ಕುಡಿದು ಸಹೋದರಿ ಮನೆಗೇ ಹೋಗಿ ರೇಪ್​ ಮಾಡಿದ; ಗೆಳೆಯನಿಂದ ಅದನ್ನೂ ವಿಡಿಯೋ ಮಾಡಿಸಿದ...

rape
Published on: 

ಬರೇಲಿ: ವ್ಯಕ್ತಿಯೊಬ್ಬ ಪಾನಮತ್ತನಾಗಿ ಸಹೋದರಿ ಮನೆಗೇ ತೆರಳಿ, ವಿವಾಹಿತ ಸೋದರಿ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಮಾತ್ರವಲ್ಲ, ಇದನ್ನು ಆತನ ಗೆಳೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಇಂಥದ್ದೊಂದು ಪ್ರಕರಣ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಈ ಪ್ರಕರಣ ಕಳೆದ ತಿಂಗಳಲ್ಲಿ ನಡೆದಿದ್ದು, ಮರ್ಯಾದೆ ಪ್ರಶ್ನೆ ಎಂದು ಸಹೋದರಿ ಪೊಲೀಸರಿಗೆ ದೂರು ನೀಡದೆ ಸುಮ್ಮನಿದ್ದಳು. ಆದರೆ ಈ ಘಟನೆ ಬಳಿಕವೂ ಆರೋಪಿ ಆಕೆಯ ಮನೆಯ ಹತ್ತಿರ ಸುಳಿದಾಡುವುದು, ಕಿರುಕುಳ ನೀಡುವುದು ಮುಂದುವರಿದಿದ್ದರಿಂದ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ಬಳಿಕ ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗೆ ಮುಂದಾಗಿದ್ದಾರೆ.

ಉತ್ತರಪ್ರದೇಶದ ಮೊರಾದಾಬಾದ್​ನಲ್ಲಿ ಡಿ. 23ರಂದು ಈ ಘಟನೆ ನಡೆದಿದೆ. ಪಾನಮತ್ತನಾದ ಬಳಿಕ ಯಾವುದೋ ಪ್ರಮುಖ ಕೆಲಸ ಇದೆ ಎಂಬ ನೆಪದಲ್ಲಿ ಸ್ನೇಹಿತನ ಜತೆ ತೆರಳಿದ್ದ ಆರೋಪಿ, ಬಳಿಕ ಒಳಗಿನಿಂದ ಚಿಲಕ ಹಾಕಿಕೊಂಡು ಅತ್ಯಾಚಾರ ಎಸಗಿದ್ದಾನೆ. ಇದನ್ನು ಗೆಳೆಯ ವಿಡಿಯೋ ಮಾಡಿಕೊಂಡಿದ್ದಾನೆ. ಮಾತ್ರವಲ್ಲ ವಿಷಯ ಯಾರ ಬಳಿಯಾದರೂ ಬಾಯಿಬಿಟ್ಟರೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಮನೆಯವರ ಒತ್ತಾಯದ ಮೇರೆಗೆ ಹಾಗೂ ಮನೆಯ ಮರ್ಯಾದೆಗಂಜಿ ಘಟನೆ ನಡೆದ ಕೆಲದಿನಗಳಲ್ಲೇ ದೂರು ನೀಡಲು ಆಕೆ ಹಿಂಜರಿದಿದ್ದಳು. (ಏಜೆನ್ಸೀಸ್)