7 ಆಯುಂ ಅರಿವು ಚಿತ್ರದ ಖಡಕ್​ ವಿಲನ್​ ಈಗ ಹೇಗಿದ್ದಾರೆ ಗೊತ್ತಾ? ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈಗಿನ ಫೋಟೋ! 7aum Arivu

7aum Arivu
Published on

7aum Arivu : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು? ಒಂದೆರೆಡು ಸಿನಿಮಾಗಳಲ್ಲಿ ನಟಿಸಿ, ಸಿಕ್ಕಾಪಟ್ಟೆ ಖ್ಯಾತಿ ಬಂದ ಬಳಿಕ ಸಿನಿಮಾ ರಂಗದಿಂದ ಕಣ್ಮರೆಯಾದ ಎಷ್ಟೋ ಮಂದಿ ಈಗ ಏನು ಮಾಡುತ್ತಿದ್ದಾರೆ ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ. ಇದು ಕೇವಲ ನಟ-ನಟಿಯರಿಗೆ ಮಾತ್ರವಲ್ಲ ಖಳನಾಯಕ ಹಾಗೂ ಪೋಷಕ ಕಲಾವಿದರಿಗೂ ಅನ್ವಯಿಸುತ್ತದೆ.

7 ಆಯುಂ ಅರಿವು ಸಿನಿಮಾವನ್ನು ನೀವು ನೋಡೇ ಇರುತ್ತೀರಿ. ಕಾಲಿವುಡ್​ ಸೂಪರ್​ ಸ್ಟಾರ್​ ಸೂರ್ಯ ನಟನೆಯ ಬ್ಲಾಕ್​ ಬಸ್ಟರ್​ ಸಿನಿಮಾ ಇದು. ಇದರಲ್ಲಿ ಶ್ರುತಿ ಹಾಸನ್​ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕನಷ್ಟೇ ಗಮನ ಸೆಳೆದ ಮತ್ತೊಂದು ಪಾತ್ರ ಎಂದರೆ ಅದರೆ, ಖಳನಾಯಕನ ಪಾತ್ರ. ಈ ಪಾತ್ರದಲ್ಲಿ ಮಿಂಚಿದ್ದು ಓರ್ವ ವಿದೇಶಿ ನಟ. ಅವರ ಹೆಸರೇ ಜಾನಿ ಟ್ರೈ ನ್ಗುಯೆನ್. ಅವರ ಇತ್ತೀಚಿನ ಫೋಟೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

7aum Arivu 2

ಅಂದಹಾಗೆ, 2011ರಲ್ಲಿ ಬಿಡುಗಡೆಯಾದ 7 ಆಯುಂ ಅರಿವು ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದರು. ವೈಜ್ಞಾನಿಕ ಪುರಾವೆಗಳೊಂದಿಗೆ ದಲಿತ ಸಂಸ್ಕೃತಿಯ ಮಹತ್ವವನ್ನು ಎತ್ತಿ ತೋರಿಸಿದ ಈ ಚಿತ್ರವು ಸಾರ್ವಜನಿಕರಿಂದ ಭಾರಿ ಪ್ರತಿಕ್ರಿಯೆಯನ್ನು ಪಡೆಯಿತು. ಜಾನಿ ಟ್ರೈ ನ್ಗುಯೆನ್ ಅವರು ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಖಳನಾಯಕ ಡಾಂಗ್​ ಲೀ ಪಾತ್ರವನ್ನು ನಿರ್ವಹಿಸಿದರು.

ಅಂದಹಾಗೆ, ಜಾನಿ ಟ್ರೈ ನ್ಗುಯೆನ್ ಅವರು ವಿಯೆಟ್ನಾಂ ಮೂಲದ ನಟ. 7 ಆಯುಂ ಅರಿವು ಚಿತ್ರದಲ್ಲಿ ಅವರ ಆಕ್ಷನ್ ಮತ್ತು ಸಮರ ಕಲೆಗಳ ಪ್ರದರ್ಶನಗಳು ಇಂದಿಗೂ ಜನರ ಮನಸ್ಸಿನಲ್ಲಿವೆ. ಈ ಚಿತ್ರದ ನಂತರ ಬಿಡುಗಡೆಯಾದ ಅಥರ್ವ ನಟಿಸಿದ ಇರುಂಬು ಕುಧೀರ ಚಿತ್ರದಲ್ಲಿ ಜಾನಿ ಟ್ರೈ ನ್ಗುಯೆನ್ ಕೂಡ ಖಳನಾಯಕನ ಪಾತ್ರದಲ್ಲಿ ನಟಿಸಿದರು. ಇದಾದ ಬಳಿಕ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳದ ನಟ ಜಾನಿ ಟ್ರೈ ನ್ಗುಯೆನ್ ಅವರ ಇತ್ತೀಚಿನ ಫೋಟೋ ಬಿಡುಗಡೆಯಾಗಿದ್ದು, ಪ್ರಸ್ತುತ ಇಂಟರ್ನೆಟ್‌ನಲ್ಲಿ ಅನೇಕರ ಗಮನ ಸೆಳೆಯುತ್ತಿದೆ.

7aum Arivu

ನಟ ಜಾನಿ ಟ್ರೈ ನ್ಗುಯೆನ್ ಅವರ ಇತ್ತೀಚಿನ ಫೋಟೋ ನೋಡಿದ ನೆಟ್ಟಿಗರು ಎಷ್ಟೊಂದು ಬದಲಾಗಿದ್ದಾರೆ ನೋಡಿ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ, ಈಗಲೂ ಅದೇ ಫಿಟ್​ನೆಸ್​ ಇದೆ. ಮೀಸೆ, ಗಡ್ಡ ಬಿಳಿಯಾಗಿರುವುದನ್ನು ಬಿಟ್ಟರೆ ನೋಡಲು ಈಗಲೂ ಯುವಕನಂತೆಯೇ ಕಾಣುತ್ತಿದ್ದಾರೆ ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ. ಈ ಫೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net