ಈ ಕಾರಣದಿಂದ ಆಪರೇಷನ್​​ ಸಿಂಧೂರವನ್ನು ರಾತ್ರಿ 1 ಘಂಟೆಗೆ ನಡೆಸಲಾಯಿತು: ಮಹತ್ವದ ವಿಚಾರ ಬಹಿರಂಗ ಪಡಿಸಿದ ಸಿಡಿಎಸ್​ ಅನಿಲ್​ ಚೌಹಾಣ್​ | Operation Sindoor

CDS Anil Chauhan 26
Published on

Operation Sindoor : ನಾಗರಿಕರ ಸಾವುನೋವುಗಳನ್ನು ತಡೆಯುವ ಉದ್ದೇಶದಿಂದ ಮೇ7 ರಂದು ಆಪರೇಷನ್​ ಸಿಂಧೂರವನ್ನು ಉದ್ದೇಶಪೂರ್ವಕವಾಗಿ ಬೆಳಗಿನ ಜಾವ ಸುಮಾರು 1 ಗಂಟೆಗೆ ನಡೆಸಲು ಅಯ್ಕೆ ಮಾಡಿಕೊಂಡಿತು ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿಕೆ ನೀಡಿದ್ದಾರೆ.

ಗುರುವಾರ ನವದೆಹಲಿಯ ರಾಜಭವನದಲ್ಲಿ ನಡೆದ ಸಂವಾದದ ಸಮಯದಲ್ಲಿ ಜನರಲ್ ಚೌಹಾಣ್ ಮಾತನಾಡಿದ್ದು, 2019 ರಲ್ಲಿ ನಡೆದ ಬಾಲಕೋಟ್ ದಾಳಿಯ ವೇಳೆಯಲ್ಲಿನ ಯಾವುದೇ ಉಪಗ್ರಹ ಪುರಾವೆಗಳು ಲಭ್ಯವಿಲ್ಲ, ಮೇ 7 ರ ಮಧ್ಯರಾತ್ರಿ ದಾಳಿಯನ್ನು ನಿರ್ಧರಿಸಿದ್ದು, ಇಲ್ಲಿ ಬೆಳಗಿನ ಜಾವದ ನಮಾಜ್​ ಮಾಡುವ ಸಮಯವನ್ನು ತಪ್ಪಿಸುವುದರ ಸಲುವಾಗಿ ಈ ಯೋಜನೆ ಮಾಡಬೇಕಾಯಿತು. ಏಕೆಂದರೆ, ಆ ಸಮಯದಲ್ಲಿ ಅಲ್ಲಿನ ಅನೇಕ ನಾಗರಿಕರು ತೊಂದರೆಗೆ ಸಿಲುಕಬಹುದು ಎಂದು ಹೇಳಿದರು.

ಈ ಹಿಂದೆ ನಾವು ಬಾಲ್​ಕೋಟ್​ ಕಾರ್ಯಾಚರಣೆ ನಡೆಸಿದ್ದೆವು. ಆದರೆ, ನಮ್ಮ ಬಳಿ ಯಾವುದೇ ಚಿತ್ರಗಳು ಅಥವಾ ಫೊಟೋಗಳಿರಲಿಲ್ಲ. ಕತ್ತಲೆಯಲ್ಲಿ ಸಾಕ್ಷಿಗಳನ್ನು ಸಂಗ್ರಹಿಸುವುದು ಕಷ್ಟವಾಗಿದ್ದರೂ, ನಾವು ಆಪರೇಷನ್​ ಸಿಂಧೂರವನ್ನು ಎರಡು ಕಾರಣಗಳಿಗಾಗಿ ನಡೆಸಿದೆವು. ಮೊದಲನೆಯದಾಗಿ ನಾವು ಚಿತ್ರವನ್ನು ಸೆರೆಹಿಡಿಯಬಹುದು ಎಂಬ ವಿಶ್ವಾಸವಿತ್ತು. ಹಾಗೆಯೇ, ಅಲ್ಲಿನ ನಾಗರಿಕರ ಸಾವು ನೋವುಗಳಿಗೆ ದಕ್ಕೆ ತರಬಾರದು ಎಂಬ ಉದ್ದೇಶವಿತ್ತು ಎಂದು ತಿಳಿಸಿದರು.

