More

  ರಶ್ಮಿಕಾ ಮದ್ವೆಯಾಗೋ ಹುಡ್ಗ VD ರೀತಿ ಇರಬೇಕಂತೆ! ವಿಡಿ ಅಂದ್ರೆ ವಿಜಯ್​ ದೇವರಕೊಂಡ ಅಲ್ಲ, ಮತ್ಯಾರು?

  ಹೈದರಾಬಾದ್​: ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ರಶ್ಮಿಕಾ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ ಅನಿಮಲ್​ ಸಿಕ್ಕಾಪಟ್ಟೆ ಹಿಟ್​ ಆಯಿತು. ಪುಷ್ಪ 2 ಹೊರತುಪಡಿಸಿ ರಶ್ಮಿಕಾ ಕೈಯಲ್ಲಿ ಸದ್ಯ ಐದಕ್ಕಿಂತ ಹೆಚ್ಚು ಚಿತ್ರಗಳಿವೆ. ನ್ಯಾಷನಲ್​ ಕ್ರಷ್​ ಆಗಿರುವ ರಶ್ಮಿಕಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ. ರಶ್ಮಿಕಾ ಅವರ ಒಂದು ಸಣ್ಣ ಟ್ವೀಟ್​ ಕೂಡ ಎಲ್ಲರ ಗಮನ ಸೆಳೆದುಬಿಡುತ್ತದೆ. ಅದೇ ರೀತಿ ಇದೀಗ ಮತ್ತೊಂದು ಟ್ವೀಟ್​ ಸದ್ದು ಮಾಡುತ್ತಿದೆ.

  ಇತ್ತೀಚೆಗಷ್ಟೇ “ರಶ್ಮಿಕಾ ದೆಹಲಿ ಅಭಿಮಾನಿಗಳು” ಹೆಸರಿನ ಎಕ್ಸ್​ ಪೇಜ್​ನಲ್ಲಿ ರಶ್ಮಿಕಾ ಅವರ ಫೋಟೋವನ್ನು ಶೇರ್​ ಮಾಡಿಕೊಂಡು, ರಶ್ಮಿಕಾ ಮಂದಣ್ಣ ಪತಿಯಾಗಲು ಯಾವ ಗುಣಗಳು ಹೊಂದಿರಬೇಕು ಎಂದು ಪ್ರಶ್ನೆ ಮಾಡಿ ಅದಕ್ಕೆ ಉತ್ತರವನ್ನು ನೀಡಲಾಗಿದೆ. ರಶ್ಮಿಕಾ ಭಾರತದ ನ್ಯಾಷನಲ್​ ಕ್ರಶ್​. ಹೀಗಾಗಿ ಅವರ ಪತಿ ತುಂಬಾ ವಿಶೇಷವಾಗಿರಬೇಕು.

  ರಶ್ಮಿಕಾ ಅವರ ಪತಿ VD ರೀತಿ ಇರಬೇಕು. VD ಅಂದ್ರೆ Very Daring (ತುಂಬಾ ಧೈರ್ಯಶಾಲಿ) ಎಂದರ್ಥ. ರಶ್ಮಿಕಾರನ್ನು ರಕ್ಷಣೆ ಮಾಡುವಂತಿರಬೇಕು. ರಶ್ಮಿಕಾರನ್ನು ನಾವು ರಾಣಿ ಎಂದು ಕರೆಯುತ್ತೇವೆ. ಹೀಗಾಗಿ ಅವರ ಪತಿ ರಾಜನಂತೆಯೇ ಇರಬೇಕು ಎಂದು ಪೇಜ್​ನಲ್ಲಿ ಬರೆದುಕೊಳ್ಳಲಾಗಿದೆ.

  ರಶ್ಮಿಕಾ ದೆಹಲಿ ಅಭಿಮಾನಿಗಳು ಮಾಡಿರುವ ಪೋಸ್ಟ್​ ರಶ್ಮಿಕಾ ಗಮನಕ್ಕೆ ಬಂದಿದ್ದು, ಅವರು ನೀಡಿರುವ ಪ್ರತಿಕ್ರಿಯೆ ಅಭಿಮಾನಿಗಳ ಪೋಸ್ಟ್​ ಅನ್ನು ಸಿಕ್ಕಾಪಟ್ಟೆ ವೈರಲ್​ ಮಾಡಿದೆ. ಅಷ್ಟಕ್ಕೂ ರಶ್ಮಿಕಾ ಹೇಳಿದ್ದೇನೆಂದರೆ, ದೆಹಲಿ ಅಭಿಮಾನಿಗಳ ಪೋಸ್ಟ್​ ಅನ್ನು ರೀಟ್ವೀಟ್​ ಮಾಡಿರುವ ರಶ್ಮಿಕಾ, ನೀವು ಹೇಳಿರುವುದು ತುಂಬಾ ನಿಜ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಈ ಪೋಸ್ಟ್​ ಎಲ್ಲರ ಗಮನ ಸೆಳೆದಿದೆ.

  ಗಮನ ಸೆಳೆಯಲು ಇನ್ನೊಂದು ಕಾರಣವಿದೆ. ಅದೇನೆಂದರೆ, VD ಅಂದರೆ Vijay Devarakonda. ಟಾಲಿವುಡ್​ನಲ್ಲಿ ವಿಜಯ್​ ಅವರನ್ನು ವಿಡಿ ಎಂದೇ ಕರೆಯಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ನಟ ವಿಜಯ್​ ದೇವರಕೊಂಡ ಮತ್ತು ಚರಿಷ್ಮಾ ಸುಂದರಿ ರಶ್ಮಿಕಾ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಪ್ರಕಟವಾಗುತ್ತಲೇ ಇವೆ. ಈ ಬಗ್ಗೆ ಪ್ರಶ್ನಿಸಿದಾಗ ವಿಜಯ್​ ಆಗಲಿ, ರಶ್ಮಿಕಾ ಆಗಲಿ ಪ್ರತಿಕ್ರಿಯೆ ನೀಡದೇ ನಿರಾಕರಿಸುತ್ತಾರೆ. ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಇದ್ದರೂ ಸಹ ಇಬ್ಬರಲ್ಲಿ ಯಾರೊಬ್ಬರು ಸಹ ಇದನ್ನು ಈವರೆಗೂ ಖಚಿತಪಡಿಸಿಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ನಾವು ಬೆಸ್ಟ್​ ಫ್ರೆಂಡ್ಸ್​ ಎಂದಷ್ಟೇ ಹೇಳಿಕೊಂಡಿದ್ದಾರೆ. ಆದರೆ, ಅನೇಕ ಸಂದರ್ಭಗಳಲ್ಲಿ ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತುಪ್ಪ ಸುರಿದಿದ್ದಾರೆ. ಈಗಲೂ ಇಬ್ಬರ ಬಗ್ಗೆ ಅಭಿಮಾನಿಗಳಿಗೆ ಅದೇ ಅಭಿಪ್ರಾಯವಿದೆ.

  ಇನ್ನು ಅನಿಮಲ್​ ಸಿನಿಮಾದ ಪ್ರಚಾರದ ವೇಳೆ ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋನಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ರಣಬೀರ್ ಮತ್ತು ರಶ್ಮಿಕಾ ಪಾಲ್ಗೊಂಡು ಸಿನಿಮಾದ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಸಂದೀಪ್ ರೆಡ್ಡಿ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’​ ಚಿತ್ರದ ಪೋಸ್ಟರ್​ಗಳನ್ನು ತೋರಿಸಿದರು. ಇದು ವಿಜಯ್ ದೇವರಕೊಂಡ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿತು. ಸಂದೀಪ್ ಹಾಗೂ ರಶ್ಮಿಕಾಗೆ ಪ್ರಶ್ನಿಸಿದ ಬಾಲಕೃಷ್ಣ, ‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’​ ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದರು. ರಶ್ಮಿಕಾ ಮುಖ ನೋಡಿದ ರಣಬೀರ್, ತಮಾಷೆಯಾಗಿ ಗೇಲಿ ಮಾಡುತ್ತಾ, “ಯಾರು ಉತ್ತಮ ನಟ ಎಂದು ಭಾವಿಸುತ್ತೀರಿ? ರೀಲ್ ಹೀರೋ ಅಥವಾ ರಿಯಲ್ ಹೀರೋ” ಎಂದು ಹೇಳಿದರು. ಈ ಪ್ರಶ್ನೆಗೆ ರಶ್ಮಿಕಾ ಉತ್ತರಿಸಲು ನಿರಾಕರಿಸಿದರು.

  ಕೂಡಲೇ ವಿಜಯ್​ಗೆ ಕರೆ ಮಾಡಿ ಸಂದೀಪ್​ ಎಂದ ಬಾಲಕೃಷ್ಣ, ವಿಜಯ್​ ದೇವರಕೊಂಡಗೆ ಕಾಲ್ ಮಾಡಿಸಿದರು. ಆದ್ರೆ, ಆ ಸಮಯಕ್ಕೆ ಅವರು ಕರೆ ಸ್ವೀಕರಿಸಿಲ್ಲ. ಆಗ ರಣಬೀರ್ ತಮಾಷೆಯಾಗಿ, “ಸರ್, ರಶ್ಮಿಕಾ ಕರೆ ಮಾಡಲಿ, ಸಂದೀಪ್ ಕರೆಯನ್ನು ಅವರು ಎತ್ತುವುದಿಲ್ಲ” ಎಂದು ಹೇಳಿದರು. ತಕ್ಷಣ ಮುಗುಳುನಗೆ ಚೆಲ್ಲಿದ ರಶ್ಮಿಕಾಗೆ ರಣಬೀರ್ ಫೋನ್‌ ಮಾಡುವಂತೆ ಒತ್ತಾಯಿಸಿದರು. ತದನಂತರ ವಿಜಯ್​ಗೆ ಕರೆ ಮಾಡಿದ್ದಾರೆ. ಆದ್ರೆ, ಅವರು ಕರೆ ಸ್ವೀಕರಿಸಲಿಲ್ಲ. ಬಳಿಕ ಫೋನ್​ ಮಾಡಿದ ದೇವರಕೊಂಡ ಅವರನ್ನು ಮಾತನಾಡಿಸಿದ ರಶ್ಮಿಕಾ, ಕೆಲ ಸಮಯ ಸಂಭಾಷಣೆ ನಡೆಸಿದರು. ಇದೇ ವಿಷಯವನ್ನು ಮುಂದಿಟ್ಟು ಕಾರ್ಯಕ್ರಮದಲ್ಲಿ ರಣಬೀರ್​-ಸಂದೀಪ್​ ಮತ್ತು ಬಾಲಕೃಷ್ಣ ಅವರು ರಶ್ಮಿಕಾ ಕಾಲೆಳೆದರು. (ಏಜೆನ್ಸೀಸ್)

  ರಶ್ಮಿಕಾ ನಟನೆಯ ಈ ಸಿನಿಮಾ ನೋಡದಂತೆ ಖುಷ್ಬೂಗೆ ಮಕ್ಕಳಿಂದಲೇ ಎಚ್ಚರಿಕೆ! ಯಾವುದು ಆ ಫಿಲ್ಮ್​?

  ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

  ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts