More

    ಪೊಲೀಸರ ದೌರ್ಜನ್ಯದಿಂದ ಸತ್ತ ಜಾರ್ಜ್​ ಫ್ಲಾಯ್ಡ್​ಗೆ ಏ.3ರಂದು ಕಾಣಿಸಿಕೊಂಡಿತ್ತು ಈ ಕಾಯಿಲೆ…

    ವಾಷಿಂಗ್ಟನ್​: ಅಮೆರಿಕ ಹೊತ್ತಿ ಉರಿಯುತ್ತಿರಲು ಕಾರಣ ಜಾರ್ಜ್​ ಫ್ಲಾಯ್ಡ್​ ಎಂಬ ಕಪ್ಪುವರ್ಣೀಯನನ್ನು ಮಿನ್ನೆಪೊಲಿಸ್​​ ಸಿಟಿಯಲ್ಲಿ ಅಲ್ಲಿನ ಮೂವರು ಶ್ವೇತವರ್ಣೀಯ ಪೊಲೀಸರು ಹತ್ಯೆ ಮಾಡಿದ್ದು. ಅಂದು ಅಂಗಡಿಯೊಂದರಲ್ಲಿ ಸಿಗರೇಟ್​ ಕೊಂಡಿದ್ದ ಜಾರ್ಜ್​, ನಕಲಿ ನೋಟು ಕೊಟ್ಟಿದ್ದ. ಅಂಗಡಿಯವರು ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕಾಗಮಿಸಿದ್ದ ಪೊಲೀಸರು ಅಮಾನುಷವಾಗಿ ವರ್ತಿಸಿ, ಆತನನ್ನು ಕೊಂದೇಬಿಟ್ಟರು.

    ಇದನ್ನೂ ಓದಿ: ಮಹಾಯುದ್ಧದ ಕಾಲದಲ್ಲೇ ಲಾಕ್​ಡೌನ್​ ಇರಲಿಲ್ಲ…ಅಂಥದ್ದರಲ್ಲಿ ಈಗ್ಯಾಕೆ? ಕೇಂದ್ರಕ್ಕೆ ರಾಗಾ ಪ್ರಶ್ನೆ

    ಜಾರ್ಜ್​ ಫ್ಲಾಯ್ಡ್​ನನ್ನು ನೆಲಕ್ಕೆ ಒತ್ತಿ ಮಲಗಿಸಿ, ಆತನ ಕತ್ತಿನ ಮೇಲೆ ಓರ್ವ ಪೊಲೀಸ್​ ಅಧಿಕಾರಿ ತನ್ನ ಮೊಣಕಾಲನ್ನು ಗಟ್ಟಿಯಾಗಿ ಊರಿದ್ದ. ಎಂಟು ನಿಮಿಷಕ್ಕೂ ಅಧಿಕ ಕಾಲ ಹೀಗೆ ಒತ್ತಿ ಹಿಡಿದಿದ್ದ..ಆಗ ಜಾರ್ಜ್​ ನನಗೆ ಉಸಿರಾಡಲು ಆಗುತ್ತಿಲ್ಲ ಎಂದು ನರಳುತ್ತಿದ್ದ. ಈ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಪ್ಪು ವರ್ಣೀಯರು, ಐ ಕಾಂಟ್​ ಬ್ರೀದ್ (ನನಗೆ ಉಸಿರಾಡಲು ಆಗುತ್ತಿಲ್ಲ) ಎಂಬ ಪೋಸ್ಟರ್​ಗಳನ್ನೇ ಹಿಡಿದಿದ್ದರು.

    ಮೇ 25ರಂದು ಪೊಲೀಸರ ಕೈಯಲ್ಲಿ ಕಗ್ಗೊಲೆಯಾದ ಜಾರ್ಜ್​ ಫ್ಲಾಯ್ಡ್​ ವೈದ್ಯಕೀಯ ವರದಿ ಬಂದಿದೆ. ಆತನ ಕುಟುಂಬದವರ ಒಪ್ಪಿಗೆ ಪಡೆದೇ ವೈದ್ಯರು ಬಹಿರಂಗ ಪಡಿಸಿದ್ದಾರೆ. ಜಾರ್ಜ್​ ಫ್ಲಾಯ್ಡ್​ಗೆ ಏ.3ರಂದು ಕರೊನಾ ಪಾಸಿಟಿವ್ ಆಗಿತ್ತು. ಫ್ಲಾಯ್ಡ್​ ಸೋಂಕು ರಹಿತ ಕರೊನಾಕ್ಕೆ ತುತ್ತಾಗಿದ್ದರು ಎಂದೂ ಹೇಳಿದ್ದಾರೆ. ಪೊಲೀಸ್​ ಅಧಿಕಾರಿ ಫ್ಲಾಯ್ಡ್ ಕುತ್ತಿಗೆಯನ್ನು ಒತ್ತಿ ಹಿಡಿದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಹೆನ್ನೆಪಿನ್ ಕೌಂಟಿಯಲ್ಲಿರುವ ವೈದ್ಯಕೀಯ ಪರೀಕ್ಷಕರ ಕಚೇರಿ ಅಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಜನಾಂಗೀಯ ದ್ವೇಷದ ನಡುವೆ ಭಗ್ನವಾಯ್ತು ಗಾಂಧಿ ಪ್ರತಿಮೆ

    ಕೊವಿಡ್​-19 ಅಟ್ಯಾಕ್ ಆಗಿದ್ದರೂ ಅವರ ಶ್ವಾಸಕೋಶಗಳು ಆರೋಗ್ಯಕರವಾಗಿಯೇ ಇದ್ದವು. ಆದರೆ ಹೃದಯದಲ್ಲಿ ಅಪಧಮನಿಗಳು ಕಿರಿದಾಗಿದ್ದವು ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts