ದೇಶನದ 'ಕಿಂಗ್ ಆಫ್ ಕೋಥಾ' ಸಿನಿಮಾದಲ್ಲಿ ದುಲ್ಕರ್ ನಟಿಸುತ್ತಿದ್ದಾರೆ. ಜೀ ಸ್ಟುಡಿಯೋಸ್ ಸಹಯೋಗದಲ್ಲಿ ದುಲ್ಕರ್ ತಮ್ಮ ಪ್ರೊಡಕ್ಷನ್ ಹೌಸ್ ವ್ಯಾಪೋರಿಯರ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net