

ದುಬೈ:
ದುಬೈಯ ನ್ಯೂ ಅಕಾಡೆಮಿ ಸ್ಕೂಲ್ನಲ್ಲಿ ವಿಂಶತಿ ಉತ್ಸವದ ಸ್ಮರಣ ಸಂಚಿಕೆಯಾದ ವಿಪ್ರ ಸ್ಪಂದನ
ಸಂಚಿಕೆಯನ್ನು ಹಿರಿಯ ಉದ್ಯಮಿ ಪುತ್ತಿಗೆ ವಾಸುದೇವ ಭಟ್ ಮತ್ತು ಗೋಪಿನಾಥ್ ಏಳಿಚಿತ್ತಾಯರು ಸಂಪಾದಕ ಮಂಡಳಿಯೊಡಗೂಡಿ ಲೋಕಾರ್ಪಣೆ ಮಾಡಿದರು.
ಈ ಸಂಧರ್ಭದಲ್ಲಿ ಬ್ರಾಹ್ಮಣ ಸಮಾಜದ ಸದಸ್ಯರಿಗಾಗಿ ಸಂಸ್ಕೃತಿ ಸಂಧ್ಯಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಪುಟಾಣಿಗಳಿಗೆ ಶ್ಲೋಕ ಸ್ಪರ್ಧೆ ಮತ್ತು ಇತರ ವಯೋಮಾನದ ಮಕ್ಕಳಿಗೆ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ
ಬಹುಮಾನ ವಿತರಿಸಲಾಯಿತು. ನಂತರ ಸಮಾಜದ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿಪ್ರ ಸ್ಪಂದನದಲ್ಲಿ ಯುಎಇ ಬ್ರಾಹ್ಮಣ ಸಮಾಜದ 20 ವರ್ಷಗಳ ಸಾಧನೆಯ ಹೆಜ್ಜೆ ಗುರುತುಗಳಿವೆ. ಸುಧಾಕರ ರಾವ್ ಪೇಜಾವರ ಅವರು ಗೌರವ ಸಂಪಾದಕರಾಗಿದ್ದು, ಹಿರಿಯ ಲೇಖಕ ಗೋಪಿನಾಥ್ ರಾವ್ ಪ್ರಧಾನ ಸಂಪಾದಕರಾಗಿ, ಬರಹಗಾರ ಶ್ರೀನಿವಾಸ್ ಆಚಾರ್ ಮತ್ತು ಯುಎಇ ನಿರೂಪಕಿ ಆರತಿ ಅಡಿಗ, ಶಿವರಾಮ್ ಭಟ್, ಪ್ರಕಾಶ್ ಉಪಾಧ್ಯ, ಸುಧೀಂದ್ರ ಐತಾಳ್, ರಾಮಮೂರ್ತಿ ಮತ್ತಿತರರಿದ್ದಾರೆ.