

ಕೊಪ್ಪಳ: ರಾಜ್ಯದಲ್ಲಿ ಉಪ ಚುನಾವಣೆ ಸಮರದ ನಡುವೆಯೂ ಭಾರೀ ಸದ್ದು ಮಾಡುತ್ತಿದೆ ಡ್ರಗ್ಸ್ ಕೇಸ್. ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರ ಬೀಳುತ್ತಲೇ ಇದೆ. ಬಗೆದಷ್ಟು ಆಳ ಎಂಬಂತಾಗುತ್ತಿದೆ ಡ್ರಗ್ಸ್ ಮಾಫಿಯಾ ನಂಟು. ಇದೀಗ ಕಾಂಗ್ರೆಸ್ ಶಾಸಕರೊಬ್ಬರು, 'ಎಲ್ಲ ಕ್ಷೇತ್ರದ ಮನುಷ್ಯರೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳೂ ಹೊರತಾಗಿಲ್ಲ' ಎಂದಿದ್ದಾರೆ.
ಸಮಾಜದಲ್ಲಿ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿ ಈಗ ಅದೇ ನಟ-ನಟಿಯರು ಡ್ರಗ್ಸ್ ಅನ್ನು ಹೆಚ್ಚು ಉಪಯೋಗ ಮಾಡುತ್ತಿರುವುದು ತಪ್ಪು. ಮಾಧ್ಯಮದವರು ಇದನ್ನು ಪ್ರಸಾರ ಮಾಡಬಾರದು. ಅವರಿಗೆ ಅಂಜಿಕೆ ಆಗಬೇಕು. ಗೌಪ್ಯವಾಗಿ ಶಿಕ್ಷೆ ನೀಡಬೇಕು ಎಂದು ಹೇಳಿದರು.