VIDEO| ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಪೊಲೀಸರ ಕಾಲರ್ ಹಿಡಿದು ಗಲಾಟೆ ಮಾಡಿದ ಯುವತಿಯರು..

Drunk Woman
Published on

ಮಹಾರಾಷ್ಟ್ರ: ಮದ್ಯದ ಅಮಲಿನಲ್ಲಿ ಮೂವರು ಯುವತಿಯರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ಪ್ರದೇಶದಲ್ಲಿ ಗಲಾಟೆ ಸೃಷ್ಟಿಸಿ ಪೊಲೀಸರೊಂದಿಗೆ ಜಗಳವಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಮಧ್ಯರಾತ್ರಿಯಲ್ಲಿ, ಮದ್ಯದ ಅಮಲಿನಲ್ಲಿ ಮೂವರು ಯುವತಿಯರು ನಿಂದನೆಯಿಂದ ಕೋಪಗೊಂಡ ಪೊಲೀಸರು ಪ್ರವೇಶಿಸಿದಾಗ ಯುವತಿಯೊಬ್ಬಳು ಪೊಲೀಸರಲ್ಲಿ ಕ್ಷಮೆ ಕೇಳುತ್ತಿದ್ದಳು, ಆದರೆ ಇನ್ನೊಬ್ಬ ಯುವತಿ ಪೊಲೀಸರೊಂದಿಗೆ ಜಗಳವಾಡಿದ್ದಾಳೆ. ಮಹಾರಾಷ್ಟ್ರದ ಮುಂಬೈ ಸಮೀಪದ ವಿರಾರ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ವಿಡಿಯೋದಲ್ಲಿ ಮೂವರು ಯುವತಿಯರು ಮಧ್ಯರಾತ್ರಿ ಪೊಲೀಸರೊಂದಿಗೆ ಜಗಳವಾಡುತ್ತಿರುವುದು ಕಂಡು ಬಂದಿದೆ. ಪೊಲೀಸರನ್ನು ನಿಂದಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಈ ಮೂವರು ಕುಡುಕ ಹುಡುಗಿಯರು ಪೊಲೀಸರೊಂದಿಗೆ ಜಗಳವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪೊಲೀಸರು ಮೊದಲು ನೋಡದವರಂತೆ ವರ್ತಿಸಿದರೂ, ಮೂವರಲ್ಲಿ ಒಬ್ಬಳು ಇನ್ಸ್​​ಪೆಕ್ಟರ್ ಕೊರಳಪಟ್ಟಿ ಹಿಡಿದು ಜಗಳಕ್ಕಿಳಿದರು. ಮತ್ತೊಬ್ಬ ಯುವತಿ ಮಹಿಳಾ ಪೇದೆಯ ಕೈಯನ್ನು ಕಚ್ಚಿ ಸಮವಸ್ತ್ರ ಹರಿದಿದ್ದಾಳೆ. ಇದರಿಂದ ಗಾಲಾಟೆಯಾಗಿದೆ.

ಇನ್ನಿಬ್ಬರು ಯುವತಿಯರು ಆಕೆಯನ್ನು ಬಿಡಿಸಲು ಯತ್ನಿಸಿದರಾದರೂ ಆಕೆಯ ಹಿಡಿತವನ್ನು ಬಿಡಲಿಲ್ಲ. ಒಂದು ಕಡೆ ಪೊಲೀಸ್ ಪಡೆ, ಇನ್ನಿಬ್ಬರು ಯುವತಿಯರು ಎಷ್ಟೇ ಪ್ರಯತ್ನಿಸಿದರೂ ಇನ್ಸ್​​ಪೆಕ್ಟರ್ ನನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಸುತ್ತಲಿದ್ದ ಪೊಲೀಸರು ಆಕೆಯ ತಲೆಗೆ ಹೊಡೆದು ದೂರ ಸರಿಸಿದ್ದಾರೆ.

ಪೊಲೀಸರು ಮೂವರನ್ನು ನಿಯಂತ್ರಿಸಿ ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 353, 323, 325, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈ ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net