ಅಕ್ರಮ ಹಣ ವರ್ಗಾವಣೆ ಪ್ರಕರಣ; ಡ್ರಗ್​ಲಾರ್ಡ್​ ಜಗದೀಶ್ ಭೋಲಾಗೆ 10 ವರ್ಷ ಸಜೆ

Untitled-design-2024-07-30T155052.464-1
Published on

ಚಂಡೀಗಢ: ಮಾದಕವಸ್ತುವಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಿಂಗ್‌ಪಿನ್ ಜಗದೀಶ್ ಸಿಂಗ್ ಅಲಿಯಾಸ್ ಭೋಲಾ ಸೇರಿದಂತೆ 17 ಮಂದಿಯನ್ನು ಪಂಜಾಬ್‌ನ ಮೊಹಾಲಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ (ಜುಲೈ 30)ದೋಷಿ ಎಂದು ಘೋಷಿಸಿದೆ.

ವಿಶೇಷ ನ್ಯಾಯಾಲಯವು ಜಗದೀಶ್ ಸಿಂಗ್ ಅಲಿಯಾಸ್ ಭೋಲಾಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ 50,000 ರೂಪಾಯಿ ದಂಡ ವಿಧಿಸಿದೆ. ಅದು ವಿಫಲವಾದರೆ ಅವರು ಇನ್ನೂ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿಲಾಗಿದೆ.

ಜಗದೀಶ್ ಭೋಲಾ ಜತೆಗೆ ಮನ್‌ಪ್ರೀತ್, ಸುಖರಾಜ್ ಸುಖ್‌ಜೀತ್ ಸುಖ್ ಮತ್ತು ಮಣಿಂದರ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಭೋಲಾ ಅವರ ಪತ್ನಿ ಗುರುಪ್ರೀತ್ ಕೌರ್ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 23 ಆರೋಪಿಗಳಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಆರೋಪಿಗಳನ್ನು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪಂಜಾಬ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎಂಟು ಎಫ್‌ಐಆರ್‌ಗಳ ಆಧಾರದ ಮೇಲೆ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡು 2013ರಲ್ಲಿ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿತ್ತು. ಬಹುಕೋಟಿ ಸಿಂಥೆಟಿಕ್ ನಾರ್ಕೋಟಿಕ್ ದಂಧೆಯಲ್ಲಿ 23 ಜನರನ್ನು ಆರೋಪಿಗಳೆಂದು ಹೆಸರಿಸಿ 2015ರಲ್ಲಿ ಚಾರ್ಜ್​ಶೀಟ್​ ಸಲ್ಲಿಸಿತ್ತು. ಪ್ರಕರಣದಲ್ಲಿ 95 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net