More

    ರಿಲೀಸ್​ಗೂ ಮುನ್ನವೇ 1000 ಕೋಟಿ ರೂ. ಬಿಜಿನೆಸ್​ ಮಾಡಿಕೊಂಡಿತಾ ಪುಷ್ಪ 2: ದ ರೂಲ್​?

    ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಸುಕುಮಾರ್​ ಆ್ಯಕ್ಷನ್ ಕಟ್​ ಹೇಳುತ್ತಿರುವ 2021ರ ಹಿಟ್​ “ಪುಷ್ಪ : ದ ರೈಸ್​’ ಚಿತ್ರದ ಸೀಕ್ವಲ್​ “ಪುಷ್ಪ : ದ ರೂಲ್​’. ಪ್ರಾರಂಭದಿಂದಲೂ ಸಿನಿಮಾ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ 6 ನಿಮಿಷಗಳ ಗಂಗಮ್ಮ ಜಾತ್ರೆ ಮತ್ತು ಕ್ಲೆಮ್ಯಾಕ್ಸ್​ ಸನ್ನಿವೇಶಕ್ಕೆ ಬರೋಬ್ಬರಿ 60 ಕೋಟಿ ರೂ. ಖರ್ಚು ಮಾಡಿರುವ ಬಗ್ಗೆ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ “ಪುಷ್ಪ 2′ ಬಳಿಕ “ಪುಷ್ಪ 3: ದ ರೋರ್​’ ಕೂಡ ಬರಲಿದೆ ಎಂದೂ ಹೇಳಲಾಗಿದೆ.

    ರಿಲೀಸ್​ಗೂ ಮುನ್ನವೇ 1000 ಕೋಟಿ ರೂ. ಬಿಜಿನೆಸ್​ ಮಾಡಿಕೊಂಡಿತಾ ಪುಷ್ಪ 2: ದ ರೂಲ್​?
    Oplus_131072

    ಇದೀಗ ರಿಲೀಸ್​ಗೆ ನಾಲ್ಕು ತಿಂಗಳು ಇರುವಾಗಲೇ “ಪುಷ್ಪ 2′ ಹೆಸರಿಗೆ ತಕ್ಕಂತೆ ರಿಲೀಸ್​ಗೂ ಮುನ್ನವೇ ವ್ಯವಹಾರದ ವಿಷಯದಲ್ಲಿ “ರೂಲ್​’ ಮಾಡುತ್ತಿದೆ. ಮೂಲಗಳ ಪ್ರಕಾರ ನೆಟ್​ಫ್ಲಿಕ್ಸ್​ ಬರೋಬ್ಬರಿ 275 ಕೋಟಿ ರೂ. ನೀಡಿ ಈ ಚಿತ್ರದ ಒಟಿಟಿ ಹಕ್ಕುಗಳನ್ನು ಖರೀದಿ ಮಾಡಿದೆಯಂತೆ. ಹಾಗೇ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿತರಣಾ ಹಕ್ಕುಗಳು 300 ಕೋಟಿ ರೂ.ಗಳಿಗೆ, ಉತ್ತರ ಭಾರತದಲ್ಲಿ ಹಿಂದಿ ವಿತರಣೆ ಹಕ್ಕುಗಳು 200 ಕೋಟಿ ರೂ.ಗೆ, ವಿದೇಶಗಳಲ್ಲಿ ರಿಲೀಸ್​ ಮಾಡಲು 100 ಕೋಟಿ ರೂ. ನೀಡಿ ವಿತರಣಾ ಹಕ್ಕುಗಳನ್ನು ಖರೀದಿಸಲಾಗಿದೆ ಎನ್ನಲಾಗಿದೆಯಂತೆ.

    ರಿಲೀಸ್​ಗೂ ಮುನ್ನವೇ 1000 ಕೋಟಿ ರೂ. ಬಿಜಿನೆಸ್​ ಮಾಡಿಕೊಂಡಿತಾ ಪುಷ್ಪ 2: ದ ರೂಲ್​?

    ಮತ್ತೊಂದೆಡೆ ಆಡಿಯೋ ಮತ್ತು ಟಿವಿ ರೈಟ್ಸ್​ ಕೂಡ 200 ಕೋಟಿ ರೂ.ಗೆ ಸೇಲ್​ ಆಗಿದೆ ಎಂಬ ಸುದ್ದಿ ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಅಂದಹಾಗೆ “ಪುಷ್ಪ 2: ದ ರೂಲ್​’ ಇದೇ ಆ. 15ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts