

Drug Supplier : ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾದಕವಸ್ತು ಪೂರೈಕೆದಾರ ಟೋನಿ ಸೆಬಾಸ್ಟಿಯನ್ (34) ಅವರನ್ನು ANC ವರ್ಲಿ ಘಟಕವು ಇಂಡೋ-ನೇಪಾಳ ಗಡಿಯಲ್ಲಿ ಶುಕ್ರವಾರ (ಸೆಪ್ಟೆಂಬರ್ 19) ಬಂಧಿಸಿದ್ದು, ಇಂದು ಮುಂಬೈನ ಎಸ್ಪ್ಲನೇಡ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
NDPS ಕಾಯ್ದೆಯ ಪ್ರಕಾರ, ಸೆಕ್ಷನ್ 8(c), 20(b), ಮತ್ತು 29 ರ ಅಡಿಯಲ್ಲಿ 3.55 ಕೋಟಿ ರೂ. ಮೌಲ್ಯದ 3.55 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡ ಪ್ರಕರಣ ಇದಾಗಿದೆ.
ಈ ಮೊದಲು ಮೇ ತಿಂಗಳಲ್ಲಿ, ವರ್ಲಿ ಘಟಕವು ನವಿ ಮುಂಬೈನ ಉಲ್ವೆ ನಿವಾಸಿ ವಿನಾಯಕ್ ಲಕ್ಷ್ಮಣ್ ಮುಂಡೇಕರ್ (28) ಅವರನ್ನು ದಾದರ್ ಪಶ್ಚಿಮದ ವೀರ್ ಸಾವರ್ಕರ್ ರಸ್ತೆಯ ವಿದ್ಯಾಧರ್ ಹಾಲ್ ಬಳಿ ಗಾಂಜಾವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಈತ ಕಸ್ಟಡಿಯಲ್ಲಿದ್ದಾಗ ಥೈಲಾಂಡ್ನಲ್ಲಿ ವಾಸಿಸುತ್ತಿದ್ದ ಟೋನಿ ಅವರಿಗೆ ಮಾದಕ ದ್ರವ್ಯಗಳನ್ನು ಪೂರೈಸುವುದರ ಬಗ್ಗೆ ಮುಂಡೇಕರ್ ಮಾಹಿತಿ ತಿಳಿಸಿದ್ದರು.
ಈ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಆತನ ಫೋನ್ ಸಂಖ್ಯೆಯನ್ನು ಬಳಸಿಕೊಂಡು ತನಿಖೆ ಆರಂಭಿಸಿದ್ದು, ಥೈಲ್ಯಾಂಡ್‌ನಲ್ಲಿ ಆತನ ಇರುವುದನ್ನು ಖಚಿತಪಡಿಸಿಕೊಂಡಿದ್ದು, ಸೆಪ್ಟೆಂಬರ್ 16 ರಂದು ಎಪಿಐ ಅಮೋಲ್ ಕದಮ್ ನೇತೃತ್ವದ ತಂಡವು ಉತ್ತರ ಪ್ರದೇಶದ ಇಂಡೋ-ನೇಪಾಳ ಗಡಿಯ ಸೋನೌಲಿಯಲ್ಲಿ ಸೆಬಾಸ್ಟಿಯನ್‌ನನ್ನು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ.
ಈ ವೇಳೆ ತನಿಖೆ ನಡೆಸಿದ ಅಧಿಕಾರಿಗಳು ಸೆಬಾಸ್ಟಿಯನ್ ಮುಂಡೇಕರ್‌ಗೆ ಹೈಡ್ರೋಪೋನಿಕ್ ಗಾಂಜಾವನ್ನು ಪೂರೈಸುವ ಪ್ರಮುಖ ಪೂರೈಕೆದಾರ ಎಂದು ತಿಳಿದುಕೊಂಡಿದ್ದಾರೆ. ಆದರಿಂದ ಪೊಲೀಸರು ಎನ್ಡಿಪಿಎಸ್ ಕಾಯ್ದೆಯ ಸೆಕ್ಸನ್ 29 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)