ಮದ್ಯದ ಅಮಲು, ಇಳಿಯದ ಘಮಲು! ಮತ್ತಿನಲ್ಲಿದ್ದ ಯುವತಿಗೆ ಕಡೆಗೂ ನಶೆ ಇಳಿಸಿದ ಖಾಕಿ | Drunk Woman

ವಿಜಯವಾಣಿ - 2025-03-15T124844.761
Published on

Drunk Woman: ಎಣ್ಣೆಯ ನಶೆಯಲ್ಲಿ ತೂರಾಡುತ್ತಿದ್ದ ಯುವತಿಯೊಬ್ಬಳು, ನಗರದ ಮದ್ಯದ ಅಂಗಡಿಯಲ್ಲಿ ಮಾಲೀಕರೊಂದಿಗೆ ವಿಪರೀತ ಜಗಳವಾಡಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ವರದಿಯಾಗಿದೆ.

ಸ್ಥಳೀಯ ಚಂದ್ರಶೇಖರಪುರದ ಮದ್ಯದ ಅಂಗಡಿಯ ಮುಂದೆ ಮನಬಂದಂತೆ ಚೀರಾಡಿದ ಯುವತಿ, ಮಾಲೀಕರು ಮತ್ತು ಸಿಬ್ಬಂದಿಯೊಡನೆ ತೀವ್ರ ವಾಗ್ವಾದ ಮಾಡಿದ್ದಾಳೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಯುವತಿಯನ್ನು ಅಲ್ಲಿಂದ ಮನೆಗೆ ಕಳುಹಿಸಲು ಪ್ರಯತ್ನಿಸಿದ್ದಾರೆ. ಆದರೆ, ಆರಂಭದಲ್ಲಿ ಇದು ಸಾಧ್ಯವಾಗಿಲ್ಲ.

ಪೊಲೀಸ್​ ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಮುಂದಾದ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು, ಮೊದಲಿಗೆ ಆಕೆಯನ್ನು ಸ್ಥಳೀಯ ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಮಹಿಳೆ ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ಬೆದರಿಕೆಯೂ ಹಾಕಿದ್ದಳು. ಯುವತಿ ಸಹಜ ಸ್ಥಿತಿಗೆ ಮರಳಿದ ತಕ್ಷಣವೇ ಆಕೆಯ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net