More

    ಮರುಭೂಮಿಯಲ್ಲಿ ಪ್ರವಾಹ.. ಭಾರೀ ಮಳೆಗೆ ತತ್ತರಿಸಿದ ದುಬೈ!

    ದುಬೈ(ಯುನೈಟೆಡ್ ಅರಬ್ ಎಮಿರೇಟ್ಸ್ ): ಚಂಡಮಾರುತವೊಂದು ಮರುಭೂಮಿ ನೆಲವಾದ ನೆಲವನ್ನು ನಡುಗಿಸುತ್ತಿದೆ. ಎಪ್ರಿಲ್ 15ರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಈ ಮಾಯಾನಗರಿ ತತ್ತರಿಸಿ ಹೋಗಿದೆ. ಪ್ರವಾಹದಿಂದಾಗಿ 18 ಜನ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ತಂದ ಆತಂಕ!

    ಸದಾ ಒಣ ಹವೆ ಹಾಗೂ ಅಧಿಕ ತಾಪಮಾನ ಕಾಣುವ ದುಬೈ ಜನ ಪ್ರವಾಹದ ಹೊಡೆತ ನೋಡಿ ಮೂಕವಿಸ್ಮೀತರಾಗಿದ್ದಾರೆ. ಭಾರಿ ಮಳೆಯಿಂದ ಹತ್ತಾರು ವಿಮಾನಗಳು ರದ್ದಾಗಿವೆ.

    ಪ್ರವಾಹದಿಂದ ದುಬೈ ನಗರವು ಸ್ತಬ್ಧಗೊಂಡಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ವಿಶ್ವದ ಅತ್ಯಂತ ಜನನಿಬಿಡ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತವಾಗಿರುವುದರಿಂದ ವಿಮಾನಗಳ ಪ್ರವೇಶ ತಡೆದು ಬೇರೆ ಕಡೆ ಕಳೂಹಿಸಲಾಗಿದೆ. 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

    ಕೆಲವು ವಿಮಾನಗಳು ತಡವಾಗಿ ಓಡುತ್ತಿದ್ದರೆ, ಇನ್ನು ಕೆಲವನ್ನು ರದ್ದುಗೊಳಿಸಲಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ವಿವರಿಸುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅರ್ಧ ಮುಳುಗಿದ ಕಾರುಗಳು ಕಂಡುಬಂದಿವೆ. ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳು ಜಲಾವೃತಗೊಂಡಿವೆ.

    ಪ್ರಮುಖ ಶಾಪಿಂಗ್ ಕೇಂದ್ರಗಳಾದ ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್ ಸೇರಿದಂತೆ ಪ್ರಮುಖ ಪ್ರದೇಶಗಳು ಜಲಾವೃತಗೊಂಡಿವೆ. ದುಬೈ ಮೆಟ್ರೋ ನಿಲ್ದಾಣದಲ್ಲಿ 5ರಿಂದ ಆರು ಅಡಿ ನೀರು ನಿಂತಿದ್ದು, . ರಸ್ತೆಗಳು ಹಾಳಾಗಿವೆ. ವಸತಿ ಸಮುಚ್ಚಯಗಳು ಮುಳುಗಿ ಹೋಗಿವೆ.

    ಚಂಡಮಾರುತದ ಪ್ರಭಾವ ದುಬೈನ ಆಚೆಗೂ ವಿಸ್ತರಿಸಿದೆ. ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹಲವು ಖಾಸಗಿ ಕಂಪನಿಗಳೂ ಇದೇ ಹಾದಿಯಲ್ಲಿ ಸಾಗುತ್ತಿವೆ. ಕಳೆದ ವರ್ಷ ಕಾಪ್​28 ಯುಎನ್​ ಹವಾಮಾನ ಸಮ್ಮೇಳನದಲ್ಲಿ ಭಾಗವಹಿಸಿದವರು ಯುಎಇ ನೈಸರ್ಗಿಕ ವಿಕೋಪಗಲನ್ನು ಕಾಡಬಹುದು ಎಂದು ಎಚ್ಚರಿಸಿದ್ದರು. ಒಟ್ಟಾರೆ ಹೇಳುವುದಾದರೆ ಈ ಅತಿವೃಷ್ಟಿ ಐಷಾರಾಮಿ ಜೀವನ ನಡೆಸುತ್ತಿದ್ದ ದುಬೈ ಜನರ ಆತಂಕಕ್ಕೆ ಕಾರಣವಾಗಿದೆ.

    ಅಯೋಧ್ಯೆಗೆ ಭಕ್ತಸಾಗರ: ಮುಂಜಾನೆ 3.30ರಿಂದ ದರ್ಶನ ಭಾಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts