ಕುಡುಕರ ಸಂಖ್ಯೆ ಹೆಚ್ಚಾಗಿದ್ದಕ್ಕೆ ದಾವಣಗೆರೆ ಬಾರ್​ವೊಂದಕ್ಕೆ ಬಿತ್ತು ಬೀಗ…!

Due to the high number of drunkards a bar in Davangere was closed
Published on

ದಾವಣಗೆರೆ: ಮನುಷ್ಯನ ಜೀವನಶೈಲಿ ಬದಲಾದಂತೆ ಪಾರ್ಟಿ, ಪಬ್ ಮೊದಲಾದ ಸಂಸ್ಕೃತಿ ಹೆಚ್ಚಾಗ್ತಿದೆ. ಹೀಗಾಗಿಯೇ ಡ್ರಿಂಕ್ಸ್ ಮಾಡುವವರ ಸಂಖ್ಯೆ ಬದಲಾಗುತ್ತಿದೆ. ಕುಡುಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಬಾರ್​ವೊಂದಕ್ಕೆ ಬೀಗ ಹಾಕಲಾಗಿದೆ.

ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ತರಗನಹಳ್ಳಿ ಗ್ರಾಮ ಗ್ರಾಮದಲ್ಲಿ ಘಟನೆ ನಡೆದಿದೆ. ಮದ್ಯದಂಗಡಿಯಿಂದ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿದೆ ಎಂದು ಗ್ರಾಮದ ಎಂಎಸ್ಐಎಲ್ ಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಮದ್ಯಕ್ಕಾಗಿ ಅಕ್ಕಪಕ್ಕದ ಗ್ರಾಮದ ಯುವಕರೂ ಬರುತ್ತಾರೆ. ಕುಡುಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಗ್ರಾಮದಲ್ಲಿ ಕಿರಿಕಿರಿ ಉಂಟಾಗುತ್ತಿದೆ. ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಓಡಾಡೋದು ಕಷ್ಟವಾಗಿದೆ. ಕುಡುಕರ ಹಾವಳಿಯಿಂದ ಖಾಲಿ ಬಾಟಲ್ ಮತ್ತು ಪೌಚ್ ಗ್ರಾಮದ ದೇವಸ್ಥಾನ ಆವರಣ, ಹೊಲ-ಗದ್ದೆ, ಮನೆಗಳ ಮುಂದೆಯೂ ರಾರಾಜಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಡಿತದ ವಿಚಾರಕ್ಕೆ ನಿನ್ನೆಯೂ ಅಕ್ಕಪಕ್ಕದ ಗ್ರಾಮದ ಯುವಕರ ಜೊತೆ ಗಲಾಟೆಯಾಗಿದೆ. ಹೀಗಾಗಿ ಗ್ರಾಮಸ್ಥರು ರಾತ್ರೋರಾತ್ರಿ ಎಂಎಸ್ಐಎಲ್​ಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗಿದೆ. ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ‌ನೀಡಬಾರದೆಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net