

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ರಾಜ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ (ಡ್ರಗ್ಸ್) ವ್ಯಸನಿಗಳಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಮೇಲ್ಮನೆ, ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದಕೊಳ್ಳಬೇಕು ಎಂದು ಆಗ್ರಹಿಸಿದೆ.
ಸದಸ್ಯ ಡಾ.ಧನಂಜಯ ಸರ್ಜಿ ಅವರು ಕೇಳಿದ ಪ್ರಶ್ನೆ ಮುಂದಿಟ್ಟುಕೊಂಡು ಮಾತನಾಡಿದ ಸದಸ್ಯರು ಡ್ರಗ್ಸ್ ದಂಧೆಯಲ್ಲಿ ಕರ್ನಾಟ ದೇಶದಲ್ಲಿಯೇ 2ನೇ ರಾಜ್ಯವಾಗಿರುವುದು ಆತಂಕಕಾರಿ ಸಂಗತಿ. ಆದ್ದರಿಂದ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲೇಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ ಅವರು, ಘೆಈ’ ಕಾಯ್ದೆ 1985 ಅಡಿಯಲ್ಲಿ 2022 ರಲ್ಲಿ 6164, 2023 ರಲ್ಲಿ 6267, 2024 ರಲ್ಲಿ 1179 ಜನರ ಬಂಧನ ಮಾಡಲಾಗಿದೆ. ಈ ತನಕ 150 ವಿದೇಶಿಯರ ಬಂಧನವೂ ಆಗಿದೆ ಎಂದರು.
ವಿದೇಶಿಯವರೇ ಹೆಚ್ಚಿನವರು ಪೆಡ್ಲರ್‌ಗಳಾಗಿದ್ದಾರೆ. ಪ್ರತಿ ಜಿಲ್ಲೆಗೆ ಪೊಲೀಸ್ ಠಾಣೆ ಮಾಡಿದ್ದೇವೆ.
ಪ್ರತಿ ವರ್ಷ 10 ಟನ್ ಗಾಂಜಾ ಸುಡುತ್ತೇವೆ. ಮೊನ್ನೆ 150 ಕೋಟಿ ಡ್ರಗ್ಸ್ ಸುಟ್ಟಿದ್ದೇವೆ ಎಂದರು.
ಡ್ರಗ್ಸ್ ವ್ಯಸನಿಗಳಿಗಾಗಿ 268 ಪುನರ್ವಸತಿ ಕೆಂದ್ರಗಳನ್ನು ಮಾಡಿದ್ದೇವೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ಆದರೆ ಮುಂದೆ ಕ್ರಮ ವಹಿಸಲಾಗುವುದು.
ಕರ್ನಾಟಕವನ್ನು ನಾವು ಡ್ರಗ್ಸ್ ರಾಜ್ಯ ಆಗೋಕೆ ಬಿಡಲ್ಲ. ಉಡ್ತಾ ಕರ್ನಾಟಕ ಆಗೋಕೆ ಬಿಡಲ್ಲ ಎಂದು ಗೃಹ ಸಚಿವರು ೋಷಿಸಿದರು. ಡ್ರಗ್ಸ್ ವಿರುದ್ದ ಅಭಿಯಾನದಲ್ಲಿ ಸ್ವಯಂ ಸೇವಾ ಸಂಘಟನೆಗಳು ಸರ್ಕಾರದ ಜೊತೆ ಕೈಜೋಡಿಸಿವೆ ಎಂದರು.
ಮತ್ತೊಮ್ಮೆ ಅರ್ಜಿ ಕೊಡಿ:
ಎಸ್ಸಿಪಿ ಟಿಎಸ್ಪಿ ಹಣ 25000 ಕೋಟಿ ಲೂಟಿ ಆಗಿದೆ. ಆದ್ದರಿಂದ ನಿಯಮ 59 ರಡಿಯಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಸದನದ ಗಮನ ಸೆಳೆದರು.
ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್, ಹಾಗಾದರೆ ನೀವು ಮತ್ತೊಮ್ಮೆ ಅರ್ಜಿ ನೀಡಿ. ಪರಿವರ್ತನೆ ಮಾಡಿ ಕೊಡುವುದಾಗಿ ತಿಳಿಸಿದರು.