ಏರಲಿದೆ ಡುಕಾಟಿ ಬೆಲೆ; ಕಾರಣ ಏನು?

dukati
Published on

ಬೆಂಗಳೂರು: ಅತೀ ವೇಗಕ್ಕೆ ಹೆಸರಾಗಿರುವ ಡುಕಾಟಿ, ಭಾರತದಲ್ಲಿ ಎಲ್ಲಾ ಮಾದರಿಯ ಬೈಕ್​ಗಳ ಬೆಲೆಯನ್ನು ಏರಿಸಲಿದೆ.

ಇಟಲಿ ಮೂಲದ ಸೂಪರ್‌ಬೈಕ್‌ಗಳ ತಯಾರಿಕಾ ಸಂಸ್ಥೆ ಡುಕಾಟಿ, ತನ್ನ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಮುಂಬರುವ ಜನವರಿ 1 ರಿಂದ ಭಾರತದಲ್ಲಿ ಎಲ್ಲಾ ಮಾಡೆಲ್​ನ ಬೈಕ್‌ಗಳ ಬೆಲೆ ಏರಿಸಲಾಗುವುದು ಎಂದು ಘೋಷಿಸಿದೆ.

ಆದರೆ ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಸಲಿದೆ ಎನ್ನುವ ಮಾಹಿತಿಯನ್ನು ಎಂದು ಡುಕಾಟಿ ಇನ್ನೂ ತಿಳಿಸಿಲ್ಲ. ಉತ್ಪಾದನಾ ವೆಚ್ಚ ಏರಿಕೆಯಿಂದ ಈ ಬೆಲೆ ಏರಿಕೆ ಅನಿವಾರ್ಯವಾಗಿದ್ದು ಎಕ್ಸ್ ಶೋರೂಂ ಬೆಲೆಗಳ ಏರಿಕೆ ಎಲ್ಲ ಮಾದರಿಗಳಿಗೆ ಅನ್ವಯಿಸಲಿದೆ ಎಂದು ತಿಳಿಸಿದೆ.

ಮುಂಬೈ, ನವದೆಹಲಿ, ಬೆಂಗಳೂರು, ಪುಣೆ, ಹೈದರಾಬಾದ್, ಕೋಲ್ಕತ್ತ, ಚೆನ್ನೈ, ಕೊಚ್ಚಿಯಲ್ಲಿ ಡುಕಾಟಿ ತನ್ನ ಶೋರೂಂಗಳನ್ನು ಹೊಂದಿದ್ದು ತನ್ನ ಮುಂಬರುವ ಎಲ್ಲ ಹೊಸ ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದು ಎಂದು ಡುಕಾಟಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net