More

    ಕಾಗೆ ಹಿಕ್ಕೆ ಹಾಕಿತೆಂದು ಎರ್ರಾಬಿರ್ರಿ ಗುಂಡು ಹಾರಿಸಿದ್ದ ದುಬೆ!

    ಕಾನ್ಪುರ: ಎಂಟು ಮಂದಿ ಪೊಲೀಸರ ಹತ್ಯೆ ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕುಖ್ಯಾತ ರೌಡಿ ವಿಕಾಸ್‌ ದುಬೆಯ ಮೂರು ದಶಕಗಳ ಅಪರಾಧ ಪ್ರಪಂಚವೇ ಭಯಾನಕವಾದದ್ದು,

    ಮಧ್ಯಪ್ರದೇಶದ ಉಜ್ಜಯಿನಿಯ ಮಹಕಾಲ್ ದೇವಾಲಯದ ಆವರಣದಲ್ಲಿ ಸಿಕ್ಕಿಬಿದ್ದಿರುವ ದುಬೆ, ಖುದ್ದು ಶರಣಾಗಿದ್ದಾನೆ ಎಂಬ ವಾದವೂ ಇದೆ. ದೇವಾಲಯದ ಆವರಣದಲ್ಲಿ ಆರಾಮಾಗಿ ಕುಳಿತಿರುವ ಫೋಟೋ ವೈರಲ್‌ ಆಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಲ್ಲ, ಬದಲಿಗೆ ಶರಣಾಗಿದ್ದಾನೆ ಎನ್ನುವುದು ಕೆಲವು ರಾಜಕಾರಣಿಗಳ ಮಾತು.

    ಆದರೆ ಇದು ಅಷ್ಟು ಸುಲಭವಾಗಿ ಒಪ್ಪುವ ಮಾತಲ್ಲ ಎನ್ನುವುದು ಉಳಿದವರ ವಾದ. ಮೂರು ದಶಕ ಅಪರಾಧ ಲೋಕದಲ್ಲಿ ರಾಜಾರೋಷವಾಗಿ ಮೆರೆದು ಪೊಲೀಸರಿಗೆ ಸುಲಭದಲ್ಲಿ ಚಳ್ಳೇಹಣ್ಣು ತಿನ್ನಿಸುವಾತ ತಾನೇ ಖುದ್ದಾಗಿ ಪೊಲೀಸರಿಗೆ ಶರಣಾಗುತ್ತಾನೆ ಎಂದರೆ ನಂಬುವುದು ಅಸಾಧ್ಯವೇ ಸರಿ ಎನ್ನುವುದು ಮಿಕ್ಕವರ ವಾದ.

    ಅದೇನೇ ಇರಲಿ. ಈತನ ಮೂರು ದಶಕಗಳ ಕ್ರೈ ಹಿಸ್ಟರಿ ಮಾತ್ರ ಭಯಾನಕವಾಗಿದೆ. ಈತನ ಅಪರಾಧದ ಹಿನ್ನೆಲೆಗಳು ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ಭೂ ಕಬಳಿಕೆ, ಸುಪಾರಿ ಕೊಲೆ, ರಾಜಕೀಯ ಮುಖಂಡರ ಹತ್ಯೆ… ಹೀಗೆ ಈತನ ಕುಕೃತ್ಯಗಳು ಒಂದಲ್ಲ… ಎರಡಲ್ಲ..

    ಉತ್ತರ ಪ್ರದೇಶದ ಕಾನ್ಪುರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಬಿಕ್ರೂ ಎಂಬ ಹಳ್ಳಿಯ ವಾಸಿಯಾಗಿರುವ ಈತನ ಹೆಸರು ಕೇಳಿದರೇನೇ ಅಲ್ಲಿಯ ಜನರಲ್ಲಿ ನಡುಕ ಹುಟ್ಟುತ್ತದೆ. ಅಂಥ ಭಯಾನಕ ನಟೋರಿಯಸ್‌ ಈತ. ಇದರಿಂದಲೇ ಈತನನ್ನು ಅವನ ಊರಿನಲ್ಲಿ ಬಿಕ್ರೂ ಗಬ್ಬರ್‌ಸಿಂಗ್‌ ಎನ್ನುತ್ತಾರೆ.

    ಹಾಗೆಂದು ಈತನಿಗೆ ಮೊದಲಿನಿಂದಲೂ ಫಿಲ್ಮಿ ಸ್ಟೈಲ್‌ನಲ್ಲಿ ಅಪರಾಧ ಕೃತ್ಯ ಎಸಗೋದು ಎಂದರೆ ತುಂಬಾ ಖುಷಿಯಂತೆ. 1990ರ ದಶಕದಲ್ಲಿಯೇ ಪಾಪಕೃತ್ಯಕ್ಕೆ ಇಳಿದಿದ್ದ ಈತ ಆಗ ಪ್ರಸಿದ್ಧಿಯಾಗಿದ್ದ ಸನ್ನಿ ಡಿಯೋಲ್‌ ಅಭಿನಯದ “ಅರ್ಜುನ್ ಪಂಡಿತ್” ಚಿತ್ರದಲ್ಲಿನ ಪಂಡಿತ್‌ ಶಬ್ದ ಮೋಡಿಯೊಳಕ್ಕೆ ಬಿದ್ದು ತನ್ನನ್ನು ಎಲ್ಲರೂ ಅದೇ ರೀತಿ ಕರೆಯುವಂತೆ ತಾಕೀತು ಮಾಡುತ್ತಿದ್ದನಂತೆ.

    ಅದರಂತೆ ಇಂದು ಅವರನನ್ನು ಪೊಲೀಸರು ಹಿಡಿದು ಗಾಡಿಯೊಳಕ್ಕೆ ಹಾಕುತ್ತಿದ್ದಂತೆಯೇ ‘ಖಳನಾಯಕ್‌’ ಚಿತ್ರದ ಸ್ಟೈಲ್‌ನಲ್ಲಿ “ಮೈ ಹೂಂ… ವಿಕಾಸ್ ದುಬೆ, ಕಾನ್ಪುರ್ ವಾಲಾ’ ಎಂದು ಹೇಳಿದ್ದು, ಅದರ ವಿಡಿಯೋ ಇದೀಗ ವೈರಲ್‌ ಆಗಿದೆ.

    ಎಂಟು ಮಂದಿ ಪೊಲೀಸರ ಹತ್ಯೆ ಮಾಡಿದ ಬಳಿಕ, ಇದೀಗ ಬಂಧನಕ್ಕೆ ಒಳಗಾದ ಮೇಲೆ ಅಲ್ಲಿಯ ಹಳ್ಳಿಗರು ಈತನ ಕ್ರೌರ್ಯದ ಕಥೆಗಳನ್ನು ಒಂದೊಂದಾಗಿ ತೆರೆದಿಡುತ್ತಿದ್ದಾರೆ.
    ಈತನ ಊರಲ್ಲಿ ನೀರಿನ ಸಮಸ್ಯೆ ಇತ್ತು, ಈಗಲೂ ಇದೆ. ಆದರೆ ಈತನಿಗೆ ಮೊದಲು ನೀರು ಕೊಟ್ಟ ಬಳಿಕಷ್ಟೇ ಬಾವಿಯಿಂದ ಇತರರು ನೀರು ತೆಗೆದುಕೊಳ್ಳಬೇಕಿತ್ತಂತೆ. ಒಂದು ವೇಳೆ ಅದನ್ನು ಉಲ್ಲಂಘಿಸಿ ಈತನ ಕಣ್ಣುತಪ್ಪಿಸಿ ಯಾರಾದರೂ ನೀರು ತೆಗೆದುಕೊಂಡರೆ, ಅವರನ್ನು ಮರಕ್ಕೆ ನೇತು ಹಾಕುತ್ತಿದ್ದನಂತೆ. ಊರಿನಲ್ಲಿರುವ ಒಂದೇ ಒಂದು ಬಾವಿಯನ್ನು ತನ್ನದೇ ಎಂದು ಹೇಳಿಕೊಳ್ಳುತ್ತಿದ್ದ ಈತ, ತನಗೆ ಸಂಪೂರ್ಣ ಸಂತೃಪ್ತಿಯಾಗುವವರೆಗೆ ನೀರು ಸಿಕ್ಕ ನಂತರವಷ್ಟೇ ಬೇರೆಯವರು ತೆಗೆದುಕೊಳ್ಳಬೇಕಿತ್ತು ಎನ್ನುತ್ತಾರೆ ಗ್ರಾಮಸ್ಥರು.

    ಒಮ್ಮೆ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಗೆಯೊಂದು ಈತನ ಮೈಮೇಲೆ ಹಿಕ್ಕೆ ಹಾಕಿದ್ದಕ್ಕೆ ಸಭೆಯನ್ನು ಅಲ್ಲಿಯೇ ನಿಲ್ಲಿಸಿ ಕಾಗೆಯ ಮೇಲೆ ಬೇಕಾಬಿಟ್ಟೆ ಗುಂಡು ಹಾರಿಸಿದ್ದನಂತೆ. ಹಕ್ಕಿಗಳನ್ನು ಕೊಲ್ಲುವುದು ಕೂಡ ಈತನ ಚಾಳಿಯಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು.

    ಈತನ ಪತ್ನಿ ರಿಚಾ ಕೂಡ ಅದೇ ಗ್ರಾಮದಲ್ಲಿ ಇದ್ದು, ತನ್ನ ಬಹುತೇಕ ಕುಕೃತ್ಯಗಳ ಬಗ್ಗೆ ಆಕೆಗೆ ಹೇಳುತ್ತಿದ್ದ ಎನ್ನಲಾಗಿದೆ. ಕಳೆದ ವಾರ ಎಂಟು ಮಂದಿ ಪೊಲೀಸರ ಹತ್ಯೆ ಮಾಡುವ ಸಮಯದಲ್ಲಿ ಕೂಡ ಈ ವಿಷಯ ಪತ್ನಿಗೆ ತಿಳಿಸಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಮಹಾಕಾಲ ದೇವಾಲಯದ ಸಮೀಪವೇ ಮಹಾ ಪಾತಕಿ ದುಬೆ ಅರೆಸ್ಟ್‌!

    ಇಷ್ಟೆಲ್ಲಾ ಮಾಡುತ್ತಿದ್ದರೂ ಈತ ಮೊದಲು ಎಲ್ಲರ ಗಮನ ಸೆಳೆದದ್ದು 2001ರಲ್ಲಿ ವಿಕಾಸ್ ದುಬೆ ಹತ್ಯೆ ಪ್ರಕರಣದಲ್ಲಿ. ಅದಾದ ಮೇಲೆ 2000ನೇ ಸಾಲಿನಲ್ಲಿ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿ. ಈತನೇ ಕೊಲೆ ಮಾಡಿರುವುದು ತಿಳಿದಿದ್ದರೂ ಸಾಕ್ಷ್ಯಗಳು ಸಿಗದ ಕಾರಣ, ಕೋರ್ಟ್‌ ಈತನನ್ನು ಎರಡೂ ಪ್ರಕರಣಗಳಿಂದ ಬಿಡುಗಡೆ ಮಾಡಿತ್ತು. 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತಿಳಿದಿದ್ದರೂ ಸಾಕ್ಷ್ಯಗಳು ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದ. ನಂತರ ಅದಾದ ಮೇಲೆ ಒಂದೊಂದಾಗಿ ತನ್ನ ಕ್ರಿಮಿನಲ್‌ ಲೋಕವನ್ನು ವಿಸ್ತಾರ ಮಾಡಿಕೊಳ್ಳತೊಡಗಿದ. ಕೆಲವೊಂದು ವೇಳೆ ಜೈಲಿಗೂ ಹೋಗಿದ್ದ.

    ಪೊಲೀಸರ ಶವ ಸುಟ್ಟು ಸಾಕ್ಷ್ಯ ನಾಶ ಮಾಡಬೇಕೆಂದಿದ್ದೆ, ಸಾಧ್ಯವಾಗಲಿಲ್ಲ ಪರಾರಿಯಾದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts