

ಹೈದರಾಬಾದ್: ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ಬಿಡುಗಡೆಯಾಯಿತು. ರಿಲೀಸ್ ಆದ ಬಳಿಕ ಬ್ಲಾಕ್ಬ್ಲಸ್ಟರ್ ಹಿಟ್ ಆಗಿ ಸೃಷ್ಟಿಸಿದ ದಾಖಲೆ ಬಗ್ಗೆ ಹೇಳಬೇಕಿಲ್ಲ ಗೊತ್ತೆ ಇದೆ. ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ಬಚ್ಚನ್, ಕಮಲ್ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ದಿಶಾ ಪಟಾನಿ, ಸಾಸ್ವತ್ ಚಟರ್ಜಿ ಮತ್ತು ಶೋಭನಾ ನಟಿಸಿದ್ದಾರೆ.
ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಟ ಅರ್ಷದ್ ವಾರ್ಸಿ, ಕಲ್ಕಿ 2898 ಎಡಿ ಚಿತ್ರದಲ್ಲಿನ ಪ್ರಭಾಸ್ ನಟನೆಯ ಬಗ್ಗೆ ಕಾಮೆಂಟ್ ಮಾಡಿದ್ದರು. ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಪ್ರಭಾಸ್ ಅವರನ್ನು ಅರ್ಷದ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ನಿರ್ಮಾಪಕ, ನಟರು ಕೂಡ ಪರ ಬ್ಯಾಟಿಂಗ್ ಮಾಡಿ ಅರ್ಷದ್ ಕಾಮೆಂಟ್ ಅನ್ನು ಟೀಕಿಸಿದರು.
ಸರಿಪೋದಾ ಶನಿವಾರಂ ಸಿನಿಮಾ ಪ್ರಚಾರದ ವೇಳೆ ಪ್ರಭಾಸ್ ಅವರನ್ನು ಜೋಕರ್ ಎಂದು ಕರೆದಿರುವುದರ ಬಗ್ಗೆ ಟಾಲಿವುಡ್ನ ನ್ಯಾಚುರಲ್ ಸ್ಟಾರ್ ನಾನಿ ಅವರನ್ನು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಾನಿ, ಆ ವ್ಯಕ್ತಿಯ ಜೀವನದಲ್ಲಿ (ಅರ್ಷದ್ ವಾರ್ಸಿ) ಇದೇ ಅತಿದೊಡ್ಡ ಪ್ರಚಾರ ಆಗಿರಬಹುದು ಎಂದು ನಾನು ಭಾವಿಸುತ್ತೇನೆ. ನೀವು ಅನಗತ್ಯವಾಗಿ ಆ ವ್ಯಕ್ತಿಯ ಹೇಳಿಕೆಯನ್ನು ವೈಭವೀಕರಿಸುತ್ತಿದ್ದೀರಿ ಎಂದು ಹೇಳಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಟಾಲಿವುಡ್ ನಟ ಸುಧೀರ್ ಬಾಬು, ನಮ್ಮ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ಕೈಲಾದಷ್ಟು ಕೆಲಸ ಮಾಡಿರುವ ಪ್ರಭಾಸ್ ಬಗ್ಗೆ ಅರ್ಷದ್ ವಾರ್ಸಿ ನೀಡಿರುವ ಹೇಳಿಕೆಗಳು ತಪ್ಪು. ರಚನಾತ್ಮಕವಾಗಿ ಟೀಕೆ ಮಾಡಿದರೆ ಪರವಾಗಿಲ್ಲ ಆದರೆ ಈ ರೀತಿ ಮಾತನಾಡಬಾರದು. ಅರ್ಷದ್ ಅವರ ಈ ಮಾತುಗಳು ಅವರಿಗೆ ವೃತ್ತಿಪರತೆಯ ಕೊರತೆ ಇದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅವರಿಂದ ಇಂಥಾ ಕಾಮೆಂಟ್ಗಳನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದರು.(ಏಜೆನ್ಸೀಸ್)