More

    ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು ರೌಡಿ ದುಬೆ ಎನ್‌ಕೌಂಟರ್‌!

    ನವದೆಹಲಿ: ಮೂರು ದಶಕಗಳಿಂದ ನೂರಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿ ಹಲವಾರು ಮಂದಿಯ ಜೀವ ತೆಗೆದು ಅಟ್ಟಹಾಸ ಮೆರೆದಿದ್ದ ಕುಖ್ಯಾತ ರೌಡಿ ವಿಕಾಸ್‌ ದುಬೆ ಇಂದು ಬೆಳಗ್ಗೆ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ.

    ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಸಮಯದಲ್ಲಿ ಎನ್‌ಕೌಂಟರ್‌ ಆಗಿರುವುದಾಗಿ ಪೊಲೀಸರು ಹೇಳುತ್ತಿದ್ದು, ಇದನ್ನು ಅನೇಕ ಮಂದಿ ಅಲ್ಲಗಳೆಯುತ್ತಿದ್ದಾರೆ.
    ಈ ಹಿನ್ನೆಲೆಯಲ್ಲಿ, ಎನ್‌ಕೌಂಟರ್‌ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುವಂತೆ ಇದೀಗ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಘನಶ್ಯಾಮ್‌ ಉಪಾಧ್ಯ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​

    ಮನುಷ್ಯನನ್ನು ಈ ರೀತಿ ಕೊಲ್ಲುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

    ಅಲ್ಲದೇ ಈ ತನಿಖೆ ಸುಪ್ರೀಂಕೋರ್ಟ್‌ನ ನಿಗಾದಲ್ಲಿ ಸಿಬಿಐನಿಂದ ನಡೆಸಬೇಕು. ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

    ಕಾಗೆ ಹಿಕ್ಕೆ ಹಾಕಿತೆಂದು ಎರ್ರಾಬಿರ್ರಿ ಗುಂಡು ಹಾರಿಸಿದ್ದ ದುಬೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts