More

    ಖಾಸಗಿ ಶಾಲೆಗಳ ವಿದ್ಯಾರ್ಥಿ ಪಾಲಕರು ಶುಲ್ಕ ಪಾವತಿಗೆ ಸ್ವಯಂ ಪ್ರೇರಿತವಾಗಿ ಮುಂದಾದರೆ ಸ್ವೀಕಾರಕ್ಕೆ ಅವಕಾಶ

    ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಸ್ವಯಂ ಪ್ರೇರಿತವಾಗಿ ಬೋಧನಾ ಶುಲ್ಕ ಪಾವತಿಸಲು ಮುಂದೆ ಬರುವವರಿಗೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ಹೊರಡಿಸುವಂತೆ ಶಿಕ್ಷಣ ಸಚಿವರು ಆಯಕ್ತರಿಗೆ ಸೂಚಿಸಿದ್ದಾರೆ.

    ಲಾಕ್​ಡೌನ್​ ಅನಿರ್ಧಿಷ್ಟಾವಧಿಗೆ ಮುಂದುವರೆಯುತ್ತಿರುವುದರಿಂದ ಶಾಲೆಗಳ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ವೇತನ ಪಾವತಿಗೆ ತೊಂದರೆಯಾಗಿದೆ. ಮಾನವೀಯ ನೆಲೆಗಟ್ಟಿನ ಮೇಲೆ ಸಿಬ್ಬಂದಿಗೆ ಅನುಕೂಲ ಮಾಡಿಕೊಡಲು ಶುಲ್ಕ ಪಾವತಿಗೆ ಮುಂದಾಗುವವ ಪಾಲಕರಿಗೆ ಅವಕಾಶ ಕಲ್ಪಿಸಬೇಕು ಎಂದು ಶಾಲೆಯ ಆಡಳಿತ ಮಂಡಳಿ ಹಾಗೂ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

    ಮನವಿ ಪರಿಶೀಲನೆ ಮಾಡಿ ತಕ್ಷಣವೇ ನಿರ್ದೇಶನ ನೀಡುವಂತೆ ಸಚಿವರು ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.
    ಆರ್ಥಿಕವಾಗಿ ಬಲವಾಗಿರುವ ಪಾಲಕರು ಸ್ವಯಂ ಪ್ರೇರಿತವಾಗಿ ಶುಲ್ಕ ಪಾವತಿ ಮಾಡಲು ಮುಂದಾದವರೆ ಅವರು ಒಪ್ಪುವ ಮಾಸಿಕ ಕಂತುಗಳಲ್ಲಿ ಪಡೆಯಬೇಕು. ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಪಾಲಕರನ್ನು ಬಲವಂತ ಮಾಡಬಾರದು. ಶುಲ್ಕ ಪಾವತಿ ಮಾಡುವಂತೆ ಒತ್ತಡ ತಂದರೆ ಅಂತ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ.

    ಕರು ಪಾವತಿ ಮಾಡಿದ ಶುಲ್ಕವನ್ನು ಆಡಳಿತ ಮಂಡಳಿ ತಮ್ಮ ಸಿಬ್ಬಂದಿ ವೇತನ ಪಾವತಿಗೆ ಬಳಸಿಕೊಳ್ಳಲು ಮೊದಲ ಆದ್ಯತೆ ನೀಡಬೇಕು ಎನ್ನುವ ನಿದೇಶನವನ್ನು ಸೇರಿಸುವಂತೆ ಸಚಿವರು ತಿಳಿಸಿದ್ದಾರೆ.

    ರೈತರ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts