ಮೆಡಿಕಲ್ ಶಾಪ್‌ಗಳಲ್ಲಿ ನೆಗಡಿ, ಕೆಮ್ಮು, ಜ್ವರಕ್ಕಾಗಿ ಔಷಧ ಖರೀದಿಸ್ತೀರಾ? ಸರ್ಕಾರಕ್ಕೆ ತಲುಪಲಿದೆ ನಿಮ್ಮ ಮಾಹಿತಿ!

mdical shope
Published on

ಬೆಂಗಳೂರು: ನೆಗಡಿ, ಕೆಮ್ಮು, ಜ್ವರ ಬಂದರೆ ಆಸ್ಪತ್ರೆಗೆ ಹೋಗದೆ ಸಮೀಪದ ಮೆಡಿಕಲ್ ಶಾಪ್‌ಗಳಲ್ಲೇ ನೀವು ಔಷಧ ಖರೀದಿಸುತ್ತಿದ್ದೀರಾ?

ಹೀಗಾದರೆ ಹುಷಾರ್! ನಿಮ್ಮ ಬಗೆಗಿನ ಮಾಹಿತಿ ಇನ್ನು ಮುಂದೆ ರಾಜ್ಯ ಸರ್ಕಾರಕ್ಕೆ ಹೋಗಲಿದೆ. ಹೇಗೆ ಅಂತೀರಾ?

ನೆಗಡಿ, ಕೆಮ್ಮು, ಜ್ವರಕ್ಕಾಗಿ ಯಾವುದೇ ಔಷಧ ಖರೀದಿಸುವವರ ಹೆಸರು, ವಿಳಾಸ ಮತ್ತಿತರ ಮಾಹಿತಿಯನ್ನು ಇನ್ನು ಮುಂದೆ ಕಡ್ಡಾಯವಾಗಿ ಬರೆದಿಡುವಂತೆ ಸರ್ಕಾರ ಎಲ್ಲ ಮೆಡಿಕಲ್ ಶಾಪ್‌ಗಳಿಗೆ ಸೂಚನೆ ನೀಡಿದೆ.

ಈ ವಿಷಯವನ್ನು ಸಚಿವ ಸುರೇಶ್‌ಕುಮಾರ್ ಖಚಿತಪಡಿಸಿದ್ದಾರೆ. ‘‘ಪ್ರತಿಯೊಂದು ಮೆಡಿಕಲ್ ಶಾಪ್‌ನ ಪ್ರತಿನಿಧಿಗಳು ಪ್ರತಿದಿನವೂ ಈ ದಾಖಲೆಗಳನ್ನು ಸಂಬಂಧಿಸಿದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸಲ್ಲಿಸುವುದು ಕಡ್ಡಾಯ’’ ಎಂದು ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net