More

    ಯುಎಇಗೆ ಹೋದವರಲ್ಲಿ ಹೆಚ್ಚುತ್ತಿದೆ ಕೂದಲುದುರುವಿಕೆ! ವಲಸಿಗರ ಕಣ್ಣೀರು, ತಜ್ಞರು ಕೊಟ್ಟ ಕಾರಣವಿದು…

    ದುಬೈ: ತವರಿನಿಂದ ಯುಎಇಗೆ ಸ್ಥಳಾಂತರಗೊಂಡ ಬಳಿಕ ತೀವ್ರ ಕೂದಲು ಉದುರುವಿಕೆ ಸಮಸ್ಯೆ ಅನುಭವಿಸುತ್ತಿರುವುದಾಗಿ ಅನೇಕ ವಲಸಿಗರು ಆರೋಪಿಸಿದ್ದಾರೆ. ಇದರಲ್ಲಿ ಹೆಚ್ಚಿನ ಜನರು ಅತಿಯಾದ ಬಿಸಿಲು, ಅಲ್ಲಿನ ನೀರು ಮತ್ತು ನಿರಂತರ ಏರ್ ಕಂಡಿಷನರ್ ಅಡಿಯಲ್ಲಿ ವಾಸಿಸುವ ಕಾರಣ ಕೂದಲು ಉದುರುತ್ತಿದೆ ಎಂದಿದ್ದಾರೆ.

    ಕೂದಲು ಉದುರುವಿಕೆಗೆ ವಲಸಿಗರು ನಾನಾ ಕಾರಣಗಳನ್ನು ನೀಡಿದರೆ, ತಜ್ಞರು ಹೇಳೋದು ಮಾತ್ರ ಬೇರೆಯಾಗಿದೆ. ವಲಸಿಗರು ತಮ್ಮ ಮಾತೃಭೂಮಿಗಿಂತ ಯುಎಇಯಲ್ಲಿ ಹೆಚ್ಚು ಕೂದಲು ಉದುರುವಿಕೆಯನ್ನು ಅನುಭವಿಸುತ್ತಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

    ಬುರ್ಜಿಲ್ ಡೇ ಸರ್ಜರಿ ಸೆಂಟರ್‌ನ ಡರ್ಮಟಾಲಜಿ ಮತ್ತು ಕಾಸ್ಮೆಟಾಲಜಿ ತಜ್ಞ ಡಾ.ಹುಸೇನ್ ಅಬ್ದೆಲ್ರಾಜಿಕ್ ಪ್ರಕಾರ, ಹವಾಮಾನ ಬದಲಾವಣೆ, ಒತ್ತಡ ಮತ್ತು ಜೀವನಶೈಲಿಯ ಬದಲಾವಣೆಗಳು ಯುಎಇಯಲ್ಲಿ ವಲಸಿಗರು ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗಿರಬಹುದು. ಮನೆಯ ಊಟದಿಂದ ಹೋಟೆಲ್​ ಅಥವಾ ತ್ವರಿತ ಆಹಾರಕ್ಕೆ ಬದಲಾಗುವುದರಿಂದ ಎಪಿಜೆನೋಮ್‌ನಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಕಂಡುಬರುವ ಹೆಚ್ಚಿನ ಮಟ್ಟದ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳು ಆನುವಂಶಿಕ ಬದಲಾವಣೆಗಳನ್ನು ಉಂಟುಮಾಡಬಹುದು ಮತ್ತು ಅದು ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

    ಎಪಿಜೆನೊಮ್ ಎಂಬುದು ರಾಸಾಯನಿಕ ಸಂಯುಕ್ತಗಳು ಮತ್ತು ಪ್ರೋಟೀನ್‌ಗಳ ವ್ಯವಸ್ಥೆಯಾಗಿದೆ. ಇದು ಡಿಎನ್‌ಎ ಬಂಧಿಸಬಲ್ಲದು ಮತ್ತು ಡಿಎನ್‌ಎ ಅನುಕ್ರಮವನ್ನು ಬದಲಾಯಿಸದೆಯೇ ಅನುವಂಶಿಕ ವ್ಯವಸ್ಥೆಯನ್ನು ಇದು ನಿಯಂತ್ರಿಸಬಹುದು. ಅನಾರೋಗ್ಯಕರ ಎಪಿಜೆನೋಮ್ ಕಾರ್ಯಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಅನಾರೋಗ್ಯಕರ ಆಹಾರ ಕ್ರಮಗಳು, ಒತ್ತಡ ಮತ್ತು ಜೀವನಶೈಲಿಯ ಬದಲಾವಣೆಗಳು ಎಪಿಜೆನೊಮ್‌ನ ಮೇಲೂ ಪ್ರಭಾವ ಬೀರುತ್ತದೆ ಎಂದು ಡಾ.ಹುಸೇನ್ ತಿಳಿಸಿದರು.

    ಕೆಲಸದ ಒತ್ತಡ, ಅನಾರೋಗ್ಯಕರ ಆಹಾರ ಮತ್ತು ಮಾನಸಿಕ ಆರೋಗ್ಯದಂತಹ ಸಮಸ್ಯೆಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಪ್ರೈಮ್ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ನಾಗ್ಲಾ ರಾಮ್ಸಿ ಹೇಳಿದ್ದಾರೆ.

    ಹಲವಾರು ವಲಸಿಗರು ಯುಎಇಗೆ ಬಂದ ನಂತರ ಕೂದಲು ಉದುರುವಿಕೆ ಹೆಚ್ಚಾಗಿದೆ ಎಂದು ದೂರುತ್ತಾರೆ. ಆದಾಗ್ಯೂ, ಇದಕ್ಕೆ ಮುಖ್ಯ ಕಾರಣಗಳು ಹೊಸ ಉದ್ಯೋಗವನ್ನು ಪ್ರವೇಶಿಸುವ ಒತ್ತಡ, ಕುಟುಂಬದಿಂದ ದೂರವಿರುವುದು, ಹೊಸ ಪರಿಸರಕ್ಕೆ ಹೋಗುವುದು ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಎಂದು ಡಾ ರಾಮ್ಸಿ ಹೇಳಿದರು.

    ವಿಟಮಿನ್ ಕೊರತೆ ಇರುವವರು ಅದಕ್ಕೆ ಪೂರಕವಾದ ಆಹಾರಗಳನ್ನು ತೆಗೆದುಕೊಳ್ಳಬೇಕು. ರೋಗಗಳನ್ನು ನಿಯಂತ್ರಿಸುವುದು, ಆರೋಗ್ಯಕರ ಆಹಾರದೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು, ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಕೂದಲಿನ ಸೀರಮ್ ಅನ್ನು ಅನ್ವಯಿಸುವುದು, ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುವುದು ಮತ್ತು ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಕೂದಲು ಉದುರುವಿಕೆ ಕಡಿಮೆ ಮಾಡಲು ಇರುವ ಇತರ ಪರಿಣಾಮಕಾರಿ ಕ್ರಮಗಳಾಗಿವೆ ಎಂದು ಡಾ ರಾಮ್ಸಿ ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ರಶ್ಮಿಕಾ ಮದ್ವೆಯಾಗೋ ಹುಡ್ಗ VD ರೀತಿ ಇರಬೇಕಂತೆ! ವಿಡಿ ಅಂದ್ರೆ ವಿಜಯ್​ ದೇವರಕೊಂಡ ಅಲ್ಲ, ಮತ್ಯಾರು?

    ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

    ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts