More

  ಐಷಾರಾಮಿ ಕಾರು ಖರೀದಿಸಿದ ರೀಲ್ಸ್​ ಸ್ಟಾರ್​ ದೀಪ್ತಿ ಸುನೈನಾ! ಬೆಲೆ ಕೇಳಿ ಬೆರಗಾದ್ರು ಫ್ಯಾನ್ಸ್​

  ಈಕೆ ಹೆಸರು ದೀಪ್ತಿ ಸುನೈನಾ. ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಈಕೆಯ ಹೆಸರುಮ ಪರಿಚಯ ಇಲ್ಲದಿದ್ದರೂ ಮುಖ ಪರಿಚಯವಂತೂ ಇದ್ದೇ ಇದೆ. ಯೂಟ್ಯೂಬರ್ ಆಗಿ ಕೆರಿಯರ್ ಆರಂಭಿಸಿದ ದೀಪ್ತಿ, ನಂತರ ಹಲವು ಕಿರುಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾದರು. ಅದಾದ ನಂತರ ತೆಲುಗು ಬಿಗ್​ಬಾಸ್ ಶೋನಲ್ಲಿ ಭಾಗವಹಿಸುವ ಮೂಲಕ ಜನಪ್ರಿಯತೆ ಗಳಿಸಿದರು. ಅಲ್ಲದೆ, ಯೂಟ್ಯೂಬರ್ ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್ ಜತೆಗಿನ ಪ್ರೇಮ ಪ್ರಕರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆದರು. ಇಬ್ಬರ ಬ್ರೇಕಪ್​ ಕೂಡ ಬಹಳ ಸುದ್ದಿಯಾಯಿತು. ಈಗ ಕವರ್ ಸಾಂಗ್ಸ್, ವೆಬ್ ಸರಣಿಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇದರ ನಡುವೆ ದೀಪ್ತಿ ಸುನೈನಾ ಇತ್ತೀಚೆಗೆ ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ಕಾರಿನ ದರ ತಿಳಿದರೆ ನೀವು ಆಶ್ಚರ್ಯ ಪಡುವುದಂತೂ ಖಂಡಿತ.

  ಬಿಗ್​ಬಾಸ್ ಖ್ಯಾತಿಯ ದೀಪ್ತಿ ಸುನೈನಾ ಈಗಂತೂ ಎಲ್ಲರಿಗೂ ಗೊತ್ತು. ದೀಪ್ತಿ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಮುದ್ದಾದ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅವರ ಫ್ಯಾನ್ ಫಾಲೋಯಿಂಗ್ ಬಗ್ಗೆ ಮಾತನಾಡುವಂತಿಲ್ಲ. ಏಕೆಂದರೆ, ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 42 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.

  ದೀಪ್ತಿ ಸುನೈನಾ ಇತ್ತೀಚೆಗೆ ತನ್ನ ಮೊದಲ ಕಾರನ್ನು ಖರೀದಿ ಮಾಡಿದ್ದಾರೆ. ದೀಪ್ತಿ ಅವರು ಟೊಯೊಟಾ ಹೈ ಲಕ್ಸ್ ಕಾರು ಖರೀದಿಸಿದ್ದಾರೆ. ಈ ಕಾರಿನಲ್ಲಿ ಚಾಲಕನನ್ನು ಹೊರತುಪಡಿಸಿ ಇತರೆ ಮೂವರು ಮಂದಿ ಕುಳಿತುಕೊಳ್ಳಬಹುದು. ಹಿಂಭಾಗದಲ್ಲಿ ಸಾಮಾನು ಸರಂಜಾಮುಗಳನ್ನು ಇಡಲು ಸ್ಥಳಾವಕಾಶವೂ ಇದೆ. ಇನ್ನು ಈ ಕಾರಿನ ಬೆಲೆ 30 ರಿಂದ 37 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಇದನ್ನು ಕೇಳಿ ಅಭಿಮಾನಿಗಳು ಬೆರಗಾಗಿದ್ದಾರೆ.

  Deepti

  ಕಾರು ಖರೀದಿ ಮಾಡಿದ ಸಂಗತಿಯನ್ನು ದೀಪ್ತಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇನ್​​ಸ್ಟಾ ಸ್ಟೋರಿ ನೋಡಿದ ನೆಟ್ಟಿಗರು, ದೀಪ್ತಿ ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

  ಅಂದಹಾಗೆ, ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ಒಂದು ಕಾಲದಲ್ಲಿ ತೆಲುಗು ಯೂಟ್ಯೂಬ್​ ಸರ್ಕಲ್​ನಲ್ಲಿ ಫೇಮಸ್ ಆಗಿದ್ದಂತಹ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಜಗಜ್ಜಾಹೀರಾಗಿತ್ತು. ಅದನ್ನು ಸ್ವತಃ ಷಣ್ಮುಖ್​ ಹಾಗೂ ದೀಪ್ತಿ ಕೂಡ ಹೇಳಿಕೊಂಡಿದ್ದರು. ಆದರೆ, ಬಿಗ್​ಬಾಸ್​ ಸೀಸನ್​ 5 ಇಬ್ಬರ ಪ್ರೀತಿಗೆ ಹುಳಿ ಹಿಂಡಿದ್ದು, ದೀಪ್ತಿ ತಮ್ಮ ಪ್ರೀತಿಗೆ ಅಧಿಕೃತವಾಗಿ ಬ್ರೇಕಪ್ ಹೇಳಿರುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ.

  ಪ್ರೇಮಿಗಳ ನಡುವೆ ಏನಾಯಿತು?
  ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಲ್ಲಿ ಶಾನು ಕ್ಯಾಪ್ಟನ್​ ಆದ ನಂತರ ನೆಡೆದ ಎಪಿಸೋಡ್​ನಲ್ಲಿ ಪ್ರತಿಸ್ಪರ್ಧಿ ಸಿರಿ ಅವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ತುಂಬಾ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿದ ದೀಪ್ತಿ ತುಂಬಾ ಕೋಪಗೊಂಡಿದ್ದರು. ಶಾನು ಮತ್ತು ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿತ್ತು. ಹೀಗಾಗಿ ದೀಪ್ತಿ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಿಂದ ಹೊರಬಂದ ನಂತರವೂ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು. ಇದರ ನಡುವೆಯೇ ಅಧಿಕೃತವಾಗಿ ಲವ್​ ಬ್ರೇಕಪ್​ ಮಾಡಿಕೊಳ್ಳುವ ಮೂಲಕ ಅಸಮಾಧಾನ ಇರುವುದು ನಿಜ ಎಂಬುದನ್ನು ಸಾಬೀತು ಮಾಡಿದರು. (ಏಜೆನ್ಸೀಸ್​)

  ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

  ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ

  ನಟಿ ತ್ರಿಷಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉದ್ಯಮಿಯನ್ನು ವರಿಸಲಿದ್ದಾರೆ 37 ವರ್ಷದ ಸ್ಟಾರ್​ ನಟಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts