

ರಾಜಸ್ಥಾನ: ವ್ಯಕ್ತಿಯೊಬ್ಬ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದ ಹಿನ್ನೆಲೆ ಕುಟುಂಬದವರಿಗೆ ವಿಷ ಉಣಿಸಿ ಹತ್ಯೆಗೈದು, ನಂತರದಲ್ಲಿ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಶಿಕಾರಿಪುರ: ಸೆ.6ರಂದು ಕಾಗೋಡು ತಿಮ್ಮಪ್ಪಗೆ ಸನ್ಮಾನ
ಹಣಕಾಸಿನ ಬಿಕ್ಕಟ್ಟಿನಿಂದ ಮನನೊಂದ ವ್ಯಕ್ತಿ, ಪತ್ನಿ ಮತ್ತು ಮಕ್ಕಳಿಗೆ ಸ್ವೀಟ್ನೊಳಗೆ ವಿಷ ಬೆರೆಸಿ, ಉಣಿಸಿದ್ದಾರೆ. ನಂತರದಲ್ಲಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯನ್ನು ಪ್ರತಾಪ್ ನಗರ ಪ್ರದೇಶದ ನಿವಾಸಿ ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮನೋಜ್ ಶರ್ಮಾ ಹಲ್ವಾದಲ್ಲಿ ವಿಷಕಾರಿ ಪದಾರ್ಥವನ್ನು ಬೆರೆಸಿದ್ದಾರೆ. ಇದನ್ನು ಸೇವಿಸಿದ ಆತನ ಪತ್ನಿ ಸಾಕ್ಷಿ (28) ಮತ್ತು 5 ತಿಂಗಳ ಮಗ ಅಥರ್ವ್ ಮೃತಪಟ್ಟಿದ್ದಾರೆ. ಶರ್ಮಾ ಮತ್ತು ಅವರ ಮಗಳು ನಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ತಿಳಿಸಿದ್ದಾರೆ,(ಏಜೆನ್ಸೀಸ್).