ಡ್ರಗ್ಸ್ ಮಾಫಿಯಾ ಬಗ್ಗೆ ಹೊಸ ಬಾಂಬ್​ ಸಿಡಿಸಿದ ಪ್ರಮೋದ್​ ಮುತಾಲಿಕ್​

8 Dwd 2 (Pramod Mutalik)
Published on

ಹಾವೇರಿ: ಪೊಲೀಸ್​​ ಮತ್ತು ರಾಜಕಾರಣಿ ಇಲ್ಲದೆ ಡ್ರಗ್ಸ್ ಸಪ್ಲೈ ಸಾಧ್ಯನೇ ಇಲ್ಲ ಎಂದಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​, ಡ್ರಗ್ಸ್ ಮಾಫಿಯಾದಲ್ಲಿ ಪೊಲೀಸ್ ಮತ್ತು ರಾಜಕಾರಣಿ ಇಬ್ಬರೂ ಇದ್ದಾರೆ. ಎಲ್ಲೆಲ್ಲಿ ಮಾಫಿಯಾ ನಡೆಯುತ್ತಿದೆ? ಯಾರು ಸಪ್ಲೈ ಮಾಡುತ್ತಾರೆ? ಇದರಲ್ಲಿ ಯಾರೆಲ್ಲ ಇನ್ವಾಲ್​ ಆಗಿದ್ದಾರೆ ಎಂದು ಪೊಲೀಸರಿಗೆ ಇಂಚಿಂಚೂ ಮಾಹಿತಿ ಗೊತ್ತಿರುತ್ತದೆ. ಆದರೂ ಹಣ-ರಾಜಕೀಯ ಒತ್ತಡಕ್ಕೆ ಮಣಿದು ಸುಮ್ಮನಾಗುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

'ನಮ್ಮ ಕೈಯಲ್ಲಿ ಹುಡುಕೋಕೆ ಆಗಿಲ್ಲ' ಎಂದು ಪೊಲೀಸ್ ಹೇಳಲಿ. ಡ್ರಗ್ಸ್ ಮಾಫಿಯಾದವರು ಎಲ್ಲೆಲ್ಲಿದ್ದಾರೆಂದು ನಾನು ತೋರಿಸುತ್ತೇನೆ ಎಂದು ಪೊಲೀಸರಿಗೆ ಸವಾಲು ಹಾಕಿದ ಪ್ರಮೋದ್​ ಮುತಾಲಿಕ್​, 'ಹ್ಯಾರಿಸ್ ಪುತ್ರ ಕೂಡ ಈ ಮಾಫಿಯಾದಲ್ಲಿದ್ದಾನೆ' ಎಂದು ಹೊಸ ಬಾಂಬ್ ಸಿಡಿಸಿದರು. ಇದನ್ನೂ ಓದಿರಿ ಸಚಿವ ಸಿ.ಟಿ.ರವಿಗೆ ಖಡಕ್​ ವಾರ್ನಿಂಗ್ ಕೊಟ್ಟ ಎಚ್​ಡಿಕೆ !

ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ ದೊಡ್ಡ ಪ್ರಮಾಣದಲ್ಲಿದೆ. ಕೋಟಿಗಟ್ಟಲೇ ವ್ಯವಹಾರ ನಡೆಯುತ್ತಿದೆ.‌ ಶಾಲಾ-ಕಾಲೇಜು ಮಟ್ಟದವರೆಗೆ ಬಂದಿರೋದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಡ್ರಗ್ಸ್-ಸೆಕ್ಸ್ ಮಾಫಿಯಾ ಕೆಲಸ ಮಾಡುತ್ತಿದೆ ಎಂದು 2009ರಲ್ಲೇ ನಾನು ಹೇಳಿದ್ದೆ. 2009ರಲ್ಲಿ ಒಂದು ಪಬ್ ಮೇಲೆ ದಾಳಿ ಮಾಡಿದ್ದೆವು, ಅವತ್ತು ಅಲ್ಲಿ ಡ್ರಗ್ಸ್ ಕೆಲಸ ಮಾಡುತ್ತಿತ್ತು. ಸರ್ಕಾರ ಆ ವಿಷಯದ ಬಗ್ಗೆ ಹೆಚ್ಚು ಒತ್ತು ಕೊಡದೆ ನನ್ನನ್ನು ಟಾರ್ಗೆಟ್ ಮಾಡಿಕೊಂಡಿತ್ತು ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net