ಈ ಆಪರೇಷನ್​ ನಡೆಸಲು ಉತ್ತಮ ಸಮಯ ಬೆಳಿಗ್ಗೆ 5:30 ಅಥವಾ 6 ಗಂಟೆ ಸರಿಯಾಗಿತ್ತು. ಆದರೆ,ಆ ಸಮಯದಲ್ಲೇ ಮೊದಲ ನಮಾಜ್​ ಆಗುವುದರಿಂದ ಇದು ಅಲ್ಲಿನ ನಾಗರಿಕರ ಜೀವಗಳಿಗೆ ತೊಂದರೆಯಾಗಬಹುದು ಎಂದು ಆ ನಿರ್ಧಾರವನ್ನು ಅಲ್ಲಿಯೇ ಕೈಬಿಟ್ಟೆವು ಎಂದು ಅವರು ಹೇಳಿದರು.

ಆಪರೇಷನ್​ ಸಿಂಧೂರ್​ ಅಡಿಯಲ್ಲಿ, ಪಾಕಿಸ್ತಾನದಲ್ಲಿ ಗುರುತಿಸಲ್ಪಟ್ಟ 9 ಭಯೋತ್ಪಾದಕರ ಮೇಲೆ ಮೊದಲ ದಾಳಿಯನ್ನು ಮೇ 7ರಂದು ಬೆಳಗಿನ ಜಾವ 1:30 ರ ಸಮಯಕ್ಕೆ ನಡೆಸಲಾಯಿತು. ಇದು ಪಹಲ್ಗಾಮ ದಾಳಿಯಲ್ಲಿ ಏಪ್ರಿಲ್​ 22 ರಂದು 26 ನಾಗರಿಕರು ಸಾವನ್ನಪ್ಪಿದ್ದು, ಈ ದಾಳಿಗೆ ಪ್ರತ್ಯತ್ತರವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ನಾಶಪಡಿಸಿದವು ಎಂದರು.

ಯುದ್ಧಕ್ಕೆ ನಾಂದಿ ಹಾಡಿತು

ಈ ಸಮಯದಲ್ಲಿ, ಆಪರೇಷನ್ ಸಿಂಧೂರ್ ಹೊಸ ರೀತಿಯ ಯುದ್ಧಕ್ಕೆ ನಾಂದಿ ಹಾಡಿತು. ಇದು ಸಾಂಪ್ರದಾಯಿಕ ಯುದ್ಧಕ್ಕಿಂತ ಭಿನ್ನವಾಗಿದ್ದು, ಇದನ್ನು ಭೂಮಿ, ಗಾಳಿ, ಸಮುದ್ರ, ವಿದ್ಯುತ್ಕಾಂತೀಯ ಸ್ಥಳ ಮತ್ತು ಸೈಬರ್ ಡೊಮೇನ್‌ಗಳಲ್ಲಿ ಹೋರಾಡಲಾಯಿತು. ಅಲ್ಲಿನ ಶತ್ರುಗಳನ್ನು ಕೃತಕ ಬುದ್ಧಿಮತೆ, ಉಪಗ್ರಹ ಹಾಗೂ ಎಲೆಕ್ಟ್ರಾನಿಕ್​ ಚಿತ್ರಗಳ ಮೂಲಕ ನೋಡಲಾಗುತ್ತಿತ್ತು ಎಂದು ತಿಳಿಸಿದರು.

ಇದು ಹೊಸ ರೀತಿಯ ಯುದ್ಧವಾಗಿತ್ತು... ಇಲ್ಲಿಯವರೆಗೆ, ನಾವು ಪ್ರದೇಶವನ್ನು ವಶಪಡಿಸಿಕೊಳ್ಳುವುದು, ನಾಶಪಡಿಸಿದ ಉಪಕರಣಗಳ ಸಂಖ್ಯೆ ಅಥವಾ ನೀವು ಸೆರೆಹಿಡಿದ ಯುದ್ಧ ಕೈದಿಗಳ ಸಂಖ್ಯೆ ಅಥವಾ ಅವರು ಇಲ್ಲಿಯವರೆಗೂ ಕೊಂದ ಸೈನಿಕರ ಸಂಖ್ಯೆಯ ವಿಷಯದಲ್ಲಿ ವಿಜಯವನ್ನು ಸಾಧಿಸಿದ್ದೇವೆ. ಈ ಯಶಸ್ಸಿಗೆ ಅಗತ್ಯವಾದ ಹೊಸ ತಂತ್ರಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net