ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?

Vikas Dube
Published on

ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?
ಕಾನ್ಪುರ: ದರೋಡೆಕೋರ ವಿಕಾಸ್ ದುಬೆ ಎನ್​​​ಕೌಂಟರ್ ಆದ ಕೆಲವೇ ಗಂಟೆಗಳ ನಂತರ, ನಡೆದ, ಮಧ್ಯಪ್ರದೇಶದ ಪೊಲೀಸರ ನಡುವಿನ ಸಂಭಾಷಣೆ ಎನ್ನಲಾದ ದೃಶ್ಯಾವಳಿ ಇರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೊ ಎನ್​​ಕೌಂಟರ್​​ನಲ್ಲಿ ಆದ 'ವ್ಯತ್ಯಾಸಗಳನ್ನು' ತೋರಿಸುತ್ತದೆ. ವೀಡಿಯೊದಲ್ಲಿ, ಯಾವ ಸಮಯದಲ್ಲಿ ವಿಕಾಸ್ ದುಬೆ ಕಾನ್ಪುರವನ್ನು ತಲುಪುತ್ತಾನೆ ಎಂದು ಸಹೋದ್ಯೋಗಿಯೊಬ್ಬರು ಪೋಲೀಸರನ್ನು ಕೇಳುತ್ತಿರುವಂತಿದೆ. ಇದಕ್ಕೆ, ಪೋಲೀಸ್ ನಗುತ್ತಾ, "ಅವನು ತಲುಪುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳುತ್ತಾರೆ. ಅವರ ಪ್ರತಿಕ್ರಿಯೆಯು ಎನ್​​ಕೌಂಟರ್​​ನ ಸತ್ಯಾಸತ್ಯತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಕೆಲವರು ಇದನ್ನು "ನಕಲಿ" ಎಂದು ಹೇಳಿದ್ದಾರೆ.


ಬದಲಾದ ದುಬೆ ವಾಹನ  : ಎನ್ಕೌಂಟರ್ ಮೊದಲು ಉರುಳಿಸಿದ ಕಾರುಗಿಂತ ಬೇರೆ ಕಾರಿನಲ್ಲಿ ದುಬೆ ಕಾಣಿಸಿಕೊಂಡಿದ್ದಾನೆ ಎಂಬ ವರದಿಗಳು ಸಹ ಬಿತ್ತರಗೊಂಡಿವೆ.. ದುಬೆ ಈ ಮೊದಲು ಸಫಾರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಎನ್‌ಕೌಂಟರ್‌ಗೆ ಮುಂಚಿತವಾಗಿ ಟಿಯುವಿ 300 ಎಸ್‌ಯುವಿ ಇತ್ತು. ದುಬೆನನ್ನು ಬೇರೆ ವಾಹನಕ್ಕೆ ಏಕೆ ಸ್ಥಳಾಂತರಿಸಲಾಯಿತು ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಪೊಲೀಸರಿಂದ ಯಾವುದೇ ಉತ್ತರಗಳು ಬಂದಿಲ್ಲ.

ದರೋಡೆಕೋರರ ನಿರ್ಮೂಲನೆ ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿದೆ, ಎದುರಾಳಿ ಪಕ್ಷಗಳು ಉತ್ತರ ಪ್ರದೇಶ ಸರ್ಕಾರವು "ದಟ್ಟ ರಹಸ್ಯವನ್ನು" ಮರೆಮಾಡುತ್ತಿದೆ ಎಂದು ಆರೋಪಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ "ವಾಸ್ತವವಾಗಿ, ಇದೊಂದು ಫೇಕ್‌ ಎನ್‌ಕೌಂಟರ್‌ ಎಂದು ಕಿಡಿ ಕಾರಿದ್ದಾರೆ.
ವಾಸ್ತವವಾಗಿ ದಬೆ ಇರುವ ಕಾರು ಉರುಳಿಲ್ಲ, ಬದಲಿಗೆ ಸರ್ಕಾರದ ರಹಸ್ಯ ಬಯಲಾಗಿ ಅದು ಉರುಳದಂತೆ ಮಾಡುವ ಸಲುವಾಗಿ ಮಾಡಿರುವ ಕುತಂತ್ರವಿದು ಎಂದು ಟ್ವಿಟರ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆತ ಕುಳಿತಿದ್ದ ವಾಹನವನ್ನು ಉರುಳಿಸಿದ್ದು, ಮಧ್ಯಪ್ರದೇಶದ ಉಜ್ಜಯಿನಿ ಯಿಂದ ಕಾನ್ಪುರಕ್ಕೆ ಕರೆತರುವಾಗ ಆತ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ದುಬೆನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಗುಂಡಿಕ್ಕಿ ಕೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net