ಬ್ರೇಕ್ ಇನ್​ಸ್ಪೆಕ್ಟರ್​ಗಳಿಂದಲೂ ಡ್ರಂಕ್ ಆಂಡ್ ಡ್ರೖೆವ್ ಪರೀಕ್ಷೆ!

Untitled-1
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಂದ ಆಗುತ್ತಿರುವ ಅಪಘಾತಗಳ ಪ್ರಮಾಣ ಜಾಸ್ತಿಯಾಗಿದೆ. ಪಾನಮತ್ತ ಚಾಲನೆ ನಿಯಂತ್ರಣಕ್ಕಾಗಿ ಪೊಲೀಸರ ಜತೆಗೆ ಇನ್ಮುಂದೆ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ)ಯ ಮೋಟಾರು ವಾಹನ ನಿರೀಕ್ಷಕರು ಸಹ ರಸ್ತೆಗಿಳಿದು ‘ಡ್ರಂಕ್ ಆಂಡ್ ಡ್ರೖೆವ್’ ತಪಾಸಣೆ ಮಾಡಲಿದ್ದಾರೆ.

ಸದ್ಯ ಬೆಂಗಳೂರಲ್ಲಿ ಸಂಚಾರ ವಿಭಾಗದ ಪೊಲೀಸರು ಹಾಗೂ ಬೇರೆ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಡ್ರಂಕ್ ಆಂಡ್ ಡ್ರೖೆವ್ ತಪಾಸಣೆ ಮಾಡಿ ಪ್ರಕರಣ ದಾಖಲಿಸುತ್ತಿದ್ದಾರೆ. ಇನ್ಮುಂದೆ ಪೊಲೀಸರ ಜತೆಗೆ ಈಗ ಬ್ರೇಕ್ ಇನ್​ಸ್ಪೆಕ್ಟರ್​ಗಳೂ ತಪಾಸಣೆ ನಡೆಸಿ ಕೇಸ್ ದಾಖಲಿಸಲಿದ್ದಾರೆ. ಮೋಟಾರು ವಾಹನ ಕಾಯ್ದೆ ಅನ್ವಯ ಬ್ರೇಕ್ ಇನ್​ಸ್ಪೆಕ್ಟರ್​ಗಳಿಗೆ ಕೇಸ್ ದಾಖಲಿಸಲು ಅಧಿಕಾರ ನೀಡಲಾಗಿದೆ. ಕಾನೂನಿನಲ್ಲಿ ಅವಕಾಶವಿದ್ದರೂ ಈವರೆಗೆ ಬ್ರೇಕ್ ಇನ್​ಸ್ಪೆಕ್ಟರ್​ಗಳು ತಪಾಸಣೆ ಮಾಡುತ್ತಿರಲಿಲ್ಲ. ಆದರಿಗೆ ಪಾನಮತ್ತ ಚಾಲಕರನ್ನು ತಪಾಸಣೆ ನಡೆಸಿ ಪ್ರಕರಣ ದಾಖಲಿಸುವಂತೆ ಸಾರಿಗೆ ಆಯುಕ್ತರು ಲಿಖಿತ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣಾ ಕಾರ್ಯದಲ್ಲಿ ಎಲ್ಲ ಅಧಿಕಾರಿಗಳು ನಿರತರಾಗಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಸ್ತೆಗಿಳಿದು ತಪಾಸಣಾ ಕಾರ್ಯ ಆರಂಭಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಲಾಟೆ, ಹಲ್ಲೆ ಭಯ!: ಡ್ರಂಕ್ ಆಂಡ್ ಡ್ರೖೆವ್ ತಪಾಸಣೆ ವೇಳೆ ಪಾನಮತ್ತ ಚಾಲಕರು ಗಲಾಟೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಸುಖಾಸುಮ್ಮನೆ ಅಧಿಕಾರಿಗಳ ಜತೆ ವಾಗ್ವಾದ ನಡೆಸಿ, ಹಲ್ಲೆ ಮಾಡಬಹುದು. ಆಗ ಲಾ ಆಂಡ್ ಆರ್ಡರ್ ಸಮಸ್ಯೆ ಸೃಷ್ಟಿಯಾಗುತ್ತದೆ. ಪೊಲೀಸರ ಬಳಿ ರಿವಾಲ್ವಾರ್, ಲಾಠಿ ಸೇರಿ ಅಗತ್ಯ ಭದ್ರತಾ ಸಲಕರಣೆಗಳಿರುತ್ತವೆ. ಗಲಾಟೆ ಸಂದರ್ಭದಲ್ಲಿ ಅವರು ನಿಯಂತ್ರಿಸುತ್ತಾರೆ. ಆದರೆ, ಬ್ರೇಕ್ ಇನ್​ಸ್ಪೆಕ್ಟರ್​ಗಳಿಗೆ ಇಂತಹ ಸೌಲಭ್ಯ ಇಲ್ಲ. ಆದ್ದರಿಂದ ಪ್ರತ್ಯೇಕವಾಗಿ ತಪಾಸಣೆ ನಡೆಸುವುದಕ್ಕಿಂತ ಟ್ರಾಫಿಕ್ ಪೊಲೀಸರ ಜತೆಯಲ್ಲೇ ತಪಾಸಣೆ ನಡೆಸಲು ಸಾರಿಗೆ ಇಲಾಖೆ ತೀರ್ವನಿಸಿದೆ.

ಅಪಘಾತ ಶೇ.13 ಏರಿಕೆ: ಸಾರಿಗೆ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 2022ರಲ್ಲಿ 35,550 ರಸ್ತೆ ಅಪಘಾತಗಳಾಗಿವೆ. ಇದರಲ್ಲಿ 10,723 ಮಂದಿ ಮೃತಪಟ್ಟಿದ್ದಾರೆ. 42,135 ಮಂದಿಗೆ ಮಾರಣಾಂತಿಕ ಗಾಯಗಳಾಗಿವೆ. 2021ರಿಂದ 2022ಕೆ್ಕೆ ಹೋಲಿಕೆ ಮಾಡಿದರೆ ಶೇ.13 ಏರಿಕೆಯಾಗಿದೆ. ದೇಶಾದ್ಯಂತ 61,312 ರಸೆ್ತೆ ಅಪಘಾತಗಳಾಗಿವೆ. 10,684,91 ಮಂದಿ ಸಾವನ್ನಪ್ಪಿದ್ದಾರೆ. 4,43,366 ಮಂದಿ ಗಾಯಗೊಂಡಿದ್ದಾರೆ.

ಆಲ್ಕೋಹಾಲ್ ಎಷ್ಟಿರಬೇಕು?: ಡ್ರಂಕ್ ಆಂಡ್ ಡ್ರೖೆವ್ ಮಿತಿಯನ್ನು ಬ್ಲಡ್ ಆಲ್ಕೋಹಾಲ್ ಕನ್ಸಂಟ್ರೇಷನ್ (ಬಿಎಸಿ) ಟೆಸ್ಟ್ ಮೂಲಕ ಅಳೆಯಲಾಗುತ್ತದೆ. ಸಂಚಾರ ಪೊಲೀಸರು ಬ್ರೆತ್ ಅನಲೈಸರ್ ಯಂತ್ರದ ಮೂಲಕ ಪರಿಶೀಲಿಸುತ್ತಾರೆ. 100 ಮಿಲಿ ರಕ್ತದಲ್ಲಿ ಮಿಲಿ ಗ್ರಾಂಗಿಂತ ಕಡಿಮೆ ಪ್ರಮಾಣದಲ್ಲಿ ಆಲೋಹಾಲ್ ಇದ್ದರೆ ಸುರಕ್ಷಿತ. ಅದಕ್ಕಿಂತ ಹೆಚ್ಚು ಇದ್ದಲ್ಲಿ ಕೇಸ್ ದಾಖಲಿಸಲಾಗುತ್ತದೆ.

ಸಾರಿಗೆ ಇಲಾಖೆ ಹೇಳುವುದೇನು?

1. ಮೋಟಾರು ವಾಹನ ಕಾಯ್ದೆಯಡಿ ಕೇಸ್ ದಾಖಲಿಸಲು ಬ್ರೇಕ್ ಇನ್​ಸ್ಪೆಕ್ಟರ್​ಗಳಿಗೆ ಅಧಿಕಾರ ಇದೆ - ಕಾನೂನು ಪ್ರಕಾರ ನಿಯೋಜಿಸಿದ ಕರ್ತವ್ಯ ನಿರ್ವಹಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ - ಲಾ ಆಂಡ್ ಆರ್ಡರ್ ಸಮಸ್ಯೆ ಸಾಧ್ಯತೆ ಕಾರಣ ಪೊಲೀಸರೊಂದಿಗೆ ಬ್ರೇಕ್ ಇನ್​ಸ್ಪೆಕ್ಟರ್ ಡ್ಯೂಟಿ.

2. ತಪಾಸಣೆ ನಡೆಸಿ, ಪ್ರಕರಣ ದಾಖಲಿಸಲು ಬೇಕಾದ ಸಲಕರಣೆಗಳನ್ನು ಈಗಾಗಲೆ ಪೂರೈಸಲಾಗಿದೆ.

3. ಆರ್​ಟಿಒ ಕಚೇರಿ ಕೆಲಸ ಜತೆಯಲ್ಲೇ ರಾತ್ರಿ ವೇಳೆ ಡ್ರಂಕ್ ಆಂಡ್ ಡ್ರೖೆವ್ ತಪಾಸಣೆ ಮಾಡಬೇಕು. ಕಾನೂನಿನಲ್ಲಿ ಅವಕಾಶವಿದ್ದರೂ ಜಾರಿಗೆ ತಂದಿರಲಿಲ್ಲ. ಈಗ ಅನುಷ್ಠಾನಕ್ಕೆ ತರಲಾಗುತ್ತಿದೆ.

ಬ್ರೇಕ್ ಇನ್​ಸ್ಪೆಕ್ಟರ್ಸ್ ವಾದದೇನು?

1. ಸಿಬ್ಬಂದಿ ಕೊರತೆಯಿಂದ ಬ್ರೇಕ್ ಇನ್​ಸ್ಟೆಕ್ಟರ್​ಗಳು, 2-3 ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

2. ಡ್ರಂಕ್ ಆಂಡ್ ಡ್ರೖೆವ್ ತಪಾಸಣೆ ಕೆಲಸದಿಂದ ಇನ್ನಷ್ಟು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕು.

3. ಹೊಸದಾಗಿ ನೇಮಕವಾಗಿರುವ ಮೋಟಾರು ವಾಹನ ನಿರೀಕ್ಷಕರಿಗೆ ಇನ್ನೂ ಟ್ರೇನಿಂಗ್ ಕೊಟ್ಟಿಲ್ಲ.

4. ದಿನಿವಿಡೀ ಆರ್​ಟಿಒ ಕಚೇರಿಯಲ್ಲಿ ಕೆಲಸ ಮಾಡಿ ರಾತ್ರಿ ಪಾನಮತ್ತ ಚಾಲಕರ ತಪಾಸಣೆ ಹೇಗೆ?

5. ಬೆಂಗಳೂರು ವ್ಯಾಪ್ತಿಯಲ್ಲಿ ಕೇಸ್ ದಾಖಲಿಸುವ ಗುರಿಯನ್ನು 300 ರಿಂದ 400ಕ್ಕೆ ಏರಿಸಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬ್ರೇಕ್ ಇನ್​ಸ್ಪೆಕ್ಟರ್​ಗಳು ಡ್ರಂಕ್ ಡ್ರೖೆವ್ ತಪಾಸಣೆ ಆರಂಭಿಸಿರಲಿಲ್ಲ. ತಪಾಸಣೆಗೆ ಬೇಕಾದ ಯಂತ್ರಗಳನ್ನು ವಿತರಿಸಲಾಗಿದ್ದು, ಶೀಘ್ರದಲ್ಲೇ ಶುರು ಮಾಡಲಿದ್ದಾರೆ. ತಪಾಸಣೆ ಸಂದರ್ಭ ಲಾ ಆಂಡ್ ಆರ್ಡರ್ ಸಮಸ್ಯೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರ ಜತೆಯಲ್ಲೇ ಕೆಲಸ ಮಾಡಲಿದ್ದಾರೆ.| ಸಿ.ಮಲ್ಲಿಕಾರ್ಜುನ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಎನ್​ಫೋರ್ಸ್​ವೆುಂಟ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net