'ಮಾದಕ' ನಟಿ ರಾಗಿಣಿ ಮತ್ತೆ 5 ದಿನ ಸಿಸಿಬಿ ವಶಕ್ಕೆ

ragini
Published on

ಬೆಂಗಳೂರು: ಸ್ಯಾಂಡಲ್​ವುಡ್​ನ 'ಮಾದಕ' ನಟಿ ರಾಗಿಣಿ ದ್ವಿವೇದಿಯನ್ನು ಮತ್ತೆ ಐದು ದಿನ ಸಿಸಿಬಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಡ್ರಗ್ಸ್​ ಮಾಫಿಯಾದಲ್ಲಿ ಕನ್ನಡ ಸಿನಿಮಾ ನಟ-ನಟಿಯರಿಗೆ ನಂಟಿದೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿರುವ ರಾಗಿಣಿಯನ್ನು ಸೆ.11ರವರೆಗೂ ಸಿಸಿಬಿ ವಶಕ್ಕೆ ಪಡೆಯುವಂತೆ 1ನೇ ಎಸಿಎಂಎಂ ಕೋರ್ಟಿನ ನ್ಯಾಯಾಧೀಶ ಜಗದೀಶ್​ ಆದೇಶಿಸಿದ್ದಾರೆ.

ಮೂರು ದಿನವಾದರೂ ತನಿಖೆಗೆ ಸಹಕರಿಸದ ರಾಗಿಣಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಸಿಸಿಬಿ ಮನವಿ ಮಾಡಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಐದು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ರಾಗಿಣಿಯನ್ನು ಪಡೆಯುವಂತೆ ಆದೇಶಿಸಿದರು.

ಬಂಧನಕ್ಕೂ ಮೊದಲೇ ರಾಗಿಣಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರಾಗಿಣಿ ಪರ ಸುದರ್ಶನ್ ವಕೀಲರು ವಾಪಸ್​ ಪಡೆದಿದ್ದಾರೆ. ಈಗಾಗಲೇ ನಟಿ ಸಿಸಿಬಿ ಬಂಧನದಲ್ಲಿದ್ದಾರೆ. ಹಾಗಾಗಿ ಈ ಅರ್ಜಿಯನ್ನು ಹಿಂಪಡೆಯಲಾಗಿದೆ. ಸದ್ಯ ಜಾಮೀನು ಕೋರಿ ರಾಗಿಣಿ ಹೊಸ ಅರ್ಜಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net