

ಗುರುಗ್ರಾಮ: ಕುಡಿದ ನಶೆಯಲ್ಲಿ ಮೂರು ಮಂದಿಗೆ ಜೀಪ್ ಗುದ್ದಿದ ಆರೋಪದ ಮೇಲೆ ಪೊಲೀಸ್ ಹೆಡ್ ಕಾನ್ಸ್ಟೆಬಲ್ನನ್ನು ಬಂಧಿಸಿರುವ ಘಟನೆ ಹರಿಯಾಣದ ಸಮೀಪದ ಗುರುಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ? ಪರಿಶೀಲನೆಗೆ ಮುಂದಾಗಿದೆ ಈ ರಾಜ್ಯ..
ರಾನ್ ಸಿಂಗ್ ಎಂಬಾತನೇ ಆರೋಪ ಹೊತ್ತಿರುವ ಹೆಡ್ ಕಾನ್ಸ್ಟೆಬಲ್ ಆಗಿದ್ದು, ಮನೇಸರ್ ಪೊಲೀಸ್ ಠಾಣೆಯ ಸೈಬರ್ ಕ್ರೈಂ ಘಟಕದಲ್ಲಿ ಕೆಲಸ ಮಾಡುತ್ತಿದ್ದನು. ದೆಹಲಿ-ಜೈಪುರ ಹೆದ್ದಾರಿಯ ಮನೇಸರ್ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ಯಂದು ಈ ಘಟನೆ ನಡೆದಿದೆ.
ಉತ್ತರ ಪ್ರದೇಶದ ಅಮೇಠಿ ಮೂಲದ ಅವಧೇಶ್ ಕುಮಾರ್ ಎಂಬುವರು ನೀಡಿದ ದೂರಿನ ಪ್ರಕಾರ, ಭಾನುವಾರ ರಾತ್ರಿ ತಾವು ಮತ್ತು ತಮ್ಮ ಮಗ ಮನೇಸರ್‌ನ ಖಾಸಗಿ ಆಸ್ಪತ್ರೆಗೆ ಹೋಗಿ ಬರುವಾಗ ರಾತ್ರಿ 8:30 ರ ಸುಮಾರಿಗೆ ಬಸ್ ನಿಲ್ದಾಣದ ಬಳಿ ರಸ್ತೆ ವಿಭಜಕದಲ್ಲಿ ನಿಂತಿದ್ದೆವು. ರೇವಾರಿ ಕಡೆಯಿಂದ ಪೊಲೀಸ್ ಜೀಪ್ ವೇಗವಾಗಿ ಬಂದು ನಮಗೆ ಮತ್ತು ನಮ್ಮ ಪಕ್ಕದಲ್ಲಿ ನಿಂತಿದ್ದ ಕುಮಾರ್ ಎಂಬಾತನಿಗೆ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ನಾವು ಕೆಳಗೆ ಬಿದ್ದೆವು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹುಡುಗಿ ಜತೆ ಮಾತನಾಡಿದ್ದಕ್ಕಾಗಿ ಸ್ನೇಹಿತನ ಪ್ರಾಣ ತೆಗೆದ ವಿದ್ಯಾರ್ಥಿ..
ಕೂಡಲೇ ಕೆಲ ಸ್ಥಳೀಯರು ರಾನ್ ಸಿಂಗ್‌ನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರನ್ನು ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮುನ್ನ, ಪೊಲೀಸ್ ಕಾರು ರಸ್ತೆಯ ಇನ್ನೊಂದು ಬದಿಯಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎಂದೂ ಆರೋಪಿಸಲಾಗಿದೆ. ಇನ್ನು, ಆರೋಪಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)