ನಾಕಾ ತಪಾಸಣೆ ವೇಳೆ ಸಿಕ್ಕಿಬಿದ್ದ ಮಾದಕವಸ್ತು ಮಾರಾಟಗಾರರ ಬಳಿ ಸಿಕ್ಕಿದ್ದೇನು?

drug
Published on

ಶ್ರೀನಗರ : ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಾದಕವಸ್ತುಗಳ ಮಾರಾಟಗಾರರನ್ನು ಸೊಪೋರ್ ಪಟ್ಟಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಂಧಿತರಿಂದ ಬೃಹತ್ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ವ್ಯಕ್ತಿಗಳನ್ನು ಬ್ಯಾಟ್‌ಪೋರಾ ಸೊಪೋರ್‌ನ ಮುನೀರ್ ಅಹ್ಮದ್ ಬುಲಾಕಿ ಮತ್ತು ಪೇಟ್ ಸೀರ್ ಸೊಪೋರ್‌ನ ಆದಿಲ್ ಅಶ್ರಫ್ ಖಾನ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.
ಸೊಪೋರ್​​​ನ ಮುಖ್ಯ ಚೌಕಿಯಲ್ಲಿ ನಡೆದ ನಾಕಾ ತಪಾಸಣೆಯ ಸಮಯದಲ್ಲಿ, ಕುಖ್ಯಾತ ಡ್ರಗ್ ಮಾರಾಟಗಾರ ಬುಲಾಕಿ ಅಲ್ಲಿಂದ ಹಾದುಹೊರಟಿದ್ದ. 

ಅಲ್ಲಿ ಆತನನ್ನು ತಡೆದು 30 ಬಾಟಲಿಗಳ ಕಾಫಿ ಕ್ಲೋರ್​​ಫೆನಿರಮೈನ್ ಮೆಲೇಟ್, ಕೊಡೆನ್ ಫಾಸ್ಫೇಟ್ ಸಿರಪ್ ನ 100 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿ ಹೇಳಿದರು.
ಪ್ರತ್ಯೇಕ ನಾಕಾ ತಪಾಸಣೆಯ ವೇಳೆ, ಟಾರ್ಜೂ ಪೊಲೀಸ್ ತಂಡದ ಸಹಾಯದಿಂದ ಖಾನ್‌ನನ್ನು ಬಂಧಿಸಿ, 200 ಸ್ಪಾಸ್ಮೊಪ್ರೊಕ್ಸಿವನ್ ಮಾತ್ರೆ ಮತ್ತು ಅವನ ಬಳಿಯಿದ್ದ ಮಾದಕ ವಸ್ತು ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಬಾರಾಮುಲ್ಲಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಾವೇದ್ ಇಕ್ಬಾಲ್, ಈ ಬಂಧನವನ್ನು ದೃಢಪಡಿಸಿದ್ದು, ಈ ಅರೋಪಿಗಳ ವಿರುದ್ಧ ಸೊಪೋರ್ ಮತ್ತು ಟಾರ್ಜೂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
"ಸೋಪೋರ್ ಪೊಲೀಸರು ಮಾದಕವಸ್ತು ಭೀತಿಯ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳುತ್ತಿದ್ದಾರೆ. ಇಂಥ ಅಕ್ರಮ ನಡೆಸುತ್ತಿರುವ ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ಸಮಾಜದಲ್ಲಿ ಇಂಥ ಅಕ್ರಮ ಚಟುವಟಿಕೆಗಳನ್ನು ತಡೆಯಲು ಜನಸಾಮಾನ್ಯರೂ ಮುಂದೆ ಬಂದು ಪೊಲೀಸರಿಗೆ ಸಹಾಯ ಮಾಡಬೇಕೆಂದು ಅವರು ಜನ ಸಾಮಾನ್ಯರಲ್ಲಿ ಮಾಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net