

ಬಾಗಲಕೋಟೆ: ಬಾದಾಮಿ ಮತಕ್ಷೇತ್ರ ವ್ಯಾಪ್ತಿಯ ಗುಳೇದಗುಡ್ಡ ಪಟ್ಟಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕುಡುಕನೋರ್ವ ಸಿಕ್ಕಾಪಟೆ ಕಾಟ ಕೊಟ್ಟ ಘಟನೆ ನಡೆದಿದೆ.
ಭರ್ತಿ ಎಣ್ಣೆ ಹಾಕಿದ್ದ ಈ ಯುವಕ ಸಿದ್ದರಾಮಯ್ಯ ಮಾತನಾಡುತ್ತಿದ್ದರೂ ಸುಮ್ಮನಿರದೆ ತಲೆಹರಟೆ ಮಾಡುತ್ತಿದ್ದ. ಹೇ ಸಿದ್ದರಾಮಯ್ಯ..ಹೇ ಸಿದ್ದರಾಮಯ್ಯ ಎಂದು ಏಕವಚನದಲ್ಲಿ ಕೂಗಾಡುತ್ತಿದ್ದ.
ಪಟ್ಟಣದಲ್ಲಿ 35 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಿದ್ದರಾಮಯ್ಯನವರು ಭಾಷಣ ಮಾಡಲು ಪ್ರಾರಂಭಿಸಿದ್ದರು. ಆದರೆ ಈ ಕುಡುಕ ಹಿಂದಿನಿಂದ ಏ ಸಿದ್ದರಾಮಯ್ಯ, ಹೇ...ಸಿದ್ದರಾಮಯ್ಯ ಎಂದು ಕೂಗಾಡಲು ಶುರು ಮಾಡಿದ. ಅವನ ಮಾತಿಗೆ ಅಕ್ಕಪಕ್ಕ ಕುಳಿತಿದ್ದವರು ಚಪ್ಪಾಳೆ ಹೊಡೆಯಲು ಪ್ರಾರಂಭಿಸಿದರು.
ಅಲ್ಲಿಯೇ ಇದ್ದ ಪೊಲೀಸರು ಆತನಿಗೆ ಸುಮ್ಮನೆ ಇರುವಂತೆ ಹೇಳಿದರೂ ಅವನು ಕೇಳಲಿಲ್ಲ. ಬಳಿಕ ಅವರೇ ಕುಡುಕನನ್ನು ಎತ್ತಿ, ಎಳೆದುಕೊಂಡು ಹೋಗಿ ಆಚೆ ಬಿಟ್ಟರು. (ದಿಗ್ವಿಜಯ ನ್ಯೂಸ್)