

ಮುಂಬೈ: ಗ್ಲೋಬಲ್ ಪಾಪ್ ಐಕಾನ್ ಗ್ರ್ಯಾಮಿ ಪ್ರಶಸ್ತಿ ವಿಜೇತೆ ದುವಾ ಲಿಪಾ ಭಾರತದಲ್ಲಿ ತಮ್ಮ ಮುಂದಿನ ಕಾರ್ಯಕ್ರಮದ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಹಿಂದಿನ ಪ್ರವಾಸದಲ್ಲಿ ಭಾರತದೊಂದಿಗೆ ವಿಶೇಷ ಬಾಂಧವ್ಯ ಏರ್ಪಟಿದ್ದೆ ಎಂದು ಹೇಳಿದ್ದಾರೆ.
ದುವಾ ಲಿಪಾ ಅವರು 2024 ನವೆಂಬರ್ 30ರಂದು ಮುಂಬೈನಲ್ಲಿ ನಡೆಯಲಿರುವ ಜೊಮಾಟೊ ಫೀಡಿಂಗ್ ಇಂಡಿಯಾ ಕನ್ಸರ್ಟ್-2024ರಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಈ ಹಿಂದಿನ ಭಾರತದ ಭೇಟಿಯನ್ನು ನೆನೆಯುತ್ತಾ, ನನ್ನ ಇತ್ತೀಚಿನ ಭಾರತದ ಭೇಟಿಯು ಆ ಸ್ಥಳವನ್ನು ನಾನು ಎಷ್ಟು ಇಷ್ಟಪಡುತ್ತೇನೆ ಎಂಬುದನ್ನು ನೆನಪಿಸುತ್ತದೆ. ಅದು ನನಗೆ ಮರೆಯಲಾದ ಕ್ಷಣಗಳಾಗಿವೆ. ಅಲ್ಲಿನ ವಾತಾವರಣ ಮತ್ತು ಅಲ್ಲಿರುವವರ ಪ್ರೀತಿ, ಅಭಿಮಾನ ಅದ್ಭುತವಾಗಿದೆ. ನವೆಂಬರ್ನಲ್ಲಿ ನಡೆಯಲಿರುವ ಫೀಡಿಂಗ್ ಇಂಡಿಯಾ ಕನ್ಸರ್ಟ್ ಅಲ್ಲಿ ಜನರನ್ನು ಮನರಂಜಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.
ಭಾರತದ ಭೇಟಿಯ ಸಮಯದಲ್ಲಿನ ಭಾರತದಲ್ಲಿನ ಆಹಾರಪದ್ಧತಿ, ಫ್ಯಾಷನ್, ಆಧ್ಯಾತ್ಮಿಕ ವಿಚಾರ ಎಲ್ಲವನ್ನೂ ತಮ್ಮ ಇಂಡಿಯಾ ಡೈರಿಯಲ್ಲಿ ಫೋಟೊ ಮತ್ತು ವಿಡಿಯೋದಲ್ಲಿ ಸ್ಮರಣೀಯ ನೆನಪುಗಳಾಗಿ ಉಳಿಸಿಕೊಂಡಿದ್ದಾರೆ. ಅದರಲ್ಲಿನ ಕೆಲವು ಫೋಟೊ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು.
2019ರಲ್ಲಿ ಮುಂಬೈನಲ್ಲಿ ಖಾಸಗಿ ಕಂಪನಿಯೊಂದ ಆಯೋಜಿಸಿದ್ದ ಸಂಗೀತ ಉತ್ಸವದಲ್ಲಿ ದುವಾ ಲಿಪಾ ಪ್ರದರ್ಶನ ನೀಡಿದ್ದರು. ನವೆಂಬರ್ನಲ್ಲಿ ನಡೆಯಲಿರುವ ಫೀಡಿಂಗ್ ಇಂಡಿಯಾ ಕನ್ಸರ್ಟ್ನಲ್ಲಿನ ಅವರ ಪ್ರದರ್ಶನವು ಭಾರತದಲ್ಲಿ ಅವರ ಎರಡನೇ ಕಾರ್ಯಕ್ರಮವಾಗಿದೆ. ಈವೆಂಟ್ ಟಿಕೆಟ್ಗಳು HSBC ಕಾರ್ಡುದಾರರಿಗೆ ಆಗಸ್ಟ್ 27ರಂದು ಪೂರ್ವ ಮಾರಾಟದಲ್ಲಿ ಲಭ್ಯವಿದೆ. ಸಾಮಾನ್ಯ ಟಿಕೆಟ್ಗಳ ಮಾರಾಟ ಆಗಸ್ಟ್ 29ರಂದು ಪ್ರಾರಂಭವಾಗಲಿದೆ. (ಏಜೆನ್ಸೀಸ್)