More

  ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ತಂದ ಆತಂಕ!

  ಕೋಲ್ಕತ್ತಾ: ದೇಶಾದ್ಯಂತ ಶ್ರೀರಾಮನವಮಿ ಸಂಭ್ರಮ ಮನೆ ಮಾಡಿದ್ದರೆ, ಅತ್ತ ಪಶ್ಚಿಮ ಬಂಗಾಳದಲ್ಲಿ ಆತಂಕ ಎದುರಾಗಿದೆ. ಹಿಂದೂ ಜಾಗರಣ್ ಮಂಚ್ 5,000 ಕ್ಕೂ ಹೆಚ್ಚು ರಾಮನವಮಿ ಮೆರವಣಿಗೆಗಳನ್ನು ನಡೆಸಲು ಸಿದ್ಧವಾಗುತ್ತಿದ್ದಂತೆ ಚುನಾವಣೆ ಹೊತ್ತಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ದೃಷ್ಟಿಯಿಂದ ಟಿಎಂಸಿ ನೇತೃತ್ವದ ಮಮತಾ ಬ್ಯಾನರ್ಜಿ ಮೆರವಣಿಗೆಗಳನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ರಾಜ್ಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ.

  ಇದನ್ನೂ ಓದಿ: ಅಯೋಧ್ಯೆಗೆ ಭಕ್ತಸಾಗರ: ಮುಂಜಾನೆ 3.30ರಿಂದ ದರ್ಶನ ಭಾಗ್ಯ

  ಒಂದು ಸಮುದಾಯದ ಓಲೈಕೆ ರಾಜಕಾರಣದಲ್ಲಿ ಮುಳುಗಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ರಾಮಭಕ್ತರು ಆಯೋಜಿಸಿರುವ ಶೋಭಾ ಯಾತ್ರೆಗಳನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರೂ, ಹಿಂಸಾಚಾರದ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ರಾಮನವಮಿ ಆಚರಣೆ ಮೇಲೆ ಪಶ್ಚಿಮ ಬಂಗಾಳದಲ್ಲಿ ಆತಂಕದ ಕರಿನೆರಳು ಕವಿಯುವಂತಾಗಿದೆ.

  ಅಯೋಧ್ಯೆಯಲ್ಲಿ ಭವ್ಯ ಮಂದಿರದಲ್ಲಿ ರಾಮಲಲ್ಲಾ ದೇವರು ಸಿಂಹಾಸನಾರೂಢನಾದ ಮೊದಲ ರಾಮನವಮಿ ಇದಾಗಿದೆ. ಟಿಎಂಸಿ ಎಂದಿನಂತೆ ರಾಮನವಮಿ ಆಚರಣೆಯನ್ನು ನಿಲ್ಲಿಸಲು ಪಿತೂರಿ ನಡೆಸಿದೆ ಆದರೆ ಸತ್ಯ ಮಾತ್ರ ಗೆಲ್ಲುತ್ತದೆ. ಇದೇ ವಿಷಯವಾಗಿ ಮೆರವಣಿಗೆಗಳನ್ನು ನಡೆಸಲು ನ್ಯಾಯಾಲಯದಿಂದ ಅನುಮತಿ ದೊರೆತಿದ್ದು, ಮೆರವಣಿಗೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಲಾಗುವುದು. ನಾನು ಬಂಗಾಳದ ನನ್ನ ಎಲ್ಲ ಸಹೋದರ ಸಹೋದರಿಯರನ್ನು ಅಭಿನಂದಿಸುತ್ತೇನೆ ಎಂದು ದಕ್ಷಿಣ ದಿನಾಜ್‌ಪುರದ ಬಲೂರ್‌ಘಾಟ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

  ಹಬ್ಬದ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಬಹುದು ಎಂದು ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ ಮತ್ತು ಟಿಎಂಸಿ ಸರ್ಕಾರವು ಮುಸ್ಲಿಂರನ್ನು ಓಲೈಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲಾಗಿದೆ.

  See also  ಉಚಿತ ಅಯೋಧ್ಯಾ ಪ್ರವಾಸದ ಆಶ್ವಾಸನೆ ಕೊಟ್ಟ ಅಭ್ಯರ್ಥಿಗೆ ನೋಟೀಸ್ !

