

ಬೆಂಗಳೂರು: ಸ್ಯಾಂಡಲ್ವುಡ್ನ ಹಲವು ನಟ-ನಟಿಯರು ಮತ್ತು ನಿರ್ದೇಶಕರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ. ಈ ಮಾಫಿಯಾದ ಹಿಂದೆ ರಾಜಕಾರಣಿಗಳು, ಮಾಡೆಲ್ ಏಜೆನ್ಸಿಗಳು ಎಲ್ಲರೂ ಭಾಗಿಯಾಗಿದ್ದಾರೆ. ಆ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ನಾಲ್ಕು ತಿಂಗಳ ಹಿಂದೆ ನಟ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ರ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಭಾರಿ ತಲ್ಲಣ ಮೂಡಿಸಿತ್ತು. ಇದೀಗ ಡ್ರಗ್ಸ್ ಕೇಸ್ ವಿಚಾರವಾಗಿ ಇಂದ್ರಜಿತ್ ಅಸಮಾಧಾನ ಹೊರಹಾಕಿದ್ದಾರೆ.
'ಶಕೀಲ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಪ್ರಕರಣವನ್ನ ಎರಡು ರೀತಿ ನೋಡಬಹುದು. ಮೊದಲು ಈ ಪ್ರಕರಣ ಹೊರಗೆ ಬಂದಾಗ ಕೆಲವರು ಒಪ್ಪಿಕೊಂಡಿರಲಿಲ್ಲ. ಈಗ ಹಲವರು ಅರೆಸ್ಟ್ ಆಗಿದ್ದಾರೆ. ಈ ಬಗ್ಗೆ ನಾನು ಮಾತನಾಡಿದ್ದು ಯಾಕೆ ಅಂತ ಅವರಿಗೆಲ್ಲ ಅರ್ಥ ಆಗಿದೆ. ಇಡೀ ಕರ್ನಾಟಕಕ್ಕೆ ಈ ಪ್ರಕರಣದಿಂದ ಮೆಸೇಜ್ ಸಿಕ್ಕಿದೆ. ತನಿಖೆ ನಡೆಯುತ್ತಿದೆ. ಆದರೆ ಜನರು ಹಲವು ಪ್ರಶ್ನೆ ಕೇಳುತ್ತಿದ್ದಾರೆ. 'ಬರೀ ನಟಿಯರು ಮಾತ್ರ ಡ್ರಗ್ಸ್ ತಗೋಳೋದಾ? ನಟರು ತೆಗೆದುಕೊಂಡಿಲ್ವಾ?' ಎನ್ನುತ್ತಿದ್ದಾರೆ. ನಾನೂ ಅದನ್ನೇ ಕೇಳುವೆ. 'ಡ್ರಗ್ ಹಿನ್ನೆಲೆ ಇರುವವರನ್ನ ಏಕೆ ಅರೆಸ್ಟ್ ಮಾಡಿಲ್ಲ?' ಎಂದರು. ಡ್ರಗ್ಸ್ ಪ್ರಕರಣದ ತನಿಖೆ ಬಗ್ಗೆ ನನಗೂ ಅಸಮಧಾನ ಇದೆ. ಇನ್ನೂ ಸರಿಯಾದ ತನಿಖೆ ನಡೆದಿಲ್ಲ ಎಂದರು. ಇದನ್ನೂ ಓದಿರಿ ಸೆಕ್ಸ್ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ಡ್ರಗ್ಸ್ ಕೇಸ್ನಲ್ಲಿ ಚಂದನವನದ ಮಾದಕ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ಬಹುಭಾಷಾ ನಟಿ ಸಂಜನಾ ಗಲ್ರಾನಿ ಕೂಡ ಜೈಲು ಪಾಲಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಸದ್ಯ ಸಂಜನಾಗೆ ಜಾಮೀನು ಸಿಕ್ಕಿದೆ.
ಇನ್ನು ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ವುಡ್ನ ಕೆಲ ನಟ-ನಟಿಯರು ಇದ್ದಾರೆ. ಆ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದಿದ್ದ ಇಂದ್ರಜಿತ್ ಲಂಕೇಶ್ರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಯನ್ನೂ ನಡೆಸಿದ್ದರು.