ಅರಿವಿದ್ದರೂ ಕಾಂಗ್ರೆಸ್​ನಿಂದ ದ್ವಂದ್ವ ಹೇಳಿಕೆ

klr mp mallesh babu
ಮಲ್ಲೇಶಬಾಬು
Published on

ಕೋಲಾರ: ದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ಸಹ ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಕಾಂಗ್ರೆಸ್​ನವರು ಬಿಡಬೇಕು ಎಂದು ಸಂಸದ ಎಂ.ಮಲ್ಲೇಶ್​ ಬಾಬು ಕಿವಿಮಾತು ಹೇಳಿದರು.

ನಗರದ ಸಂಸದರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೆಹಲ್ಗಾವ್​ ಪ್ರವಾಸಿ ಸ್ಥಳದ ಮೇಲೆ ಉಗ್ರರು ದಾಳಿ ಮಾಡಿ 23 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇದರ ಬಗ್ಗೆ ಸಾ ತೋರಿಸಿ ಎಂದರೆ ಸಾಧ್ಯನ. ಇನ್ನು ಸಿನಿಮಾ ತೋರಿಸಬೇಕು ಎಷ್ಟೇ ಎಂದು ತಿಳಿಸಿದರು.

ಉಗ್ರರ ದಾಳಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರವು ಪ್ರತಿಯುತ್ತರ ನೀಡುವ ಕೆಲಸ ಮಾಡುತ್ತಿದೆ. ಇದಕ್ಕೆ ತಕ್ಕಂತೆ ಶತ್ರು ರಾಷ್ಟ್ರಕ್ಕೆ ಪಾಠ ಕಲಿಸುವ ಕೆಲಸ ಸೈನಿಕರು, ಯೋಧರು ಮಾಡುತ್ತಿದ್ದಾರೆ ಎಂದರು.

ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ದೇಶದಲ್ಲಿ 7&8 ಕಡೆ ವಾಯು ನೆಲೆಗಳನ್ನು ಧ್ವಂಸ ಮಾಡಿರುವುದು ಸೈನಿಕರ ಸಾಧನೆ ಅದು. ಟ್ರಂಪ್​ ಮಾತು ಕೇಳಿ ನಾವು ಸುಮ್ಮನಾಗಿಲ್ಲ. ಪರಿಸ್ಥಿತಿ ಮೇರೆಗೆ ಬೆಳವಣಿಗೆಗಳು ಆಗುತ್ತಿವೆ. ಕಾಂಗ್ರೆಸ್​ನವರು ಹೇಳುತ್ತಿರುವ ಮಾತು, ಟ್ರಂಪ್​ ಹೇಳಿದ ಮಾತು ನಿಜ ಅಂತ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪಾಕಿಸ್ತಾನದವರೆ ದೇಶದ ಮೂರು ಮಂದಿಗೆ ರಕ್ಷಣಾ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಟ್ರಂಪ್​ ದಿನಕ್ಕೊಂದು ಮಾತು ಹೇಳುತ್ತಿದ್ದು ನಂಬಲು ಸಾಧ್ಯವಿಲ್ಲ ಎಂದರು.

ಪಾಕಿಸ್ತಾನದ ಜತೆ ಟ್ರಂಪ್​ ಏನು ವ್ಯವಹಾರ ಮಾಡಲು ಸಾಧ್ಯ...?, ನಮ್ಮ ದೇಶದೊಂದಿಗೆ ವ್ಯವಹಾರ ಮಾಡಿದರೆ ಅನುಕೂಲವಾಗುತ್ತದೆ. ಆರ್ಥಿಕವಾಗಿ, ಸಾಮಾಜಿಕವಾಗಿ ನಮ್ಮ ದೇಶವು ಮುಂದಿದೆ. ಯುದ್ಧದ ಪರಿಸ್ಥಿತಿ ಬೇಡ ಅಂತ ಅಮೆರಿಕಾ ಜತೆಗೆ ಇತರೆ ದೇಶಗಳವರು ಹೇಳಿದರು. ಆದರೆ ಪಾಕಿಸ್ತಾದವರು ಉಲ್ಲಂನೆ ಮಾಡುತ್ತಲೆ ಇದ್ದಾರೆ. ಅವರಿಗೆ ಪ್ರತಿಯುತ್ತರ ನೀಡುವ ಕೆಲಸ ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಹೇಳುವುದು ಬಿಟ್ಟು ಮಾತುಗಳನ್ನು ಹಾಡುವುದನ್ನು ಬಿಡಬೇಕು. ವಿಪಕ್ಷ ಸ್ಥಾನದಲ್ಲಿ ಇದ್ದವರು ಜತೆಗೆ ನಿಂತುಕೊಂಡು ಸೈನಿಕರಿಗೆ ಆಸ್ಮಸ್ಥೆ$ರ್ಯ ತುಂಬಬೇಕು. ಆರ್ಥಿಕವಾಗಿ, ರಾಜಕೀಯವಾಗಿ, ರಕ್ಷಣೆಯಲ್ಲಿ ನಾವು ಬಲಿಷ್ಠವಾಗಿ ಇದ್ದೇವೆ. ಯೋಧರಿಗೆ ಧೈರ್ಯ ತುಂಬುವುದು ಬಿಟ್ಟು ಹೇಳಿಕೆಗಳ ಮೂಲಕ ಆತ್ಮಸ್ಥೆ$ರ್ಯ ಕುಗ್ಗಿಸುವುದು ಎಷ್ಟು ಮಾತ್ರ ಸರಿ ಎಂದು ಕುಟುಕಿದರು.

ಸಿಸ್ಕೆ$ಯರ್​ ತೀರ್ಮಾನವಾದರು ಪಾಕ್​ನವರು ದಾಳಿ ಮಾಡಿದರು, ಆದರೂ ನಮ್ಮವರು ರಾವಾಲ್​ಪಿಂಡಿ ಸೇರಿದಂತೆ ಹಲವು ಜಾಗಗಳನ್ನ ಧ್ವಂಸ ಮಾಡಿದ್ದಾರೆ. ಪ್ರಧಾನಿ, ರಕ್ಷಣಾ ಮಂತ್ರಿ, ಹೋಂ ಮಿನಿಸ್ಟರ್​ ಒಟ್ಟಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಸೈನಿಕರನ್ನು ಭೇಟಿ ಮಾಡಿ ಧೈರ್ಯ ತುಂಬಿ ಬರುವುದು ತಪ್ಪಾ..?, ಇದನ್ನು ಕಾಂಗ್ರೆಸ್​ನವರು ತಪು$್ಪ ಆರ್ಥ ಮಾಡಿಕೊಳ್ಳೊದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು.

* ಟಿಕೆಟ್​ ವಿಚಾರ ಹಕೈಮಾಂಡರ್​ಗೆ ಬಿಟ್ಟಿದ್ದು

ಬಿಜೆಪಿ ರಾಜ್ಯ ಅಧ್ಯಕ್ಷರ ಜತೆ ಟಿಕೇಟ್​ ಹಂಚಿಕೆ ಕುರಿತು ಚರ್ಚಿಸಿ ಕ್ರಮಕೈಗೊಳ್ಳುತ್ತಾರೆ. ಕಳೆದ ಬಾರಿ ಬಂಗಾರಪೇಟೆ ಅಕಾಂಯಾಗಿದ್ದೆ, ಆನಂತರ ಸಂಸತ್​ ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದರು, ಹೈಕಮಾಂಡ್​ ಸೂಚನೆಗೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.

* ಒಟ್ಟಾಗಿಯೇ ಚುನಾವಣೆಯ ಸ್ಪರ್ಧೆ

ಕೋಮುಲ್​, ಡಿಸಿಸಿ ಬ್ಯಾಂಕ್​ ಚುನಾವಣೆ ಕುರಿತು ಜೆಡಿಎಸ್​&ಬಿಜೆಪಿ ಅವರು ಒಗ್ಗಾಟಿ ಹೋಗಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ, ಅಚೆ ಏನಾಗತ್ತೊ ಅದೇಲ್ಲ ರಾಜಕೀಯ, ಈ ಬಗ್ಗೆ ಈಗಾಗಲೇ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೂ ತಿಳಿಸಿದ್ದೇವೆ. ಅತಿ ಶ್ರೀದಲ್ಲೇ ಚರ್ಚಿಸಿ 4&5 ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ. ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆಯಿದ್ದು ಅದು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಲಿದೆ, ಅವರ ಕಿತ್ತಾಟ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಅವಕಾಶ ಸಿಗುತ್ತದೆ ಎಂದು ಹೇಳಿದರು.

ರಾಜಕೀಯವಾಗಿ ಅಭಿವೃದ್ಧಿಹೊಂದಲು ನಾವು ಮುಂದಿದ್ದೆವೆ, ಆದರೆ ಕೋಲಾರ, ಮಾಲೂರು, ಬಂಗಾರಪೇಟೆ, ಚಿಂತಾಮಣಿ ಎಂಎಲ್​ಎಗಳು ಚುನಾವಣೆಗಳು ನಿಲ್ಲಲು ಮುಂದಾಗಿದ್ದು, ಅಧಿಕಾರವನ್ನೆಲ್ಲ ಅವರೊಟ್ಟಿಗೆ ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಮುಂದಿನ ಚುನಾವಣೆಗಳಲ್ಲೂ ನಿಂತು ಆ ಅಧಿಕಾರವನ್ನು ಅವರೊಟ್ಟಿಗೆ ಇಟ್ಟುಕೊಂಡಿರಲಿ ಎಂದು ಮಲ್ಲೇಶ್​ ಬಾಬು ಲೇವಡಿ ಮಾಡಿದರು.

* ಕಾಯಂ ಕೆಲಸ ಕೇಳುತ್ತಿದ್ದಾರೆ

ಸುಮಾರು ದಶಕಗಳಿಂದ ಬೆಮೆಲ್​ನಲ್ಲಿ ಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುತ್ತಿರುವವರು ಕೆಲಸ ಕಾಯಂ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಕಂಪನಿಯ ನಿಯಮಗಳ ಆಧಾರದ ಮೇಲೆ ಕ್ರಮವಾಗಲಿದ್ದಾರೆ. ಉತ್ಪಾದನೆ ಹೆಚ್ಚಾಗಬೇಕಾದರೆ ಶಾಖೆಗಳನ್ನು ತೆರೆಯುವ ಅವಶ್ಯಕತೆಯಿದೆ, ಅದ್ದರಿಂದಲೇ ಮಧ್ಯಪ್ರದೇಶದಲ್ಲಿ ಯೂನಿಟ್​ ಪ್ರಾರಂಭಿಸಲು ಮುಂದಾಗಿದ್ದಾರೆ. ಕೆಜಿಎ್​ನಲ್ಲೂ ಉತ್ತಮ ಉತ್ಪಾದನೆ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

* ಭ್ರಷ್ಟಚಾರಕ್ಕೆ ಸರ್ಕಾರ ಉತ್ತರಿಸಬೇಕು

ಜಿಲ್ಲೆಯಲ್ಲಿನ ವಿವಿಧ ತಾಲೂಕುಗಳಿಗೆ ಲೋಕ ಅಯುಕ್ತರ ಭೇಟಿ ನೀಡಿ ಭಷ್ಟಚಾರವನ್ನು ಬಯಲು ಮಾಡುತ್ತಿದ್ದಾರೆ. ಇಲಾಖೆಗಳಲ್ಲಿನ ಲೋಪಗಳನ್ನು ಕಂಡುಹಿಡಿದು ದೂರು ದಾಖಲಿಸುತ್ತಿದ್ದಾರೆ, ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು ಉತ್ತರ ಕೊಡಬೇಕಾಗುತ್ತದೆ ಎಂದು ಮಲ್ಲೇಶ್​ ಬಾಬು ಹೇಳಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಶೇ.40ರಷ್ಟು ಕಮೀಷನ್​ ಬಿಜೆಪಿ ಎಂದು ಆರೋಪ ಮಾಡುತ್ತಿದ್ದು, ಇದೀಗ ಕಾಂಗ್ರೆಸ್​ನವರು ಎಷ್ಟು ಪ್ರಮಾಣದ ಕಮೀಷನ್​ ಸರ್ಕಾರದವರು ಎಂದು ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು.

16ಕೋಲಾರ1

ಎಂ.ಮಲ್ಲೇಶ್​ ಬಾಬು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net