VIDEO| ಕುಡಿದ ಮತ್ತಿನಲ್ಲಿ ರೆಸ್ಟೋರೆಂಟ್ ಕ್ಯಾಷಿಯರ್​ಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ

Untitled design (45)
Published on

ಗೋವಾ: ವಿದೇಶಿ ದಂಪತಿ ಕುಡಿದ ಅಮಲಿನಲ್ಲಿ ರೆಸ್ಟೋರೆಂಟ್​ ಕ್ಯಾಷಿಯರ್​ಗೆ ಮನಬಂದಂತೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ಘಟನೆ ಉತ್ತರ ಗೋವಾದಲ್ಲಿ ವರದಿಯಾಗಿದೆ.

ಗೋವಾದ ಪೊರ್ವೊರಿಮ್‌ನಲ್ಲಿರುವ ವೈನ್​ ಅಂಡ್​ ಡೈನ್​ ಎಂಬ ರೆಸ್ಟೋರೆಂಟ್‌ನಲ್ಲಿ ವಿದೇಶಿ ದಂಪತಿ ಕುಡಿದ ಮತ್ತಿನಲ್ಲಿ ಕ್ಯಾಷಿಯರ್‌ಗೆ ಅವಾಚ್ಯ ಪದಗಳಲ್ಲಿ ನಿಂದಿಸಿ, ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಹಲ್ಲೆಗೆ ಒಳಗಾದ ವ್ಯಕ್ತಿಯು ಘಟನೆಯ ಬಗ್ಗೆ ಹತ್ತಿರದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಡಿಯೋ ಪರಿಶೀಲಿಸಿದ ಪೊಲೀಸರು, ಹಲ್ಲೆಗೈದವರ ವಿರುದ್ಧ ಎಫ್​ಐಆರ್​ ದಾಖಲಸಿಕೊಂಡಿದ್ದಾರೆ.

ರೆಸ್ಟೋರೆಂಟ್​ ಕ್ಯಾಷಿಯರ್​ ಮೇಲೆ ದಂಪತಿಗಳ ಅಶಿಸ್ತಿನ ವರ್ತನೆಗಾಗಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉತ್ತರ ಗೋವಾ ಎಸ್ಪಿ ನಿಧಿನ್ ವಲ್ಸನ್ ಸುದ್ದಿಪತ್ರಿಕೆಗೆ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net