ಮಾದಕವಸ್ತು ಸೇವನೆ, ಮೂವರ ಅರೆಸ್ಟ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಕೊಳಚಿಕಂಬಳ ನದಿ ಬದಿ ಓರ್ವ ವ್ಯಕ್ತಿ ಹೊಗೆಬತ್ತಿ ಸೇದುತ್ತಿರುವುದು ಕಂಡುಬಂದಿದೆ.
ಮೂಲ್ಕಿ: ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಕೊಳಚಿಕಂಬಳ ನದಿ ಬದಿ ಓರ್ವ ವ್ಯಕ್ತಿ ಹೊಗೆಬತ್ತಿ ಸೇದುತ್ತಿರುವುದು ಕಂಡುಬಂದಿದೆ. ಆತನನ್ನು ವಿಚಾರಿಸಿದಾಗ ಹೊಗೆ ಬತ್ತಿಯೊಂದಿಗೆ ಗಾಂಜವನ್ನು ಸೇವಿಸಿರುವುದಾಗಿ ತಿಳಿಸಿದ್ದಾನೆ. ಆರೋಪಿ ಕೆ. ಎಸ್.ರಾವ್ ನಗರದ ನಿವಾಸಿ ಮೊಹಮ್ಮದ್ ಅಖಿಲ್( 24) ನನ್ನು ವಶಕ್ಕೆ  ಪಡೆದು ವ್ಯೆದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ದೃವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ಬಪ್ಪನಾಡು ಶಾಂಭವಿ ಸೇತುವೆ ಬಳಿ ಓರ್ವ ಅಮಲಿನಲ್ಲಿ ನಿಂತಿರುವುದು ಕಂಡುಬಂದಿದ್ದು ಪೊಲೀಸರನ್ನು ಕಂಡ ಕೂಡಲೇ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ವಿಚಾರಣೆ ನಡೆಸಿದಾಗ ಹೊಗೆ ಬತ್ತಿಯೊಂದಿಗೆ ಎಂಡಿಎಂಎ ಮಾದಕವಸ್ತು ಸೇವಿಸಿರುವುದಾಗಿ ತಿಳಿಸಿದ್ದು ಆರೋಪಿ ಕೆ.ಎಸ್.ರಾವ್ ನಗರದ ನಿವಾಸಿ ಮೊಹಮ್ಮದ್ ಶಾಝಿಲ್ ಅಲಿಯಾಸ್ ಶಾಝಿಲ್ (20) ನನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಹಳೆಯಂಗಡಿಯ ಕೊಪ್ಪಲ ಸೇತುವೆ ಬಳಿ ಬಳಿ ಓರ್ವ ಅಮಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಆತನು ಪರಾರಿಯಾಗಲು ಪ್ರಯತ್ನಿಸಿದ್ದು, ವಿಚಾರಿಸಿದಾಗ ಎಂಡಿಎಂಎ ಮಾದಕ ವಸ್ತು ಸೇವಿಸಿರುವುದಾಗಿ ತಿಳಿಸಿದ್ದಾನೆ. ಮೂಲ್ಕಿಯ ಕೆ.ಎಸ್.ರಾವ್ ನಗರ ಅಂಚೆ ಕಚೇರಿ ಬಳಿಯ ನಿವಾಸಿ ಮೊಹಮ್ಮದ್ ಶರೀಫ್ ಅಲಿಯಾಸ್ ಶಾಹಿಲ್(32) ನನ್ನು ವಶಕ್ಕೆ ಪಡೆದು ವ್ಯದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು  ಸೇವನೆ ಮಾಡಿರುವುದು ದೃಢಪಟ್ಟಿದ್ದು ಪ್ರಕರಣ ದಾಖಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net