

ರಾಮನಗರ: ಇವತ್ತು ಕುಡುಕರಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ. ರಾಜ್ಯದೆಲ್ಲೆಡೆ ಮದ್ಯಪ್ರಿಯರೇ ಇಂದು ಕೇಂದ್ರ ಬಿಂದು.
ಅದರಲ್ಲೂ ರಾಮನಗರದಲ್ಲಂತೂ ಒಂದಷ್ಟು ಜನ ಬೆಳ್ಳಂಬೆಳಗ್ಗೆ ಫುಲ್ ಟೈಟ್ ಆಗಿ, ಮಾಗಡಿ ಶಾಸಕ ಎ. ಮಂಜು ಅವರಿಗೆ ಬಹಿರಂಗವಾಗಿ ಆವಾಜ್ ಹಾಕಿದ್ದಾರೆ. ಮಾಗಡಿ ತಾಲೂಕಿನ ಬಸವನಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ.
ಎ.ಮಂಜು ಅವರು ನೀಡಿದ್ದ ಹಳೇ ಭರವಸೆಗಳನ್ನೆಲ್ಲ ನೆನಪಿಸಿಕೊಂಡು ಬೈದಿದ್ದಾರೆ. ಎಣ್ಣೆ ಹೊಟ್ಟೆಗೆ ಹೋಗುತ್ತಿದ್ದಂತೆ ಡೋಂಟ್ ಕೇರ್ ಮೂಡ್ಗೆ ಜಾರಿದ ಒಂದಷ್ಟು ಜನರು, ಎ. ಮಂಜು ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ.
ರಸ್ತೆ ಕಾಮಗಾರಿ ಪೂಜೆಗೆ ಸಂಬಂಧಪಟ್ಟಂತೆ ಎ. ಮಂಜು ಅವರು ಇಂದು ಬಸವನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಷ್ಟರಲ್ಲಾಗಲೇ ಕುಡಿದು, ಟೈಟ್ ಆಗಿದ್ದವರು, ಗ್ರಾಮದ ಹಾಲಿನ ಡೇರಿ ಸೂಪರ್ ಸೀಡ್ ಆದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಶಾಸಕರಿಗೆ ಬಹಿರಂಗವಾಗಿ ಆವಾಜ್ ಹಾಕಿದ್ದಾರೆ. ನಮ್ಮೂರಿನಲ್ಲಿ ಏನು ಕೆಲಸ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. (ದಿಗ್ವಿಜಯ ನ್ಯೂಸ್)