ದುಬೈನಲ್ಲಿ ಜಾಯ್ ಅಲುಕ್ಯಾಸ್ ಆತ್ಮಚರಿತ್ರೆ ಸೈಡಿಂಗ್ ಚಾಯ್ ಆರೇಬಿಕ್ ಆವೃತ್ತಿ ಅನಾವರಣ

Published on

ದುಬೈ:

ಜೋಯಾಲುಕ್ಯಾಸ್ ಸಮೂಹದ ಸಿಎಂಡಿ ಜಾಯ್ ಅಲುಕ್ಯಾಸ್ ಅವರ ಆತ್ಮಚರಿತ್ರೆ ಸೈಡಿಂಗ್ ಚಾಯ್ನ ಬಹು ನಿರೀಕ್ಷಿತ ಆರೇಬಿಕ್ ಆವೃತ್ತಿಯು ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.

ಯುಎಇ ಆರ್ಥಿಕ ಸಚಿವಾಲಯದ ವಿದೇಶಾಂಗ ವ್ಯವಹಾರದ ರಾಜ್ಯ ಸಚಿವ ಡಾ. ಥಾನಿ ಬಿನ್ ಅಹ್ಮದ್ ಆಲ್ ಝಿಯೋದಿ ಮಾತನಾಡಿ, ಈ ಕೃತಿ ಜಾಯ್ ಅಲುಕ್ಯಾಸ್ ಉದ್ಯಮಶೀಲತೆಯ ಮನೋಭಾವದ ಕಥೆಯಾಗಿದೆ. ಭಾರತದಿಂದ ಪ್ರಾರಂಭವಾದ ಮತ್ತು ಜಾಗತಿಕವಾಗಿ ವಿಸ್ತರಿಸಿರುವ, ಯುಎಇಯಲ್ಲಿಯೂ ಪ್ರವರ್ಧಮಾನಕ್ಕೆ ಬಂದ ಇಂತಹ ಯಶೋಗಾಥೆಗಳ ಬಗ್ಗೆ ನನಗೆ ಹೆಮ್ಮೆ. ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನೆರವಾಗಿದ್ದಾರೆ ಎಂದರು.

ಚಾಯ್ ಅಲುಕ್ಯಾಸ್ ಅವರ ಆತ್ಮಚರಿತ್ರೆಯಾದ ಸೈಡಿಂಗ್ ಜಾಯ್ ಪುಸ್ತಕದ ಆರೇಬಿಕ್ ಆವೃತ್ತಿಯ ಅನಾವರಣ ಸಮಾರಂಭವನ್ನು ಸಂಜೆ ಆಚರಿಸಲಾಯಿತು. ಇದು ಒಬ್ಬ ವ್ಯಕ್ತಿಯ ಸಾಧನೆಗಳ ಕಥೆಯಾಗಿ ಮಾತ್ರವಲ್ಲದೆ ಎಲ್ಲಾ ಬಗೆಯ ವಾಣಿಜಿಕ ವ್ಯವಹಾರಗಳಿಗೆ ಯುಎಇಯ ಪೋಷಣೆ ಮತ್ತು ಸ್ವಾಗತಾರ್ಹ ಪರಿಸರ ವ್ಯವಸ್ಥೆ ಸಾಕ್ಷಿಯಾಗಿದೆ ಎಂದರು.

ಜಾಯ್ ಅಲುಕ್ಯಾಸ್ ಅವರು ಮಾತನಾಡಿ, ಅರಬ್ ಜಗತ್ತಿಗೆ ಸಾಧನೆಯ ಸಂತಸವನ್ನು ಪಸರಿಸುವುದು ಒಂದು ಕನಸಾಗಿತ್ತು. ಯುಎಇ ನನಗೆ ಮತ್ತು ಇತರ ಅನೇಕರಿಗೆ ಕನಸು ಕಾಣಲು, ಆ ಕನಸುಗಳನ್ನು ಸಾಕಾರಗೊಳಿಸಲು ಅವಕಾಶ ನೀಡಿದೆ. ಈ ಪುಸ್ತಕವು ಅದರ ಪ್ರತಿಬಿಂಬ ಎಂದರು. ವ್ಯಾಪಾರಕ್ಕಾಗಿ ಇಂತಹ ಬೆಂಬಲದ ವಾತಾವರಣವನ್ನು ಸೃಷ್ಟಿಸಿದ ಆರೇಬಿಕ್ ರಾಷ್ಟ್ರದ ನಾಯಕರಿಗೆ ನನ್ನ ಮನದಾಳದ ಧನ್ಯವಾದ, ಎಲ್ಲಾ ಗ್ರಾಹಕರಿಗೆ, ಮತ್ತು ಬೆಂಬಲಿಗರಿಗೆ, ಧನ್ಯವಾದ. ಈ ಕಥೆ ನನಗೆ ಸೇರಿದ್ದಂತೆ ನಿಮ್ಮ ಪ್ರತಿಯೊಬ್ಬರಿಗೂ ಸೇರಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಜೋಯಾಲುಕ್ಯಾಸ್ ಸಮೂಹದ ಅಧ್ಯಕ್ಷರೂ ಹಾಗೂ ಕೃತಿಯ ಲೇಖಕರೂ ಆದ ಜಾಯ್ ಅಲುಕ್ಯಾಸ್ ಅವರು ತಮ್ಮ ಕೃತಿ ಮತ್ತು ತಮ್ಮ ಸಾಹಸಗಾಥೆಯ ಯಶಸ್ಸಿನ ಸಂಭ್ರಮಾಚರಣೆಯ ಜೊತೆಗೆ ಯುಎಇಯ ಸಮುದಾಯದಿಂದ ತಾವು ಪಡೆದ ನಿರಂತರ ಪ್ರೀತಿ- ಬೆಂಬಲಕ್ಕೆ ಕೃತಜ್ಞತಾಪೂರ್ವಕವಾಗಿ ಈ ಸಮಾರಂಭವನ್ನು ಆಯೋಜಿಸಿದ್ದರು.

ದೂರದೃಷ್ಟಿಯ ವ್ಯಾಪಾರ ವಹಿವಾಟನ್ನು ವಿಸ್ತರಿಸಿ ಬೆಳೆಸುವಲ್ಲಿ ಯುಎಇಯ ಪಾತ್ರಕ್ಕೆ ಕೃತಜ್ಞತಾಪೂರ್ವಕವಾಗಿ ಮೂಡಿಬಂದ ಸೈಡಿಂಗ್ ಚಾಯ್‌ನ ಆರೇಬಿಕ್ ಆವೃತ್ತಿಯು ದುಬೈನ ಕ್ರಿಯಾತ್ಮಕ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಅದು ಜಾಯ್ ಆಲುಕ್ಯಾಸ್‌ನಂತಹ ಅಸಂಖ್ಯಾತ ಉದ್ಯಮಿಗಳಿಗೆ ಪ್ರೇರಣೆ ನೀಡಿದೆ.

ಕೇರಳದ ತ್ರಿಶೂರ್‌ನಲ್ಲಿ ಪ್ರಾರಂಭವಾದ ಜೋಯಾಲುಕ್ಯಾಸ್ ಬ್ರಾಂಡ್ ಜಾಗತಿಕ ಯಶಸ್ಸಿನವರೆಗೆ, ಸ್ಥಿತಿಸ್ಥಾಪಕತ್ವ, ನಾವೀನ್ಯತೆ ಮತ್ತು ತನ್ನ ಗ್ರಾಹಕರಿಗೆ ನಿರಂತರ ಬದ್ಧತೆಯಿಂದ ರೂಪುಗೊಂಡ ಜಾಯ್ ಅಲುಕ್ಕಾಸ್ ಅವರ ಪ್ರಯಾಣವನ್ನು ಸೈಡಿಂಗ್ ಜಾಯ್ ವಿವರಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net