

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿನ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ವೈಭವ್ ಜೈನ್ನ ಎಕ್ಸ್ಕ್ಲ್ಯೂಸಿವ್ ಸ್ಟೋರಿ ಇದು. ಸಿಸಿಬಿ ಕಸ್ಟಡಿಯಲ್ಲಿ ಇದ್ದುಕೊಂಡೇ ಪೊಲೀಸರ ಮೊಬೈಲ್ನಿಂದಲೇ ಗರ್ಲ್ ಫ್ರೆಂಡ್ಗೆ ಕಾಲ್ ಮಾಡಿದ್ದಾನೆ. ಈತನ ಪತ್ನಿ ಮರುದಿನ ಸಿಸಿಬಿ ಕಚೇರಿಗೆ ಬಂದಾಗಲೇ ಗೊತ್ತಾಗಿದ್ದು, ವೈಭವ್ನ ಖತರ್ನಾಕ್ ಪ್ಲಾನ್.
ಡ್ರಗ್ಸ್ ಕೇಸ್ನಲ್ಲಿ ವೈಭವ್ ಜೈನ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ 'ಸಾರ್, ಇಂದು ನನ್ನ ವೆಡ್ಡಿಂಗ್ ಆನಿವರ್ಸರಿ. ಹೆಂಡತಿಗೆ ವಿಶ್ ಮಾಡ್ಬೇಕು. ಸ್ವಲ್ಪ ಮೊಬೈಲ್ ಕೊಡಿ ಅಂತಾ ಪೊಲೀಸರನ್ನು ಕೇಳಿದ್ದ. ಅದರಂತೆ ಪೊಲೀಸರೂ ಮೊಬೈಲ್ ಕೊಟ್ಟರು. ಅಲ್ಲೇ ಕಾಲ್ ಮಾಡಿದ ಆರೋಪಿ, ವಿಶ್ ಮಾಡಿ ಮಾತನಾಡಿದ್ದ. ಆದರೆ ಅಸಲಿಗೆ ಆತ ಕಾಲ್ ಮಾಡಿದ್ದು ಪತ್ನಿಗಲ್ಲ! ಈ ಸತ್ಯ ಸ್ವತಃ ಆತನ ಹೆಂಡತಿಯಿಂದಲೇ ಹೊರಬಿದ್ದಿದೆ. ಇದನ್ನೂ ಓದಿರಿ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್
ಅಸಲಿಗೆ ವೈಭವ್ ಫೋನ್ ಮಾಡಿದ್ದಾದರೂ ಯಾರಿಗೆ ಗೊತ್ತಾ? ಗರ್ಲ್ ಫ್ರೆಂಡ್ ಗೀತಿಕಾ ಬಿಂದಾನಿಗೆ. ಲವ್ ಆನಿವರ್ಸರಿ ಪ್ರಯುಕ್ತ ವಿಶ್ ಮಾಡಲು ಹೆಂಡತಿಯ ಹೇಸರೇಳಿಕೊಂಡು ಪೊಲೀಸರಿಂದ ಮೊಬೈಲ್ ಪಡೆದಿದ್ದ. ಮಿಸ್ ಸೌತ್ ಆಗಿದ್ದ ಗೀತಿಕಾ ಬಿಂದಾನಿಯೇ ವೈಭವ್ನ ಪಾರ್ಟಿ ಪಾಟ್ನರ್. ಈಕೆಗಾಗಿಯೇ ಹೆಂಡ್ತಿ ಜೊತೆ ಗಲಾಟೆ ಮಾಡ್ಕೊಂಡಿದ್ದ.
ನಟಿ ಸಂಜನಾ ಗಲ್ರಾನಿ ಮತ್ತು ಡ್ರಗ್ಸ್ ಪೆಡ್ಲರ್ ರಾಹುಲ್ ಜತೆಯೂ ವೈಭವ್ ಜೈನ್ ಮತ್ತು ಗೀತಿಕಾ ಬಿಂದಾನಿ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಫೋಟೋಗಳು ಲಭ್ಯವಾಗಿವೆ. ಸದ್ಯ ವೈಭವ್ ಗರ್ಲ್ ಫ್ರೆಂಡ್ ಗೀತಿಕಾ ಬಿಂದಾನಿಯನ್ನೂ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. (ದಿಗ್ವಿಜಯ ನ್ಯೂಸ್)