  ಹಿಂದೂ ಜಾಗರಣ್ ಮಂಚ್ ಮೆರವಣಿಗೆಗಳು: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಾತ್​ ನೀಡಿರುವ ಹಿಂದೂ ಜಾಗರಣ್ ಮಂಚ್ ಪ್ರತಿ ಜಿಲ್ಲೆಯಲ್ಲಿ ಮತ್ತು ವಾರ್ಡ್ ಮತ್ತು ಪಂಚಾಯತ್ ಮಟ್ಟದಲ್ಲಿ ಮೆರವಣಿಗೆಗಳನ್ನು ನಡೆಸಲಾಗುವುದು ಎಂದು ಘೋಷಿಸಿದೆ. ಬರಾಸತ್, ಸಿಲಿಗುರಿ ಮತ್ತು ಕೋಲ್ಕತ್ತಾದ ಬುರ್ರಾಬಜಾರ್‌ನ ರಾಮಮಂದಿರದಲ್ಲಿ ದೊಡ್ಡ ಮೆರವಣಿಗೆಗಳನ್ನು ಕೈಗೊಳ್ಳಲಾಗುತ್ತದೆ .

  ಎಲ್ಲಾ ಧರ್ಮಗಳ ಜನರು ತಮ್ಮ ಹಬ್ಬಗಳನ್ನು ಸಮಾನವಾಗಿ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ನಾನು ಜನರಿಗೆ ಮನವಿ ಮಾಡಲು ಬಯಸುತ್ತೇನೆ ಮತ್ತು ಇತರರು ಯಾವುದೇ ಅಡೆತಡೆಗಳನ್ನು ಸೃಷ್ಟಿಸಬಾರದು ಎಂದು ಮಂಚ್‌ನ ಸುಭಜಿತ್ ರಾಯ್ ತಿಳಿಸಿದ್ದಾರೆ.

  ಕಳೆದ ವರ್ಷ ಭಾರೀ ಹಿಂಸಾಚಾರ ಮತ್ತು ಕಲ್ಲು ತೂರಾಟವನ್ನು ಕಂಡ ಹೌರಾದಲ್ಲಿ ರಾಮನವಮಿ ಮೆರವಣಿಗೆ ನಡೆಸಲು ವಿಶ್ವ ಹಿಂದೂ ಪರಿಷತ್ ಮತ್ತು ಅಂಜನಿ ಪುತ್ರ ಸೇನೆಗೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.

  ಹೌರಾ ಬಜರಂಗದಳದ ಪ್ರಮುಖ್ ರವಿ ಚೌಧರಿ ಮಾತನಾಡಿ, ಸರಳ ಮೆರವಣಿಗೆಗಾಗಿ ನಾವು ನ್ಯಾಯಾಲಯದ ಬಾಗಿಲು ತಟ್ಟಿರುವುದು ದುಃಖಕರವಾಗಿದೆ. ನ್ಯಾಯಾಲಯದ ಆದೇಶವನ್ನು ನಾವು ಸ್ವಾಗತಿಸುತ್ತೇವೆ ಮತ್ತು ನ್ಯಾಯಾಲಯದ ನಿರ್ದೇಶನದಂತೆ ಮೆರವಣಿಗೆಗಳನ್ನು ಕೈಗೊಳ್ಳಲಾಗುವುದು.

  “ರಾಮ ನಮ್ಮ ಸಂಸ್ಕೃತಿಯ ಭಾಗ. ಶೋಭಾ ಯಾತ್ರೆ ಅಥವಾ ಇನ್ಯಾವುದೇ ಮೆರವಣಿಗೆಯಲ್ಲಿ ಇತರರಿಗೆ ಇಷ್ಟವಾಗಲಿ ಅಥವಾ ಇಷ್ಟಪಡದಿರಲಿ ನಾವು ಖಂಡಿತವಾಗಿಯೂ ಪಾಲ್ಗೊಳ್ಳುತ್ತೇವೆ. ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಹೌರಾ ನಿವಾಸಿ ವಿಷ್ಣು ತ್ರಿವೇದಿ ಹೇಳಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts