

ಹೈದರಾಬಾದ್: ಬೀಡಿ, ಸಿಗರೇಟ್ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ತಿಳಿದಿದ್ದರು ಬಹಳಷ್ಟು ಜನರು ಅದರ ದಾಸರಾಗಿರುತ್ತಾರೆ. ಈ ಅಭ್ಯಾಸ ಇರುವವರು ಅಜಾಗರೂಕರಾಗಿದ್ದರೆ ಕ್ಷಣಾರ್ಧದಲ್ಲಿ ತೊಂದರೆ ಪ್ರಾಣ ತೆಗೆಯುವವರೆಗೂ ಬರುತ್ತದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಸಾಕ್ಷಿಯಾಗಿದೆ.
ಪೆಟ್ರೋಲ್ ಬಂಕ್ನಿಂದ ವ್ಯಕ್ತಿಯೊಬ್ಬ ಕ್ಯಾನ್ನಲ್ಲಿ ಪೆಟ್ರೋಲ್ ಖರೀದಿಸಿ ತಂದಿದ್ದಾನೆ. ದಾರಿ ಮಧ್ಯೆ ಅಂಗಡಿಯೊಂದರ ಬಳಿ ಬೈಕ್ ನಿಲ್ಲಿಸಿ ಪೆಟ್ರೋಲ್ ಇದ್ದ ಡಬ್ಬವನ್ನು ಪಕ್ಕದಲ್ಲಿ ಇಟ್ಟಿದ್ದಾನೆ ಕ್ಯಾನ್ ಒಡೆದು ಪೆಟ್ರೋಲ್ ಎಲ್ಲ ಸುರಿದಿದೆ. ಇದನ್ನು ನೋಡದ ಮತ್ತೊಬ್ಬ ವ್ಯಕ್ತಿ ಬೀಡಿಯನ್ನು ಬೆಂಕಿಕಡ್ಡಿಯಿಂದ ಹೊತ್ತಿಸಿಕೊಂಡು ಕಿರಿಯನ್ನು ಕೆಳಗೆ ಬಿಟ್ಟಿದ್ದಾರೆ. ಆ ಬಳಿಕ ಬೆಂಕಿ ಧಗಧಗನೆ ಹೊತ್ತಿಕೊಂಡು ಅಲ್ಲಿದ್ದ ಬೈಕ್ ಮತ್ತು ಅಂಗಡಿಗೆಲ್ಲಾ ಹಬ್ಬಿದೆ. ಅಲ್ಲೇ ನಿಂತಿದ್ದ ಇಬ್ಬರು ಹೆದರು ಓದಿ ಹೋಗಿದ್ದಾರೆ. ಈ ದೃಶ್ಯಗಳನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ಘಟನೆ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಪಟ್ಟಣದಲ್ಲಿ ನಡೆದಿದೆ. ನೋಡನೋಡುತ್ತಿದ್ದಂತೆ ಬೆಂಕಿ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ಗಳು ಹಾಗೂ ಅಂಗಡಿಗಳಿಗೆ ಹಬ್ಬಿದೆ. ಎಚ್ಚೆತ್ತ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಬೆಂಕಿಯನ್ನು ಕ್ರಮೇಣ ಹತೋಟಿಗೆ ತೆಗೆದುಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)